ಶಾಲಾ, ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ: ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು 26: ರಾಜ್ಯದ
ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ
ಪೀಠಿಕೆ ಓದುವುದನ್ನು
ಕಡ್ಡಾಯ ಮಾಡಿದ್ದೇವೆ
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಮಂಗಳವಾರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
ಸಿಎಂ ಸಿದ್ದರಾಮಯ್ಯ ಅವರು, ಎಲ್ಲ
ಮಕ್ಕಳಿಗೂ ಸಂವಿಧಾನ
ಅರ್ಥವಾಗಬೇಕು. ಹೀಗಾಗಿ
ಶಾಲೆಗಳಲ್ಲೇ ಸಂವಿಧಾನ
ಪೀಠಿಕೆ ಓದಿಸುತ್ತಿದ್ದೇವೆ ಎಂದರು.
ಸಂವಿಧಾನ ಅಂಗೀಕಾರವಾಗಿ ಇಂದಿಗೆ 75 ವರ್ಷ
ಆಯ್ತು. ಈ
ದಿನವನ್ನು ನಾವು
ಸಂವಿಧಾನ ದಿನ
ಎಂದು ಆಚರಣೆ
ಮಾಡುತ್ತಿದ್ದೇವೆ. ಕೇಂದ್ರ,
ರಾಜ್ಯ ಮತ್ತು
ಸ್ಥಳೀಯ ಸಂಸ್ಥೆಗಳು
ಸಂವಿಧಾನದಡಿಯಲ್ಲೇ ನಡೆಯಬೇಕು
ಎಂದರು.
ಸಂವಿಧಾನ ಜಾರಿಗೆ
ಬಂದು ಮುಂದಿನ
ವರ್ಷ ಜನವರಿಗೆ
75 ವರ್ಷ ತುಂಬಲಿದೆ.
ದೀರ್ಘಕಾಲದ ಶಾಂತಿಯಲ್ಲಿರುವ ಸಂವಿಧಾನ ಎಂದರೆ
ಅದು ಭಾರತದ
ಸಂವಿಧಾನ. ಸಂವಿಧಾನ
ಎಷ್ಟೇ ಚೆನ್ನಾಗಿದ್ದರೂ ಒಳ್ಳೆಯವರ ಕೈಯಲ್ಲಿ
ಇದ್ದರೆ ಒಳ್ಳೆಯದಾಗುತ್ತದೆ. ಕೆಟ್ಟವರ ಕೈಯಲ್ಲಿ
ಇದ್ದರೆ ಕೆಟ್ಟದಾಗುತ್ತೆ ಅಂತ ಬಿಆರ್ ಅಂಬೇಡ್ಕರ್ ಅವರು
ಹೇಳಿದ್ದಾರೆ ಎಂದು
ಸಿಎಂ ತಿಳಿಸಿದರು.
ನಮ್ಮ ದೇಶದಲ್ಲಿ
ಸಂವಿಧಾನ ವಿರೋಧಿಗಳಿದ್ದರು. ವೀರ್ ಸಾವರ್ಕರ್, ಆರ್ಎಸ್ಎಸ್ನ
ಸರ ಸಂಘಚಾಲಕರಾಗಿದ್ದ ಎಂಎಸ್ ಗೋಲ್ವಾಲ್ಕರ್ ವಿರೋಧ
ಮಾಡಿದ್ದರು. ಜಗತ್ತಿನ
ಅನೇಕ ರಾಷ್ಟ್ರಗಳ
ಸಂವಿಧಾನದ ಅಭ್ಯಾಸ,
ಅನುಭವದ ಆಧಾರದ
ಮೇಲೆ ಸಂವಿಧಾನ
ರಚನೆ ಮಾಡಲಾಗಿದೆ.
ಇದು ಲಿಖಿತ
ಸಂವಿಧಾನ. ಇದಕ್ಕಿಂತ
ಮೊದಲು ಅಲಿಖಿತ
ಸಂವಿಧಾನ ಇತ್ತು.
ಅದು ಒಬ್ಬರು
ಮತ್ತೊಬ್ಬರನ್ನು ದ್ವೇಷಿಸುವ
ರೀತಿ ಇತ್ತು
ಎಂದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 