ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಲ್ಹಾದ ಜೋಶಿ
Pralhad Joshi named in the list of 100 most influential people in the world
ಶಿಗ್ಗಾವಿ 05: ವಿಶ್ವದ ಪ್ರಸಿದ್ಧ100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊಟ್ಟಮೊದಲ ಕೇಂದ್ರ ಸಚಿವರಾಗಿ ಗುರುತಿಸಿಕೊಂಡ ಪ್ರಲ್ಹಾದ ಜೋಶಿ ನಮ್ಮೆಲ್ಲರ ಹೆಮ್ಮೆ ಎಂದು ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ತಾಲೂಕಿನ ದುಂಡಶಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರ ಸಮುದಾಯ ಭವನ ನಿರ್ಮಾಣ ಕಾರ್ಯದ ಭೂಮಿ ಪೂಜಾ ನೇರವೇರಿಸಿ ಮಾತನಾಡಿದ ಅವರು ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವನ್ನು ವಿಶ್ವದ ಮುಂದಿರಿಸಿ, ಅಮೇರಿಕವನ್ನೇ ಹಿಮ್ಮೆಟ್ಟಿಸಿದ ನಾಯಕರು. ಇಂತಹ ದೀರ್ಘ ದೃಷ್ಟಿಯುಳ್ಳ ಜನಪರ ನಾಯಕತ್ವವೇ ಗ್ರಾಮಾಭಿವೃದ್ಧಿಗೆ ಪ್ರೇರಣೆ ನೀಡುತ್ತಿದೆ ಅಲ್ಲದೇರೈತರ ಪ್ರಗತಿಗಾಗಿ ಹಾಗೂ ಗ್ರಾಮೀಣ ಸಹಕಾರ ಚಟುವಟಿಕೆಗಳ ವಿಸ್ತರಣೆಗೆ ಜೋಶಿಯವರಂತಹ ನಾಯಕರು ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದರು.
ಈ ಸಮುದಾಯ ಭವನ ನಿರ್ಮಾಣಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೋಕಸಭಾ ಪ್ರದೇಶಾಭಿವೃದ್ದಿ ನಿಧಿಯ ಅಡಿಯಲ್ಲಿ 5 ಲಕ್ಷ ಅನುದಾನ ಮಂಜೂರು ಆಗಿದೆ. ಭೂಮಿ ಪೂಜೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ ಹುಣಶ್ಯಾಳ ನೆರವೇರಿಸಿ ನಂತರ ಭಾಜಪ ಶಿಗ್ಗಾವಿ ಮಂಡಲದ ಅಧ್ಯಕ್ಷ ವಿಶ್ವನಾಥ ಹರವಿ ಹಾಗೂ ಕೆ.ಎಂ.ಎಫ್. ನಿರ್ದೇಶಕ ತಿಪ್ಪಣ್ಣ ಸಾತಣ್ಣವರ ಮಾತನಾಡಿದರು.
ಈ ಸಂದರ್ಭದಲ್ಲಿ ವಿಎ ಸ್ ಉಪಾಧ್ಯಕ್ಷ ಬಸಯ್ಯ ಸಜ್ಜೆದಮಠ, ಯುವ ಮುಖಂಡ ನರಹರಿ ಕಟ್ಟಿ, ನಿರ್ದೇಶಕ ಪ್ರಕಾಶ ಪಾಸರ , ನೀಲಪ್ಪ ಕೊಳೂರ, ಮಹಾಬಳೇಶ್ವರ ಯಮಕನಮರಡಿ, ಪ್ರಕಾಶ ಕಲ್ಲಪ್ಪನವರ , ಸುರೇಶಗೌಡ್ರ ಪಾಟೀಲ, ಜೀವನ ಲಮಾಣಿ, ರಾಮಚಂದ್ರ ತಳವಾರ ಸಂತೋಷ ಲಾಬಗೊಂಡ, ಬಾಹುಬಲಿ ಅಕ್ಕಿ, ಸಚಿನ ಮಡಿವಾಳರ, ಕಾಶಿನಾಥ ಕಳ್ಳಿಮನಿ ಸಹಕಾರ ಸಂಘದ ನಿರ್ದೇಶಕರು, ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 