ಮುಂಗಾರು ಪೂರ್ವ ಮಳೆ : ಉತ್ತರ ಕನ್ನಡ ಜಿಲ್ಲೆಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ : ನಾಗರಾಜ್ ಹರಪನಹಳ್ಳಿ
Pre-monsoon rains: Agricultural activity in Uttara Kannada district has increased: Nagaraj Harapanah
ಕಾರವಾರ 22 : ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಬಿದ್ದ ಪರಿಣಾಮ ರೈತರ ಮೊಗದಲ್ಲಿ ಸಂತಸ ಅರಳಿದೆ. ಭೂಮಿ ಹದ ಮಾಡುವ ಕ್ರಿಯೆ ಆರಂಭವಾಗಿದೆ . ಘಟ್ಟದ ತಾಲೂಕುಗಳಾದ ಮುಂಡಗೋಡ, ಹಳಿಯಾಳ, ದಾಂಡೇಲಿ, ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಕೃಷಿ ಚಟುವಟಿಕೆ ಪ್ರಾರಂಭವಾಗಿವೆ. ಬಿತ್ತನೆಗೆ ಭೂಮಿ ಹದಗೊಳ್ಳತೊಡಗಿದೆ. ರೈತರಿಗೆ ಬಿತ್ತನೆ ಬೀಜದ ಲಭ್ಯತೆ ಇದೆ . ಆದರೆ ರಸ ಗೊಬ್ಬರದ ಕೊರತೆ ಕಾಡುವ ಚಿಂತೆ ಎದ್ದು ಕಾಣುತ್ತಿದೆ. ಅಮೆರಿಕಾ, ಇಸ್ರೆಲ್ ಇರಾನ್ ನಡುವಿನ ಯುದ್ಧ ಸಂಘರ್ಷದಿಂದ ರಸ ಗೊಬ್ಬರ ನೀರೀಕ್ಷಿತ ಮಟ್ಟದಲ್ಲಿ ಸಿಗಲಾರದು ಎಂಬ ಆತಂಕ ಇದ್ದೇ ಇದೆ . ಸಾವಯವ ಗೊಬ್ಬರದ ಸಂಗ್ರಹ ಇಟ್ಟುಕೊಂಡರೂ ಸಹ ರಸಗೊಬ್ಬರ ದಿಂದ ಫಸಲು ಚೆನ್ನಾಗಿ ಬಂದೀತು ಎಂಬ ಆಶಯ ರೈತರದ್ದು . ಉಳ್ಳ ರೈತರು ರಸ ಗೊಬ್ಬರ ಸಂಗ್ರಹ ಮಾಡಿಕೊಳ್ಳತೊಡಗಿದ್ದಾರೆ .
ಆದರೆ ಸಾಲ ಮಾಡಿ ರಸಗೊಬ್ಬರ ಖರೀದಿಸುವ ಬಡ ರೈತರಲ್ಲಿ ಚಿಂತೆ ಆವರಿಸಿದೆ. ಮುಂದಿನ ದಿನಗಳು ಹೇಗೆ ಎಂಬ ಭಯ ಇದ್ದೇ ಇದೆ. ಜಿಲ್ಲೆಯಲ್ಲಿ 58000 ಹೆಕ್ಟೇರ್ : ಜಿಲ್ಲೆಯಲ್ಲಿ 58000 ಹೆಕ್ಟೇರ್ ಭೂಮಿಯಲ್ಲಿ ಮೆಕ್ಕೆಜೋಳ, ಕಬ್ಬು, ಭತ್ತ ಬೆಳೆಯಲಾಗುತ್ತದೆ. ಘಟ್ಟದ ತಾಲ್ಲೂಕು ಗಳಲ್ಲಿ ಮೆಕ್ಕೆ ಜೋಳ, ಕಬ್ಬು ಹೆಚ್ಚಾಗಿ ಬೆಳೆದರೆ, ಕರಾವಳಿಯಲ್ಲಿ ಭತ್ತ ಪ್ರಧಾನ ಬೆಳೆ. ಉಳಿದಂತೆ ತೋಟಗಾರಿಕಾ ಬೆಳೆ 50000 ಹೆಕ್ಟೇರ್ ದಾಟುತ್ತದೆ. ರೈತ ಅಡಿಕೆ ಬಾಳೆ ಬೆಳೆಯನ್ನು ವಿಸ್ತಾರಿಸುವುದು ಸಹಜ. ರಸಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ 9000 ಟನ್ ಯೂರಿಯಾ, ಪೊಟಾಶ್, ಕಾಂಪ್ಲೆಕ್ಸ್ ಗೊಬ್ಬರ ದಾಸ್ತನು ಇದೆ. ರೈತರು ಗೊಬ್ಬರ ಖರೀದಿ ಆರಂಭವಾಗಿದೆ. ಜೂನ್ ತಿಂಗಳ ರಸಗೊಬ್ಬರ ಬೇಡಿಕೆ ಬಂದಿಲ್ಲ. ಜೂನ್ ಬೇಡಿಕೆಯ ರಸ ಗೊಬ್ಬರ ಬಂದರೆ ಕೊರತೆ ಆಗುವುದಿಲ್ಲ ಎಂದು ಕೃಷಿ ಉಪ ನಿರ್ದೇಶಕರ ಅಭಿಪ್ರಾಯ. 5000 ಕ್ವಿಂಟಾಲ್ ಮೆಕ್ಕೆಜೋಳ ಮತ್ತು ಭತ್ತ ಬೀಜ ಸಂಗ್ರಹ ಇದೆ. ಹಾಗಾಗಿ ಬೀಜದ ಸಮಸ್ಯೆ ಇಲ್ಲ ಎಂದು ಕೃಷಿ ಅಧಿಕಾರಿಗಳ ಹೇಳಿಕೆ. ರೈತರು ಭೂಮಿ ಹದದಲ್ಲಿ ನಿರತರಾಗಿದ್ದಾರೆ.
ಕಳೆದ ವರ್ಷಕ್ಕಿಂತ 500 ಹೆಕ್ಟೇರ್ ಹೆಚ್ಚು ಬಿತ್ತನೆ ನೀರೀಕ್ಷೆ ಮಾಡಿದ್ದೇವೆ. ರೈತರು ಕೃಷಿಯಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ ಎಂದು ಅಧಿಕಾರಿಗಳ ವಿವರಣೆ. ನೀರೀಕ್ಷೆಯಂತೆ ಮಳೆ ಬಂದರೆ ಎಲ್ಲವೂ ಉತ್ತಮ ವಾಗಲಿದೆ ಒಳ್ಳೆಯ ಫಲಿತಾಂಶ ನೀರೀಕ್ಷೆ ಇದೆ ಎಂದು ಕೃಷಿ ಇಲಾಖೆಯ ಡಿಡಿ ಶಿವ ಪ್ರಸಾದ್ ಗಾಂವ್ಕರ್ ಹೇಳಿದರು. ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆ ಸಹ ಉತ್ತಮವಾಗಿದೆ. ಇರುವ ಅಡಿಕೆ ತೆಂಗು ಬಾಳೆ ತೋಟಗಳನ್ನು ಕೃಷಿಕರು ವಿಸ್ತಿರಿಸುತ್ತಾರೆ. ಇದು ಸಹ ಒಳ್ಳೆಯ ಬೆಳವಣಿಗೆ ಎಂದು ತೋಟಗಾರಿಕೆ ಇಲಾಖೆ ಹೇಳುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿದೆ. 2026 ರಲ್ಲಿ ಸಹ ಉತ್ತಮ ಬೆಳೆಯ ನೀರೀಕ್ಷೆ ಇದೆ. ....
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 