ಪ್ರತಿಭೆಗಳನ್ನು ಹೂರತರುವಲ್ಲಿ ಪ್ರತಿಭಾ ಕಾರಂಜಿ ಸೂಕ್ತ


ಲೋಕದರ್ಶನ ವರದಿ

ಶಿಗ್ಗಾವಿ 08: ವಿದ್ಯಾಥರ್ಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೂರತರುವಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತಲಿವೆ ಎಂದು ಬಂಕಾಪುರ ದಿ.ಮಾಡರ್ನ ಪ್ರೌಡಶಾಲೆಯ ಮುಖ್ಯೋಪಾಧಾಸ್ಯಯ ಐ.ಡಿ.ಗುಂಜಳ ಹೇಳಿದರು.

     ಅವರು ತಾಲೂಕಿನ ಬಂಕಾಪುರ ಪಟ್ಟಣದ ದಿ.ಮಾಡರ್ನ ಸ್ಕೂಲಿನ ಆವರಣದಲ್ಲಿ ಕ್ಲಸ್ಟರ ಮಟ್ಟದ ಪ್ರೌಡ ಶಾಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದರು.

     ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ ಬಾರಂಗಿ ಮಾತನಾಡಿ ಆಯಾ ಶಾಲಾ ಕಾಲೇಜುಗಳಿಗೆ ಸಿಮಿತವಾಗಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರಕಾರ ರಾಷ್ಟ್ರಮಟ್ಟದವರೆಗೆ ಕೊಂಡೊಯ್ಯಲು ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಕ್ಯಾಲಕೊಂಡ ಪ್ರೌಢಶಾಲೆ ಮಕ್ಕಳು ಕಲೋತ್ಸವ ಕಾರ್ಯಕ್ರಮವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದು ಪ್ರಥಮ ಸ್ಥಾನವನ್ನು ಪಡೆದ ಕೀತರ್ಿ ಶಿಗ್ಗಾವಿ ತಾಲೂಕಿಗೆ ಲಭಿಸುತ್ತದೆ ಎಂದು ಹೇಳಿದರು. 

     ಕೀತರ್ಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಬಿ.ಉಂಕಿ ಮಾತನಾಡಿ ಭಾರತೀಯ ಕಲೆ, ಸಾಂಸ್ಕೃತಿ, ಸಾಹಿತ್ಯ, ಸಂಗೀತ ಉಳಿವಿಗಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ವಿದ್ಯಾಥರ್ಿಗಳಿಗೆ ಬಹು ಮುಖ್ಯ ವೇದಿಕೆಯಾಗಿದೆ. ಸಂಗೀತ ಕ್ಷೇತ್ರದಲ್ಲಿ ಹೇಸರು ಮಾಡಿದ ಎಸ್.ಪಿ.ಬಾಲಸುಭ್ರಮಣ್ಯಂ ಹಾಗು ಗಂಗೂಬಾಯಿ ಹಾನಗಲ್ ರವರು ಪ್ರಥಮದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಾಡುವಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕಿ ಜನರಿಂದ ಬೆನ್ನು ತಟ್ಟಿಸಿಕೊಂಡು ಸ್ಫೂತರ್ಿ ಪಡೆದ ಅವರು ಅದೇ ಕ್ಷೇತ್ರದಲ್ಲಿ ಮುಂದುವರೆಯುವಮೂಲಕ ಗಂಗುಬಾಯಿ ಹಾನಗಲ್ ರವರು ಸಂಗೀತ ವಿಧೂಷಕಿಯಾಗಿ ಮೇರೆದರೆ ಎಸ್.ಪಿ.ಬಾಲಸುಭ್ರಮಣ್ಯಂ ಹತ್ತು ಬಾಷೆಗಳಲ್ಲಿ ನೀರರ್ಗಳವಾಗಿ ತಮ್ಮ ಸುಶ್ರಾವ್ಯ ಕಂಠದಿಂದ ಹಾಡುವ ಮೂಲಕ ಸಂಗೀತ ದಿಗ್ಗಜರಾಗಿ ಮೇರೆಯುತ್ತಿರುವದು ಇಂತಹ ಒಂದು ವೇಧಿಕೆಯಮೂಲಕ ಎಂಬುದನ್ನು ಯಾರು ಮರೆಯುವಂತಿಲ್ಲ ಎಂದು ಹೇಳಿದರು.

     ಸಭೆಯ ಅದ್ಯಕ್ಷತೆ ವಹಿಸಿ ಶಿದ್ಧಲಿಂಗಪ್ಪ ಸಕ್ರಿ ಪುರಸಭೆ ಅಧ್ಯಕ್ಷೆ ಶಾಬಿರಾಬಿ ಯಲಗಚ್ಚ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಮಲ್ಲೇಶಪ್ಪ ಬಡ್ಡಿ, ನೀಲಪ್ಪ ಸಣ್ಣಕ್ಕಿ, ಮಹದೇವಪ್ಪ ಸುಂಕದ, ಶಿಕ್ಷಕರಾದ ಶ್ರೀಕಾಂತ ಬಡಿಗೇರ, ಎಸ್.ಸಿ.ಹಿರೇಮಠ, ನಾಯಕ, ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾಥರ್ಿ ಮಣಿಕಂಠ ಪ್ರಾಥರ್ಿಸಿದರು. ಶಿಕ್ಷಕಿ ಎಂ.ವಾಯ್.ಮರಿಬಸಪ್ಪನವರ ಸ್ವಾಗತಿಸಿದರು. ಎಸ್.ಎಂ.ಹೊನಕುಪ್ಪಿ ವಂದಿಸಿದರು.