ಬಂಥನಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರತಿಭಾ ನಂದ್ಯಾಳ 625 ಕ್ಕೆ 617
Pratibha Nandyal of Banthanal Morarji Desai Residential School scored 617 out of 625
ಲೋಕದರ್ಶನ ವರದಿ
ಇಂಡಿ 23: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ನಡೆಸಿದ 2026ನೇ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು.ಇಂಡಿ ತಾಲ್ಲೂಕಿನ ಬಂಥನಾಳ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ 100 ಕ್ಕೆ 100 ರಷ್ಟು ಫಲಿತಾಂಶ ಬಂದಿದೆ ಎಂದು ಬಂಥನಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಸತೀಶ್ ಸಜ್ಜನ್ ತಿಳಿಸಿದ್ದಾರೆ. ಈ ಬಾರಿ ಒಟ್ಟು 47 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದರು. 47 ಕ್ಕೆ 47 ವಿದ್ಯಾರ್ಥಿಗಳು ಪಾಸ್ ಆಗಿದ್ದು.ನೂರಕ್ಕೆ ನೂರು ಫಲಿತಾಂಶ ಬಂದಿದೆ.
ಕುಮಾರಿ: ಪ್ರತಿಭಾ ಮಾದೇವಪ್ಪ ನಂದ್ಯಾಳ(ತಡವಲಗಾ) 625 ಕ್ಕೆ 617 (98.72)ಹಾಗೂ ಪ್ರೀಯಾ ಪತ್ತಾರ 625 ಕ್ಕೆ 617 (98.72) ಅಂಕಗಳು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರ:ಕಿರಣ ಭೋವಿ 625ಕ್ಕೆ 615 (98.40) ಅಂಕಗಳು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಕುಮಾರಿ: ಪಾರ್ವತಿ ಬಿರಾದಾರ 625ಕ್ಕೆ 613 (98.08) ಅಂಕಗಳು ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಹಾಗೂ 38 ವಿದ್ಯಾರ್ಥಿಗಳು ಡಿಸ್ಟ್ರಿಕ್ಷನ್ ಹಾಗೂ 9 ಜನ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ಹೀಗೇ ನಮ್ಮ ಶಾಲೆಯ ಕೀರ್ತಿ ತಂದಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರಾದ ಗಣಪತಿ ರಾಠೋಡ ಶಿವಪ್ಪ ಗುಗದಡ್ಡಿ ಶೋಭಾ ಕಾಂಬಳೆ ಮಾಹಾತೇಶ ಪೂಜಾರಿ ಸೈಯದಪಟೇಲ್ ಸೈದಾಪೂರ ಬಾಬುರಾಯ ಕಣಮೇಶ್ವರ ಯಲ್ಲಪ್ಪ ಭಜಂತ್ರಿ ಪ್ರಕಾಶ್ ಪಾಟೀಲ್ ಸಂಗಪ್ಪ ವಾಡಿ ಸಂತೋಷ ನಾಟಿಕಾರ ರಾಘವೇಂದ್ರ ನಾಯಕ ಹಣಮಂತರಾಯ ಹೊರಪೇಟೆ ಸಂತೋಷ ಬಡಿಗೇರ ಹಾಗೂ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 