ಸರ್ಕಾರಿ ನೌಕರರ ಸಂಘದಿಂದ ಪೂರ್ವಭಾವಿ ಸಭೆ
Preliminary meeting by the Government Employees Association
ಲೋಕದರ್ಶನ ವರದಿ
ಕೊಪ್ಪಳ 28 : ನಗರದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭದ ಪೂರ್ವಭಾವಿ ಸಭೆಜರುಗಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಜುಮ್ಮನ್ನವರ ಮಾತನಾಡಿ ಏಪ್ರಿಲ್ 30 ರಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಅಡಿಟೋರಿಯಂ ಹಾಲನಲ್ಲಿ ಜರುಗಲಿರುವ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿ, ಸರ್ಕಾರಿ ನೌಕರರ ಸಂಘಟನೆ ಮೇಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆಓಓಡಿ ಸೌಲಭ್ಯವಿದೆ, ಸರ್ಕಾರಿ ನೌಕರರಿಂದ ರಕ್ತದಾನ ಶಿಬಿರ ಏರಿ್ಡಸಿದೆ, ಹಾಗೂ ಸರ್ಕಾರಿ ನೌಕರರಿಗೆ ಉಚಿರ ಆರೋಗ್ಯತಪಾಸಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಖಾದಿ ವಸ್ತ್ರಧಾರೆಯೊಂದಿಗೆ ಭಾಗವಹಿಸಿ, 2024 ನೇ ಸಾಲಿನಲ್ಲಿ 10, 2025 ನೇ ಸಾಲಿನಲ್ಲಿ 10, 2026 ನೇ ಸಾಲಿನಲ್ಲಿ 10 ಒಟ್ಟು 30 ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ನೀಡಲಿದ್ದಾರೆ. ಅದೇ ದಿನ ಮಧ್ಯಾಹ್ನ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಇರಲಿದೆ.
ನಾವೆಲ್ಲರೂ ಕೂಡಿ ಯಶಸ್ವಿಗೊಳಿಸೋಣ ಎಂದರು. ಈ ಸಂದರ್ಭದಲ್ಲಿ ತೀರ್ಥದೇಸಾಯಿ, ರಾಜ್ಯ ಪರಿಷತ್ ಸದಸ್ಯ ಆಸೀಫ್ ಅಲಿ, ಹೇಮಣ್ಣ ಕವಲೂರ, ಕಾರ್ಯಾಧ್ಯಕ್ಷ ಬೀರ್ಪ ಅಂಡಗಿ, ಗೌರವ ಅಧ್ಯಕ್ಷ ಸಿದ್ಧಪ್ಪ ಮೇಳಿ, ಪದಾಧಿಕಾರಿಗಳಾದ ಸುರೇಶ ಮೋರಗೇರಿ, ಗೋಪಾಲ ಮುಂಡರಗಿ, , ಮತ್ತಿತ್ತರರು ಹಾಜರಿದ್ದರು. ಪ್ರಾಣೇಶ ಪೂಜಾರ ಆಶಯ ನುಡಿಗಳನ್ನಾಡಿದರು, ವೈದ್ಯಕೀಯ ವೆಚ್ಚ ಮರುಪಾವತಿ, ಕರ್ನಾಟಕ ಆರೋಗ್ಯ ಸಂಜೀವಿನ ಸಮರ್ಕ ಅನುಷ್ಠಾನ ಕುರಿತು ಚರ್ಚೆಗಳಾದವು. ರಾಮಣ್ಣ ಶ್ಯಾವಿ ಸ್ವಾಗತಿಸಿದರು, ಪ್ರಧಾನಕಾರ್ಯದರ್ಶ ಶಿವಪ್ಪ ಜೋಗಿ ನಿರೂಪಿಸಿದರು.
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 