ಸಂಘಟನೆ ಯಶಸ್ವಿಯಾಗಬೇಕಾದರೆ ಪೂರ್ವ ಯೋಜನೆ ಮುಖ್ಯ: ಜಿಲ್ಲಾ ಸಂಚಾಲಕರು ಚಂದ್ರಶೇಖರ
ಲೋಕದರ್ಶನ ವರದಿ
ಕೊಪ್ಪಳ 14: ಪೂರ್ವ ಯೋಜನೆ ಮತ್ತು ಪೂರ್ಣ ಯೋಜನೆ ಎನ್ನುವ ಮಾತಿನಂತೆ ಯಾವುದೇ ಒಂದು ಕಾರ್ಯಕ್ರಮ ಅಥವಾ ಸಂಘಟನೆ ಯಶಸ್ವಿಯಾಗಬೇಕಾದರೆ ಪೂರ್ವ ಯೋಜನೆ ಬಹಳ ಮುಖ್ಯವಾಗುತ್ತದೆ ಎಂದು ರಾಷ್ಟೀಯ ಐಕ್ಯತಾ ಅಭಿಯಾನ ಕೊಪ್ಪಳ ಜಿಲ್ಲಾ ಸಂಚಾಲಕರು ಹಾಗೂ ಬಿಜೆಪಿ ರಾಷ್ಟೀಯ ಪರಿಷತ್ ಸದಸ್ಯರಾದ ಸಿ.ವಿ.ಚಂದ್ರಶೇಖರ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ರಾಷ್ಟ್ರೀಯ ಐಕ್ಯತಾ ಅಭಿಯಾನದ ಒಂದು ದೇಶ ಒಂದು ಸಂವಿಧಾನ 370 ಕಾಯರ್ಾಗಾರದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ ಆ ನಿಟ್ಟಿನಲ್ಲಿ ರಾಷ್ಟೀಯ ಐಕ್ಯತಾ ಅಭಿಯಾನವನ್ನು ರಾಷ್ಟ್ರ ಮಟ್ಟದಿಂದ ಬೂತ್ ಮಟ್ಟದವರೆಗೆ ತಲುಪಿಸುವ ಕಾರ್ಯ ಪ್ರತಿ ಬೂತ್ ಮಟ್ಟದಲ್ಲಿ ಆಗಬೇಕಿದೆ ಆದ್ದರಿಂದ ಸಂಚಾಲಕರು, ಸಹ ಸಂಚಾಲಕರು ಈ ಕುರಿತು ಪ್ರತಿಯೊಬ್ಬ ಕಾರ್ಯಕರ್ತರನ್ನು ನಿಮ್ಮೊಂದಿಗೆ ಜೋಡಿಸಿಕೊಂಡು ಪ್ರತಿ ಮನೆ ಮನೆಗೂ ನಮ್ಮ ಪಕ್ಷದ ಕಾರ್ಯ ಯೋಜನೆಗಳನ್ನು ತಲುಪಿಸಬೇಕಿದೆ, ಕಾಶ್ಮೀರದ 370 ರದ್ದತಿ ಕುರಿತಂತೆ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿದ್ದು ಆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟೀಯ ಐಕ್ಯತಾ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಶರಣಪ್ಪ ಬಣ್ಣದಬಾವಿ ಹಾಗೂ ಬಿಜೆಪಿ ಮುಖಂಡರಾದ ಡಾ. ಕೆ.ಜಿ ಕುಲಕಣರ್ಿ, ರಾಘವೇಂದ್ರ ಪಾನಘಂಟಿ, ಅಪ್ಪಣ್ಣ ಪದಕಿ, ಚಂದ್ರಶೇಖರ ಕವಲೂರ, ಚಂದ್ರಶೇಖರಗೌಡ ಹಲಗೇರಿ, ರಾಜು ಬಾಕಳೆ, ಡಿ.ಮಲ್ಲಣ್ಣ, ಹೇಮಲತಾ ನಾಯಕ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ರಾಷ್ಟ್ರೀಯ ಐಕ್ಯತಾ ಅಭಿಯಾನದ ಕೊಪ್ಪಳ ಜಿಲ್ಲೆಯ ಎಲ್ಲಾ ಮಂಡಲಗಳ ಸಂಚಾಲಕರು, ಸಹ ಸಂಚಾಲಕರು ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 