ಪ್ರತಿಭಾ ಪುರಸ್ಕಾರ ಸಮಾರಂಭ


ಲೋಕದರ್ಶನ ವರದಿ

ಹಾವೇರಿ 07:   ಪ್ರತಿಭೆ ಯಾರೊಬ್ಬರ  ಸ್ವತ್ತಲ್ಲಾ ಎಂಬಂತೆ  ಯಾವುದೇ ಜಾತಿಗೆ ಸೀಮಿತವಾದುದಲ್ಲ ಮತ್ತು ಪುರಸ್ಕಾರ ಎನ್ನುವದು ಸಹ ಜಾತಿಗೆ ಸೀಮಿತವಾಗದೇ ಎಲ್ಲವರ್ಗದ ಪ್ರತಿಭಾನ್ವಿತರನ್ನು ಗುರುತಿಸಿ ಸನ್ಮಾನಿರುತ್ತಿರುವುದು ಬಹಳ ಸಂತೋಷದಾಯಕವಾಗಿದೆ ಎಂದು ಬಾಲೇಹೊಸೂರ ದಿಂಗಾಲೇಶ್ವರ ಸ್ವಾಮಿಜಿ ಹೇಳಿದರು.

ನಗರದ ಸಕರ್ಾರಿ ನೌಕರರ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳನ್ನು ಪ್ರತಿಭಾ ಪುರಸ್ಕಾರಗಳು ಜಾತಿಗೆ ಸೀಮಿತವಾಗುವದನ್ನು ಕಾಣುತ್ತಿದ್ದೇವೆ. ಆದರೆ, ಇಲ್ಲಿ ಎಲ್ಲ ಜಾತಿಯ ವಿದ್ಯಾಥರ್ಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲೀಮ ವಿದ್ಯಾಥರ್ಿಗಳು ಗುರುತಿಸಿ ಸನ್ಮಾನಿಸುತ್ತಿರುವುದು ಗಮನಾರ್ಹವಾದ ಸಂಗತಿ ಎಂದರು.

 ಪ್ರಸಕ್ತ ನಗರದ ಪ್ರದೇಶ ವಿದ್ಯಾಥರ್ಿಗಳ ಪ್ರತಿಭೆಗೆ ಸಮಾನಾಂರತವಾಗಿ ಗ್ರಾಮಿಣ ಭಾಗದ ವಿದ್ಯಾಥರ್ಿಗಳು ಪೈಪೋಟಿಯನ್ನು ನೀಡುತ್ತಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿನಿಯರು ತೇರ್ಗಡೆ ಆಗುತ್ತಿದ್ದಾರಲ್ಲದೆ ಪ್ರಥಮ ಸ್ಥಾನದಲ್ಲಿ ಬರುತ್ತಿದ್ದರೆ ಎಂದರು.

  ಕಳೆದ ಕೆಲ ದಶಕಗಳ ಹಿಂದಿನ ವಿದ್ಯಾಥರ್ಿಗಳಿಗೆ ತರಗತಿಯ ಶುಲ್ಕ ಕಟ್ಟುವದಕ್ಕೆ ಮತ್ತು ಒಂದೆರಡು ಬಟ್ಟೆಗಳನ್ನು ಕೊಳ್ಳುವದಕ್ಕೂ ಸಾಧ್ಯವಾಗುತ್ತಿರಲಿಲ್ಲವಲ್ಲದೆ ಆಹಾರಕ್ಕಾಗಿ ಮಠಮಾನ್ಯಗಳನ್ನು ಅವಲಂಬಿಸಬೇಕಾಗಿತ್ತು. ಇಂತಹ ಸಮಸ್ಯೆಗಳ ನಡೆವೆಯೂ ಉತ್ತಮ ಅಂಕಗಳನ್ನು ಅಂದಿನ ವಿದ್ಯಾಥರ್ಿಗಳು ಪಡೆದುಕೊಳ್ಳುತ್ತಿದ್ದರು.

ಆದರೆ, ಇಂದಿನ ಪಾಲಕರು ವಿದ್ಯಾಥರ್ಿಗಳಿಗೆ ಅವಶ್ಯಕತೆಗಿಂದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿರುವದರಿಂದಾಗಿ ಅವರಿಗೆ ಹಸಿವಿನ ಅರಿವು ಮತ್ತು ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪಾಲಕರು ತಮಗಿದ್ದ ಸೌಲಭ್ಯಗಳು ಮತ್ತು ಕಷ್ಟಗಳನ್ನು ಮೆಲುಕು ಹಾಕಿಕೊಂಡು ಮಕ್ಕಳಿಗೆ ಸೌಲಭ್ಯಗಳನ್ನು ನೀಡುವತ್ತ ಚಿಂತನೆ ಮಾಡುವಂತೆ ಹೇಳಿದರು.

  ಶಾಸಕ ನೆಕರು ಓಲೇಕಾರ ನೋಡುವದಕ್ಕೆ ಸ್ವಲ್ಪ ಕಠಿಣದಂತೆ ಕಂಡರು ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಯಾವುದೇ ರಾಜಿ ಇರುವದಿಲ್ಲ. ಹಿಂದಿನ ಅವಧಿಯಲ್ಲಿ ಶಾಸಕರಿದ್ದಾಗಲೂ ಉತ್ತಮ ಕೆಲಸಗಳನ್ನು ಮಾಡಿದ್ದರು. ಈ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಮಡಿಸಿಕೊಳ್ಳುವಂತೆ ಜನತೆಗೆ ಕರೆನೀಡಿದರು.

ಸಕರ್ಾರಿ ನೌಕರರ ಸಂಘ ಪ್ರತಿಭಾನ್ವಿರನ್ನು ಗುರುತಿಸಿ ಪರಸ್ಕಾರವನ್ನು ಮಾಡುತ್ತಿರುವುದು ಒಳ್ಳೆಯದು. ಸಂಘದಿಂದ ಇಂತಹ ಕಾರ್ಯಗಳು ಮೇಲಿಂದ ಮೇಲೆ ಜರುಗುತ್ತಿರಲಿ. 

ಸಮಾಜ ಮುಖು ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜನೆ ಮಾಡುವಂತೆ ಸಂಘದ ಅಧ್ಯಕ್ಷರಿಗೆ ಹೇಳಿದರು.

ವೇದಿಕೆಯಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ  ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಹಾಲಪ್ಪನವರಮಠ, ಕಾರ್ಯದಶರ್ಿ ಸಿ.ವಿ.ಹಿರೇಮಠ, ಎಂ.ಎ.ಎಣ್ಣಿ, ಎಸ್.ಬಿ.ಕಿನ್ನಾಳ, ಆರ್.ಡಿ.ಹೊಂಬರಡಿ, ಕೆ.ಪಿ.ಬ್ಯಾಡಗಿ, ಎನ್.ಎಂ. ಪಾಟೀಲ, ಜೆ.ಎನ್.ಜಾವೂರ, ಸುರೇಶ ಕಲ್ಮನಿ ಹಾಗೂ ಇತರರು ಇದ್ದರು.

 ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಹಾಲಪ್ಪನವರಮಠ ಸ್ವಾಗತಿಸಿದರು, ಸಿ.ವಿ.ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು, ಎಫ್.ಬಿ.ಮರಡೂರ ವಂದಿಸಿದರು.