ಸೆ.19 ರಂದು ಅಂತರಪುರದಲ್ಲಿ ಪ್ರಜಾ ಸೇವಾ ಆಂದೋಲನ

ಸೆ.19 ರಂದು ಅಂತರಪುರದಲ್ಲಿ ಪ್ರಜಾ ಸೇವಾ ಆಂದೋಲನ  Praja Seva Andolana in Antarapura on September 19



ಸಂಬರಗಿ 17: ಅಂತರಪುರ ಗ್ರಾಮದಲ್ಲಿ ಸೆ.19ರಂದು ಅಂಬಾ ಭವಾನಿ ಮಂಗಲ್ ಕಾರ್ಯಾಲಯದಲ್ಲಿ ಪ್ರಜಾ ಸೇವಾ ಆಂದೋಲನ ಸಭೆ ನಡೆಯಲಿದೆ ಎಂದು ಅಂತರಪುರ ಉಪ ತಹಶೀಲ್ದಾರ್ ಅಮಿತ್ ಧವಳೇಶ್ವರ ತಿಳಿಸಿದ್ದಾರೆ.  

ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಡೆಯುವ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಬಹುದು. ತಾಲೂಕು ಮಟ್ಟದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಅಧಿಕಾರಿಗಳು ಉಪಸ್ಥಿತರಿರುವರು. ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.  

ಸಮಸ್ಯೆ ಹೊಂದಿರುವವರು ಅಂದು ಬೆಳಿಗ್ಗೆ ಆನಂದಪುರ ನಾಡಕಚೇರಿಯಲ್ಲಿ ಜನಸಂಪರ್ಕ ಅರ್ಜಿಗಳನ್ನು ಸಲ್ಲಿಸಬೇಕು. ತಹಶೀಲ್ದಾರ್ ಸಿದ್ದರಾಜ ಭೋಸಗಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.