ದುರ್ಗಾ ವೃತ್ತದಲ್ಲಿ ಡಾಂಬರೀಕರಣ ಸಮತಟ್ಟು ಕಾಮಗಾರಿಗೆ ಪ್ರಕಾಶ್ ಕೋಳಿವಾಡ ಚಾಲನೆ
Prakash Koliwad launches asphalting and leveling work at Durga Circle
ರಾಣೇಬೆನ್ನೂರು :16 ಹಾವೇರಿ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಮತ್ತು ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರ ಪ್ರದೇಶವೆಂದರೆ ಅದು ರಾಣಿಬೆನ್ನೂರು ಮಾತ್ರ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ಅವರು ಸೋಮವಾರ ಜನತಾ ಬಜಾರ್ ಬಳಿಯ ದುರ್ಗಾ ವೃತ್ತದಲ್ಲಿ, ವೃತ್ತ ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿ ನಗರ ಮತ್ತು ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧನೆಗೆ ತಮ್ಮ ಅನುದಾನ ನೀಡಿದ್ದೇವೆ. ರೈತರ ಕೃಷಿಗಾಗಿ ಮತ್ತು ಅದರ ಅಭಿವೃದ್ಧಿಗಾಗಿ ಉಪಗ್ರಹ ಆಧಾರಿತ ತಂತ್ರಜ್ಞಾನದ ಮೂಲಕ ರೈತರ ಅಭಿವೃದ್ಧಿಗೆ ಕ್ರಿಯಾಯೋಜನರುಪಿಸಿದ್ದೇವೆ. ಇದೀಗ ನಗರದಲ್ಲಿ ಕೆಲವು ಭಾಗಗಳಲ್ಲಿ ಸೌಂದರ್ಯೀಕರಣಕ್ಕಾಗಿ ಮುಂದಾಗಿದ್ದೇವೆ ಎಂದರು.
ಎಷ್ಟೇ ಬೆಳವಣಿಗೆ ಕಂಡರು ನಗರದ ನಾಗರಿಕರು ಎಲ್ಲ ರೀತಿಯ ಯೋಜನೆಗಳನ್ನು ಜಾರಿಗೆ ತರಲು ಶಾಸಕರೊಂದಿಗೆ ಸಹಕಾರ ನೀಡಬೇಕು. ಹಿಂದಿನಿಂದಲೂ ಈ ವೃತ್ತದಲ್ಲಿ ಅನೇಕ ರೀತಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಆದರೆ ಸಮತಟ್ಟಾದ ಸ್ಥಳವಿಲ್ಲದೆ, ಬೀದಿ ಬದಿ ವ್ಯಾಪಾರಿಗಳಿಂದ ನಾಗರಿಕರು ತಂದೆ ಅನುಭವಿಸುವಂತಹಾಗಿತ್ತು. ಆದ್ದರಿಂದ ಸಾರ್ವಜನಿಕರ ಬೇಡಿಕೆ ಮೇರೆಗೆ ಮತ್ತು ಸೌಂದರ್ಯೀಕರಣದ ಅನುಕೂಲತೆಗಾಗಿ ವೃತ್ತವು ದಾಂಬರೀಕರಣದ ಸಮತಟ್ಟು ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ್ ಮೋಟಗಿ, ಮಾಜಿ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಶೇರುಖಾನ್ ಕಾಬೂಲಿ, ಪ್ರೊ, ಬಿ.ಬಿ. ನಂದ್ಯಾಲ, ಶೀರೀನತಾಜ್ ಶೇಖ್, ಫಕ್ಕೀರಗೌಡ ಪಾಟೀಲ, ಶ್ರೀಮತಿ ನೂರಜಹಾನ್ ನಂದ್ಯಾಲ, ನಾಗರಾಜ್ ಮರಿಯಮ್ಮನವರ, ಜಯದೇವಯ್ಯ ಸುರಳಿಕೆರಿಮಠ, ಇರ್ಫಾನ್ ದಿಡಗೂರ, ಮಲ್ಲೇಶಪ್ಪ ಮದ್ಲೇರ, ಸೇರಿದಂತೆ ಮತ್ತಿತರ ಗಣ್ಯರು, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 