ಲೋಕದರ್ಶನ ವರದಿ
ರಾಣೇಬೆನ್ನೂರು 10: ಮಕ್ಕಳಿಗೆ ಓದುವ ಜೊತೆಗೆ ಪ್ರತಿಭಕರಂಜಿ ಅತಂಹ ಮನೋರಂಜನೆ ಅತೀ ಅವಶ್ಯವಾಗಿದೆ. ಇದನ್ನು ಪರಿಪಾಲಿಸಿ ಮಕ್ಕಳು ಓದುವುದನ್ನು ತಂದೆ ತಾಯಿ ಹಾಗೂ ಗುರುಗಳು ವೀಕ್ಷಿಸಿದಾಗ ಆ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ್ ಹೇಳಿದರು.
ಇಲ್ಲಿನ ಬಸವೇಶ್ವರ ನಗರದ ಸಕರ್ಾರಿ ಹಿರಿಯ ಪ್ರಾರ್ಥಮಿಕ ಶಾಲೆ 12 ರಲ್ಲಿ ಆಯೋಜಿಸಲಾಗಿದ್ದ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ, ಸಂಘಟನೆ, ಹೋರಾಟ, ಈ ಮೂರು ಅಕ್ಷರಗಳು ಮಾನವನ್ನ ಕೈ ಹಿಡಿತದಲ್ಲಿ ಇದ್ದರೆ ಏನ್ನಾದರೂ ಸಾಧಿಸಬಲ್ಲ, ಶಿಕ್ಷಕರು ತಮ್ಮ ಶಾಲೆಯಲ್ಲಿ ಇರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಪ್ರತಿಭೆಗಳನ್ನು ಗುರುತಿಸಿ ಮಾದರಿ ಶಿಕ್ಷಕರಾಗಿ ಹೋರಹೋಮ್ಮಿ ಎಂದರು.
ಕಾರ್ಯಕ್ರಮದಲ್ಲಿ ಇನ್ನರವ್ಹಿಲ್ ಕ್ಲಬ್ ಅಧ್ಯಕ್ಷರಾದ ಪ್ರತಿಭಾ ಪಟ್ಟಣಶೇಟಿ, ಶಿಕ್ಷಣ ಸಂಯೋಜಕರಾದ ಎಫ್.ಹೆಚ್.ಚಮಟಿ ಗುಳಪ್ಪ ನೆರಸನಗೊಂಡರ, ಎಮ್.ಡಿ.ದ್ಯಾಮಣ್ಣನವರು, ಸಿ.ಆರ್.ಪಿ ಸಂಯೋಜಕರಾದ ರಾಜಶೇಕರ ಕಂಬಳಿ, ಯುವರಾಜ ದೊಡ್ಡಮನಿ, ನಟರಾಜ, ಸುದಿಂದ್ರ ಎಸ್.ಟಿ.ಕುರುಬರ, ಭಕ್ತ ವತ್ಸಾಲ, 12 ನಂಬರ್ ಶಾಲೆಯ ಪ್ರದಾನ ಗುರುಗಳಾದ ಆರ್.ಎ.ಹುಲ್ಮನಿ, ಆಯ್.ಎಸ್.ಕಿಲೇದಾರ್, ತಿಪ್ಪೇಸ್ವಾಮಿ ಹಳದದಂಡಿ ಉಪಸ್ಥಿತರಿದ್ದರು.
ಪ್ರತಿಭಾ ಕಾರಂಜಿಯ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.