ಲೋಕದರ್ಶನ ವರದಿ
ಹಾವೇರಿ 15: ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮಡಿವಾಳ ಸಮಾಜವು ಬಹುಪಾಲು ತಮ್ಮ ಕುಲ ಕಸುಬು ಮತ್ತು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು, ಆಥರ್ಿಕವಾಗಿ ಬಹಳಷ್ಟು ಹಿಂದುಳಿದಿದೆ.
ಈ ಸಮಾಜದಲ್ಲಿನ ಪಾಲಕರು/ಪೋಷಕರು ತಮ್ಮ ಮಕ್ಕಳಿಗೆ
ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮುಖ್ಯವಾಹಿನಿಗೆ ಬರಬೇಕಾದ ಅನಿವಾರ್ಯತೆ ಇದೆ ಎಂದು ಚಿತ್ರದುರ್ಗದ ಮಾಚಿದೇವ ಮಹಾ ಸಂಸ್ಥಾನಮಠದ ಬಸವ ಮಾಚಿದೇವ
ಮಹಾಸ್ವಾಮಿಗಳು ಹೇಳಿದರು.
ಸ್ಥಳೀಯ ಕೆ.ಇ.ಬಿ. ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ
ಜಿಲ್ಲಾ ಬೃಹತ್ ಸಮಾವೇಶ, ಹಾವೇರಿ ಜಿಲ್ಲೆಯ ನೂತನ ಶಾಸಕರುಗಳಿಗೆ ಸನ್ಮಾನ, ಜನೇವರಿ 5 ರಿಂದ ನಡೆಯುವ
ಬೃಹತ್ ಜನಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ ಹಾಗೂ
ರಾಜ್ಯಾಧ್ಯಕ್ಷ ಸಿ. ನಂಜಪ್ಪನವರ 56ನೇ ಜನ್ಮ ದಿನಾಚರಣೆ ಪ್ರಯುಕ್ತ ಮಡಿವಾಳ ಕುಲಬಾಂಧವರಿಗೆ
ಇಸ್ತ್ರೀ ಪೆಟ್ಟಿಗೆ ವಿತರಣೆ, ವೃದ್ಧರಿಗೆ ಬ್ಲಾಕೇಟ್, ವಿದ್ಯಾಥರ್ಿಗಳಿಗೆ ನೋಟ್ ಪುಸ್ತಕ ವಿತರಣಾ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಮಾಜಕ್ಕೆ
ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿಯವರೆಗೆ
ಯಾವುದೇ ರೀತಿಯ ಹೆಚ್ಚಿನ ಸಹಾಯ ಸಹಕಾರ ಸರಕಾರಗಳಿಂದ ದೊರೆಯದ ಕಾರಣ ಆಥರ್ಿಕವಾಗಿ, ಶೈಕ್ಷಣಿಕವಾಗಿ,
ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಾತಿನಿಧ್ಯಗಳಿಲ್ಲದೇ ಹಕ್ಕುಗಳನ್ನು ಪಡೆಯವಲ್ಲಿ ವಂಚನೆಗೆ ಒಳಪಡುವಂತಾಗಿದೆ.
ನಿರಂತರ ಹೋರಾಟ ಮಾಡಿದರೂ ಸಹ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ಸರಕಾರಗಳು
ಮೀನಾಮೇಷ ಎಣಿಸುತ್ತಿವೆ ಎಂದರು.
ಚಿತ್ರದುರ್ಗದಲ್ಲಿ ಜನೇವರಿ 5, 6ನೇ ದಿನಾಂಕಗಳಂದು ಬೃಹತ್
ಜಾಗೃತಿ ಮಹಾ ಸಮ್ಮೇಳನ ಹಾಗೂ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವು ಜರುಗಲಿದೆ.
1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ
ಇದೆ. ಈ ಒಂದು ಮಹತ್ತರವಾದ ಮಹಾ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂದವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ. ನಂಜಪ್ಪನವರು ಮಾತನಾಡಿ
ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ಈ ಹಿಂದೆ ಅಧಿಕಾರದಲ್ಲಿದ್ದ ಅನೇಕ ಸರಕಾರಗಳು ಅಸಹಾಕ ನೀಡುವುದರ ಜೊತೆಗೆ
ಸಮಾಜವನ್ನು ಕಡೆಗಣಿಸಿದವು. ಈಗಾಗಲೇ ದೇಶದ 17ರಾಜ್ಯಗಳಲ್ಲಿ ನಮ್ಮ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಿದ್ದಾರೆ.
ಶೀಘ್ರವೇ ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವ ಶಿಫಾರಸ್ಸನ್ನು ಮಾಡದಿದ್ದರೆ ರಾಜ್ಯಾಧ್ಯಂತೆ ಹೆದ್ದಾರಿ
ತಡೆದು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಸಿಎಂ. ಉದಾಸಿ ಸ್ಥಳೀಯ ಶಾಸಕ ನೆಹರು ಓಲೇಕಾರ, ಬ್ಯಾಡಗಿ
ಶಾಸಕ ವಿರುಪಾಕ್ಷಪ್ಪ ಬಳ್ಳಾರಿಯವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಅತಿ
ಕಡುಬಡವರಿಗೆ 64 ಇಸ್ತ್ರೀ ಪೆಟ್ಟಿಗೆ, ವಿದ್ಯಾಥರ್ಿಗಳಿಗೆ 800 ನೋಟ ಪುಸ್ತಕ ಹಾಗೂ ವೃದ್ಧರಿಗೆ 164 ಬ್ಲಾಂಕೇಟ್ಗಳನ್ನು ಉಚಿತವಾಗಿ ವಿತರಿಸಲಾಯಿತು. ಜೊತೆಗೆ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ರಾಜ್ಯ ಕಾರ್ಯದಶರ್ಿ ರಂಗಸ್ವಾಮಯ್ಯ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ
ವಿಜಯಲಕ್ಷ್ಮೀ ಆಂಜನಪ್ಪ, ಕೆ.ವಿ ದೃವಕುಮಾರ, ಎಂ.ಚಿರಂಜೀವಿ, ಸೂಗೂರಪ್ಪ ಮೂಲಿಮನಿ, ರಾಜಣ್ಣ ಆರ್.ವ್ಹಿ,
ಜಿ. ಸುಬ್ರಹ್ಮಣ್ಯ, ಹೆಚ್ ಮಲ್ಲಯ್ಯ, ವಿ. ಪುಟ್ಟರಾಜು, ಚಂದ್ರಣ್ಣ ಚಳಗೇರಿ, ಅಶೋಕ ಮಡಿವಾಳರ, ಪದ್ಮಾ
ವತರ್ೂರ, ಜಯಶ್ರೀ ಸುರೇಶ, ಈರಣ್ಣ ದೊಡ್ಡಮನಿ, ಸುರೇಶ ಚಳಗೇರಿ, ದೇವರಾಜ ಮಡಿವಾಳರ, ಶಂಕರ ಮಾಕನೂರ
ಮಾತನಾಡಿದರು.
ಜಿಲ್ಲಾಧ್ಯಕ್ಷ ಸುರೇಶ ಫಕ್ಕೀರಪ್ಪ ಮಡಿವಾಳರ ಪ್ರಾಸ್ತಾವಿಕವಾಗಿ
ಮಾತನಾಡಿದರು. ಜಿಲ್ಲಾ ಕಾರ್ಯದಶರ್ಿ ಸುರೇಶ ಹನುಮಂತಪ್ಪ
ಮಡಿವಾಳರ ಸ್ವಾಗತಿಸಿದರು. ಅಶೋಕ ಗೊಲ್ಲರ ನಿರೂಪಿಸಿದರು. ನ್ಯಾಯವಾದಿ ಕುಮಾರ ಮಡಿವಾಳರ ವಂದಿಸಿದರು.