ವಿಜಯಪುರದಲ್ಲಿ 'ನಾಡದೇವಿ ಉತ್ಸವ'ಕ್ಕೆ ಭರದ ಸಿದ್ಧತೆ

ವಿಜಯಪುರ, 8 : ವಿಜಯಪುರದಲ್ಲಿ ನಾಡದೇವಿ ಉತ್ಸವಕ್ಕೆ ಭರದ ಸಿದ್ಧತೆಗಳು ನಡೆದಿದ್ದು, ನಗರದ ವಿವಿಧ ಉತ್ಸವ ಮಂಡಳಿಗಳು ನಾಡದೇವಿ ಮೂತರ್ಿ ಪ್ರತಿಷ್ಠಾಪನೆಗಾಗಿ ಭವ್ಯವಾದ ವೇದಿಕೆ, ಮಂಟಪ  ನಿಮರ್ಾಣದಲ್ಲಿ ನಿರತವಾಗಿವೆ.

                ನಗರದಲ್ಲಿ ಪ್ರತಿ ವರ್ಷವೂ ನಾಡದೇವಿ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷ ವಿಭಿನ್ನವಾಗಿ ಹಾಗೂ ಅತ್ಯಂತ ವೈಶಿಷ್ಠ್ಯಪೂರ್ಣವಾಗಿ ನಾಡದೇವಿ ಉತ್ಸವವನ್ನು ಆಚರಿಸುವ ನಗರದ ಶಹಾಪೇಟಿ ಬಡಾವಣೆಯ ಶ್ರೀ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿಯವರು ಬಾರಿಯೂ ಸಹ ಗಮನ ಸೆಳೆಯುವ ಆಕರ್ಷಕ ವೇದಿಕೆ ನಿಮರ್ಾಣದಲ್ಲಿ ತೊಡಗಿದ್ದಾರೆ.

                ಬಾಲಿವುಡ್ನಲ್ಲಿ ಅತ್ಯಂತ ಗಮನ ಸೆಳೆದ, ದುಬಾರಿ ವೆಚ್ಚದ ಸೆಟ್ನಲ್ಲಿ ನಿಮರ್ಾಣಗೊಂಡಿದ್ದ `ಬಾಹುಬಲಿ' ಚಲನಚಿತ್ರದ ದೃಶ್ಯ ವೈಭವ ನಿರೂಪಿಸುವ ಭವ್ಯ ವೇದಿಕೆ ನಿಮರ್ಾಣಗೊಳ್ಳುತ್ತಿದೆ. ಮಹಾರಾಷ್ಟ್ರದ ಕೊಲ್ಹಾಪೂರದ ಢಾಂಗೆ ಹಾಗೂ ತಂಡದವರು ಭವ್ಯ ವೇದಿಕೆ ರೂಪಿಸುತ್ತಿದ್ದು, ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಕಳೆದ ದಿನಾಂಕ 02 ರಿಂದಲೇ ಭವ್ಯ ವೇದಿಕೆ ರೂಪಿಸುವ ಕಾರ್ಯದಲ್ಲಿ ಕಲಾವಿದರು ನಿರತರಾಗಿದ್ದಾರೆ, ವೈಭವಯುತ ವೇದಿಕೆಯ ಮೆರಗು ಹೆಚ್ಚಿಸಲು ವಿಶೇಷ ಎಲ್ಇಡಿ ಲೈಟ್ಗಳನ್ನು ಅಳವಡಿಸುವ ಕಾರ್ಯವೂ ನಡೆಯುತ್ತಿದೆ.

                ಪ್ರತಿ ವರ್ಷವೂ ಅರ್ಥಪೂರ್ಣವಾಗಿ ಉತ್ಸವ ಆಚರಿಸಲಾಗುತ್ತಿದೆ, ಬಾರಿಯೂ ಬಾಹುಬಲಿ ಚಿತ್ರದ ದೃಶ್ಯ ವೇದಿಕೆಯಲ್ಲಿ ರೂಪಿಸಲಾಗಿದೆ, ಸುಮಾರು 08 ಲಕ್ಷ ರೂ. ಖಚರ್ಾಗಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ರಾಜೇಶ ದೇವಗಿರಿ ಮಾಹಿತಿ ನೀಡಿದರು

                ಇನ್ನೂ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿಯವರು ಸಹ ಪ್ರತಿ ವರ್ಷ 101 ಕೆಜಿ ಬೆಳ್ಳಿಯ ಅಂಭಾಭವಾನಿ ಮೂತರ್ಿ ಪ್ರತಿಷ್ಠಾಪಿಸುವ ಜೊತೆಗೆ ಬಾರಿ ಭವ್ಯವಾದ ಕಲ್ಕತ್ತಾದ ಕಾಳಿ ಮಂದಿರವನ್ನು ನಿಮರ್ಿಸುತ್ತಿದ್ದಾರೆ. ಕಳೆದ ದಿನಾಂಕ 03 ರಿಂದ ಕಲಾವಿದರು ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಮಹಾರಾಷ್ಟ್ರದ ಕೃಷ್ಣಾ ಹಾಗೂ ತಂಡದವರು ದೇವಾಲಯದ ಮಾದರಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.

                ವಿಜಯಪುರ ನಗರದ ಅತ್ಯಂತ ಹಳೆಯ ಉತ್ಸವ ಸಮಿತಿಗಳಲ್ಲಿ ಒಂದಾಗಿರುವ ಮಠಪತಿಗಲ್ಲಿಯ ಆದಿಶಕ್ತಿ ತರುಣ ಮಂಡಳಿ ಸಹ ನಾಡದೇವಿ ಉತ್ಸವಕ್ಕೆ ಭರದ ಸಿದ್ಧತೆ ನಡೆಸುತ್ತಿದೆ, 1963 ರಲ್ಲಿ ಅಸ್ತಿತ್ವಕ್ಕೆ ಬಂದ ಸಮಿತಿ ಪ್ರತಿ ವರ್ಷ ಅರ್ಥಪೂರ್ಣವಾಗಿ ನವರಾತ್ರಿ ಉತ್ಸವ ಆಚರಿಸುತ್ತಿದೆ. ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಶಾಸ್ತ್ರೋಕ್ತ ಪೂಜೆ ಸೇರಿದಂತೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಧ್ಯಕ್ಷ ಸಂ.ಗು. ಸಜ್ಜನ ತಿಳಿಸಿದರು.