ಬೆಂಗಳೂರು, ಜ 25,ಸ್ವಾಮಿ ನಿಜಗುಣಾನಂದ, ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರಿಗೆ ಪ್ರಾಣ ಬೆದರಿಕೆಯನ್ನೊಡ್ಡಿ ಅನಾಮಿಕ ಪತ್ರ ಬರೆದಿದ್ದು, ಅದನ್ನು ನಟ ಪ್ರಕಾಶ್ ರಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. “ನಿಜಗುಣಾನಂದರೇ ನಿಮ್ಮ ಹಾಗೂ ನಿಮ್ಮ ಜೊತೆಯಲ್ಲಿರುವ ಧರ್ಮ ಹಾಗೂ ದೇಶ ದ್ರೋಹಿಗಳ ಸಂಹಾರಕ್ಕೆ ಮುಹೂರ್ತ ನಿಶ್ಚಯವಾಗಿದೆ ಅಂತಿಮ ಯಾತ್ರೆಗೆ ಸಿದ್ಧರಾಗಿ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಪಟ್ಟಿಯಲ್ಲಿ ನಟ ಪ್ರಕಾಶ್ ರಾಜ್ , ನಟ ಚೇತನ್ ಕುಮಾರ್, ಭಗವಾನ್, ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಅಗ್ನಿ ಶ್ರೀಧರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರುಗಳಿವೆ. ಜನವರಿ 29ರಿಂದ ಎಲ್ಲರ ಅಂತಿಮ ಯಾತ್ರೆಗೆ ಮುಹೂರ್ತ ನಿಶ್ಚಯವಾಗಿದ್ದು, ಸಂಹರಿಸಿಯೆ ತೀರುತ್ತೇವೆ ಎಂದು ಅನಾಮಿಕರು ಬರೆದುಕೊಂಡಿದ್ದಾರೆ.