ಪ್ರತಿಭಾ ಪುರಸ್ಕಾರ, ಪರಿಸರ ರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮ
Pratibha Puraskar, lecture program on environment protection
ಧಾರವಾಡ, 19 : ಪ್ರಕೃತಿಯಲ್ಲಿ ಮಾನವ ಕಲ್ಯಾಣದ ಅನಂತ ಗುಣಗಳಿವೆ. ಅಭಿವೃದ್ಧಿಯ ಹೆಸರಿನಲ್ಲಿ ಮಾನವ ಪ್ರಕೃತಿಯನ್ನು ವಿಕೃತಿಗೊಳಿಸುತ್ತಿರುವುದು ವಿಷಾದನೀಯ ಎಂದು ಕ.ವಿ.ವ.ಸಂಘದ, ಕಾರ‌್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು.
ಅವರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಹಾಗೂ ಇಲ್ಲಿಯ ಕಲ್ಯಾಣನಗರದ ಸಿದ್ದರಾಮೇಶ್ವರ ಪ್ರೌಢಶಾಲೆ ಜಂಟಿಯಾಗಿ ಆಯೋಜಿಸಿದ್ದ ಡಾ. ಕೆ. ಶರ್ಮಾ, ದಿ. ಯಲ್ಲಪ್ಪ ಸಿದ್ನಾಳ, ಮಲ್ಲಮ್ಮ ಮೂಲಿಮನಿ ದತ್ತಿ ಕಾರ್ಯಕ್ರಮದ ಅಂಗವಾಗಿ ಏರಿ್ಡಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾ ಪುರಸ್ಕಾರ ನಿಮ್ಮ ಸಾಧನೆಗೆ ಪ್ರೇರಣೆ, ಬರೀ ವಿದ್ಯೆ ಇದ್ದರೆ ಸಾಲದು ವಿದ್ಯೆಯ ಜೊತೆ ವಿನಯ, ಉತ್ತಮ ಸಂಸ್ಕಾರ, ಒಳ್ಳೆಯ ಹವ್ಯಾಸಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಕಾರ್ಯವನ್ನು ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಿಂದಲೇ ಪ್ರಾರಂಭಿಸಬೇಕು. ಪರಿಸರ ಸಂರಕ್ಷಣೆ ಕೇವಲ ಕಾಟಾಚಾರಕ್ಕಾಗಿ ಆಗಬಾರದು. ಅದು ನಮ್ಮ ಅಂತರಂಗದ ಹಂಬಲವಾಗಬೇಕೆಂದು ಹೇಳಿದರು.
ಡೈಟ್ ವಿಶ್ರಾಂತ ಉಪನ್ಯಾಸಕ ಕೆ. ಜಿ. ದೇವರಮನಿ ಉಪನ್ಯಾಸ ನೀಡಿ, ಪರಿಸರ ಸಂರಕ್ಷಣೆಯ ಕಾರ್ಯ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅದು ಅನುದಿನದ ಕಾರ್ಯವಾಗಬೇಕು. ಮಾನವನ ಹಾನಿಕಾರಕ ಚಟುವಟಿಕೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಯದಿದ್ದರೆ ಭವಿಷ್ಯದಲ್ಲಿ ಭೂಮಿಯ ಮೇಲೆ ಮಾನವನ ಸೇರಿದಂತೆ ಸಮಸ್ತ ಜೀವರಾಶಿಗಳ ಬದುಕೇ ದುಸ್ತರವಾಗುವದು ಎಂದು ಹೇಳಿದರು.
ಕ.ಸ.ಪ. ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಜ್ಞಾನಾರ್ಜನೆ ವಿದ್ಯಾರ್ಥಿಗಳ ಸ್ವತ್ತು. ಈ ಪ್ರತಿಭಾ ಪುರಸ್ಕಾರ ನಿಮ್ಮ ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ. ನಿಮ್ಮ ಸಾಧನೆಯ ಹಿಂದಿರುವ ತಂದೆ-ತಾಯಿ ಗುರುಗಳನ್ನು ಸದಾಕಾಲ ಸ್ಮರಿಸಬೇಕು. ಈ ಪುರಸ್ಕಾರ ಮುಂದಿನ ವಿದ್ಯಾರ್ಥಿಗಳಿಗೆ ಸ್ಥೂರ್ತಿ ನೀಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಶಶಿಧರ ತೋಡ್ಕರ ಮಾತನಾಡಿ, ಗೆದ್ದವರಿಗೆ ಒಂದು ದಾರಿ, ಸೋತವರಿಗೆ ಸಾವಿರ ದಾರಿ ಎಂಬಂತೆ ವಿದ್ಯಾರ್ಥಿಗಳು ಸೋಲಿಗೆ ಧೃತಿಗೆಡದೆ ಸಾಧಿಸುತ್ತೇನೆಂಬ ಛಲದಿಂದ ಮುನ್ನುಗಬೇಕು ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ವೇದಿಕೆಯಲ್ಲಿದ್ದ ಬಸವರಾಜ ಚಿಕ್ಕೂರ, ಚಂದ್ರಶೇಖರ ಮಾಜನಶೆಟ್ಟರ, ಗಿರಿಜಾ ಹಿರೇಮಠ ಉಪಸ್ಥಿತರಿದ್ದು ಮಾತನಾಡಿದರು. ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಕಸಾಪ ಧಾರವಾಡ ತಾಲೂಕಿನಿಂದ ಸನ್ಮಾನಿಸಿ ಗೌರವಿಸಲಾಯಿತು.
ನಾಗಯ್ಯ ಹಿರೇಮಠ ಸ್ವಾಗತಿಸಿದರು. ಮಹಾಂತೇಶ ನರೇಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ವರಿ ಚೆನ್ನೋಗಿ ನಿರೂಪಿಸಿದರು. ಲಕ್ಷ್ಮಿ ಬಿರಾದಾರ ವಂದಿಸಿದರು. ಕಾರ್ಯಕ್ರಮದಲ್ಲಿ ರೂಪಾಲಿ ಆವರಗೇರಿಮಠ, ಶಾಂತವೀರ್ಪ ಕಮ್ಮಾರ, ಎಸ್. ಎಸ್. ದೊಡಮನಿ, ಭಾವಿಕಟ್ಟಿ, ಪತ್ರಾವಳಿ ಸೇರಿದಂತೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 