ಸಾಂಗಲಿಯಲ್ಲಿ ಸಂತ ಸಮಾಗಮ ಕಾರ್ಯಕ್ರಮದ ಸಿದ್ಧತೆ

ಸಾಂಗಲಿಯಲ್ಲಿ ಸಂತ ಸಮಾಗಮ ಕಾರ್ಯಕ್ರಮದ ಸಿದ್ಧತೆ Preparations for the Sant Samagama program in Sangli

                   ಕಾಗವಾಡ 30: ಸದ್ಗುರು ಮಾತಾ ಸುದೀಕ್ಷಾ ಜೀ ಮಹಾರಾಜ್ ಮತ್ತು ಗೌರವಾನ್ವಿತ ನಿರಂಕಾರಿ ರಾಜ ಪಿತರಮಿತ್ ಜಿಯವರ ಪವಿತ್ರ ಆಶ್ರಯದಲ್ಲಿ ಮಹಾರಾಷ್ಟ್ರದ ಸಾಂಗಲಿಯಲ್ಲಿ 59ನೇ ವಾರ್ಷಿಕ ನಿರಂಕಾರಿ ಸಂತ ಸಮಾಗಮದ ಅದ್ಧೂರಿ ಆಚರಣೆಯನ್ನು ಜ. 24, 25, ಮತ್ತು26 ರಂದು ಆಯೋಜಿಸಲಾಗಿದ್ದು, ಸುಮಾರು 15 ಲಕ್ಷ ಜನ ಸೇರವು ನೀರೀಕ್ಷೆ ಇದೆ ಎಂದು ಸೇವಾದಳದ ನಿರ್ದೇಶಕ ಎಸ್‌.ಕೆ. ಜುನೇಜಾ ಹೇಳಿದರು. ಅವರು ರವಿವಾರ ದಿ. 28 ರಂದು ಸಾಂಗಲಿ ಕಾರ್ಯಕ್ರಮ ಸಿದ್ದತೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತಿದ್ದರು. ಸುಮಾರು 350 ಎಕರೆಗಳ ಬೃಹತ್ ಆವರಣದಲ್ಲಿ ಆಯೋಜಿಸಲಾಗುತ್ತಿರುವ ಈ ಭವ್ಯ ಆಧ್ಯಾತ್ಮಿಕ ಸಂತ ಸಮಾಗಮವು ಸಾಂಗಲಿ ನಗರಕ್ಕೆ ಒಂದು ಐತಿಹಾಸಿಕ ಕ್ಷಣವಾಗಲಿದೆ. ಪ್ರತಿಯೊಬ್ಬ ದೇಶದ ಭಕ್ತರು ನಿರಂಕಾರಿ ಸಂತ ಸಮಾಗಮಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

                  ಪ್ರತಿಯೊಬ್ಬ ಭಕ್ತರು ಸಂತೋಷ ಮತ್ತು ಉತ್ಸಾಹದಿಂದ ಭಾಗವಹಿಸುವರು ಎಂದು ಹೇಳಿದರು.ಈ ದೈವಿಕ ಸಂತ ಸಮಾಗಮ ಸಂಪೂರ್ಣವಾಗಿ ಸಫಲಗೊಳಿಸಲು ಮಹಾರಾಷ್ಟ್ರ-ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ನಿರಂಕಾರಿ ಸೇವಾದಳದ ಸ್ವಯಂಸೇವಕರು ಮತ್ತು ಸಾವಿರಾರು ಭಕ್ತರು ಭಕ್ತಿಯಿಂದ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಈ ವೇಳೆ ಮಿಷನ್ ಪ್ರಚಾರ ವಿಭಾಗದ ಸದಸ್ಯರಾದ ಮೋಹನ ಛಾಬ್ರಾ, ಸಂಯೋಜಕರಾದ ಶೇಮರಾಜ ಶರ್ಮಾ, ಸಮಾಗಮ್ ಸಮಿತಿಯ ಅಧ್ಯಕ್ಷ ಶಂಭುನಾಥ್ ತಿವಾರಿ, ನಂದಕುಮಾರ್ ಝಾಂಬ್ರೆ ಸೇರಿದಂತೆ ಮಹಾರಾಷ್ಟ್ರದ ಎಲ್ಲಾ ವಲಯ ಉಸ್ತುವಾರಿಗಳು ಮತ್ತು ಮಹಾರಾಷ್ಟ್ರದ ಸೇವಾದಳ ಪ್ರಾದೇಶಿಕ ನಿರ್ದೇಶಕರು ಉಪಸ್ಥಿತರಿದ್ದರು.ಫೋಟೋ ಶೀರ್ಷಿಕೆ: ಮಹಾರಾಷ್ಟ್ರದ  ಸಾಂಗಲಿಯಲ್ಲಿ ನಡೆದ ಸಂತ ಸಮಾಗಮ ಕಾರ್ಯಕ್ರಮ ಸಿದ್ದತೆ ಕಾರ್ಯಕ್ಕೆ ಎಸ್‌.ಕೆ. ಜುನೇಜಾ ಚಾಲನೆ ನೀಡುತ್ತಿರುವ ಚಿತ್ರ.