ಪ್ರಹ್ಲಾದ ಜೋಶಿ ಪ್ರಸ್ತುತ ಪಡಿಸುವ 2025-26 ಕ್ರೀಡಾ ಮಹೋತ್ಸವ
Prahlad Joshi presents the 2025-26 Sports Festival
ಶಿಗ್ಗಾವಿ 24: ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಸ್ತುತ ಪಡಿಸುವ 2025-26 ಕ್ರೀಡಾ ಮಹೋತ್ಸವವು ತಾಲೂಕಾ ಕ್ರೀಡಾಂಗಣದಲ್ಲಿ ದಿ 29 ರ ಬೆಳಿಗ್ಗೆ ಮತ್ತು 30 ರಂದು ಆಯೋಜಿಸಲಾಗಿದೆ. ವೈಯಕ್ತಿಕ ಆಟಗಳು: 100 ಮೀ ಓಟ, 800 ಮೀ ಓಟ, ಎತ್ತರ ಜೀಗಿತ, ಉದ್ದ ಜೀಗಿತ, ಗುಂಡು ಎಸೆತ ಹಾಗೂ ಬಹುಮಾನ ಪ್ರಥಮ 7 ಸಾವಿರ, ದ್ವೀತಿಯ 5 ಸಾವಿರ, ತೃತೀಯ 3 ಸಾವಿರ ಹಾಗೂ ಆಕರ್ಷಕ ಮೆಡಲ್.ಗುಂಪು ಆಟಗಳು : ಕಬಡ್ಡಿ, ಖೋ ಖೋ, ವಾಲಿಬಾಲ್, ಅಥ್ಲೆಟಿಕ್ಸ್ ಹಾಗೂ ಬಹುಮಾನ ಪ್ರಥಮ 30 ಸಾವಿರ, ದ್ವೀತಿಯ 20 ಸಾವಿರ, ತೃತೀಯ ಹಾಗೂ ಚತುರ್ಥ ತಲಾ 10 ಸಾವಿರದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ.
ವಿಶೇಷ ಸೂಚನೆಗಳು: ಶಿಗ್ಗಾಂವ, ಸವಣೂರ-83 ವಿಧಾನಸಭಾ ಕ್ಷೇತ್ರದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಆಡಿದ ಕ್ರೀಡಾಪಟುಗಳು ಇನ್ನೊಂದು ವಿಧಾನಸಭಾ ಕ್ಷೇತ್ರದಲ್ಲಿ ಆಡಲು ಅವಕಾಶ ಇರುವುದಿಲ್ಲ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಮಾತ್ರ ಲೋಕಸಭಾ ಹಂತಕ್ಕೆ ಆಯ್ಕೆಯಾಗುತ್ತಾರೆ, ಮಾಧಕ ವಸ್ತುಗಳನ್ನು ಸೇವಿಸಿದ ಆಟಗಾರರ ತಂಡವನ್ನು ಕೂಡಲೇ ನಿಷೇಧಿಸಲಾಗುವದು, ಕ್ರೀಡಾಪಟುಗಳು ಒಂದು ಕ್ಷೇತ್ರದ ಒಂದೇ ಊರಿನ ಆಟಗಾರರಾಗಿರಬೇಕು, ಎಲ್ಲಾ ಕ್ರೀಡೆಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ, ಕಡ್ಡಾಯವಾಗಿ ಪರೀಶೀಲನೆಗಾಗಿ ಓರಿಜನಲ್ ಆಧಾರಕಾರ್ಡ್ ತರಬೇಕು, ಸರಿಯಾದ ಸಮಯಕ್ಕೆ ಕ್ರೀಡಾಪಟುಗಳು ಮೈದಾನದಲ್ಲಿ ಹಾಜರಿರಬೇಕು,
ನಿರ್ಣಾಯಕರ ಯವೇ ಅಂತಿಮ ನಿರ್ಣಯ, ಖೋಖೋ ಹಾಗೂ ವಾಲಿಬಾಲ್ ಪಂದ್ಯಗಳನ್ನು ಮಣ್ಣಿನ ಮೈದಾನದಲ್ಲಿ ಆಡಿಸಲಾಗುವುದು, ಖೋ ಖೋ ಪಂದ್ಯಾವಳಿಯ ವಯೋಮಿತಿ ಕ್ರೀಡಾಕೂಟ ನಡೆಯುವ ದಿನಾಂಕಕ್ಕೆ 25 ವರ್ಷ ಮೀರಿರಬಾರದು, ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾವಳಿಗೆ 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಅವಕಾಶ ನೀಡಲಾಗುವದು, ಕಬಡ್ಡಿ ಪಂದ್ಯಾವಳಿಗಳನ್ನು ಮ್ಯಾಟ್ ಮೇಲೆ ಆಡಿಸಲಾಗುವುದು, ವೈಯಕ್ತಿಕ ಆಟಗಳನ್ನು 17 ವರ್ಷ ಒಳಪಟ್ಟವರಿಗೆ ಜೂನಿಯರ್ ವಿಭಾಗದಲ್ಲಿ 17 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸೀನಿಯರ್ ವಿಭಾಗದಲ್ಲಿ ಅಡಿಸಲಾಗುವದು, ದೇಶಿ ಕ್ರೀಡೆಗಳನ್ನು ಲೋಕಸಭಾ ಕ್ಷೇತ್ರ ಮಟ್ಟ(ಫೈನಲ್)ದಲ್ಲಿ ಅಡಿಸಲಾಗುವುದು. ಎಲ್ಲ ಕ್ರೀಡೆಗಳ ನೊಂದಣಿಗೆ 27 ಮಂಗಳವಾರ ದಂದು ಕೊನೆಯ ದಿನಾಂಕ ನಿಗದಿಪಡಿಸಿದೆ ಹೆಚ್ಚಿನ ಮಾಹಿತಿಗಾಗಿ 0836-2251055, 2258955 ಸಂಖ್ಯೆಗೆ ಸಂರಿ್ಕಸಲು ಕೋರಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 