ಆರೋಗ್ಯಕರ ಜೀವನಕ್ಕಾಗಿ ಪ್ರತಿನಿತ್ಯ ಯೋಗಾಭ್ಯಾಸ ಅಳವಡಿಸಿಕೊಳ್ಳುವುದು ಅತ್ಯವಶ್ಯಕ
Practicing yoga daily is essential for a healthy life
ಬೀಳಗಿ 21 : ಯೋಗ,ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ದೇಹ ನಮ್ಮ ನಿಯಂತ್ರಣದಲ್ಲಿರುತ್ತದೆ.ಆರೋಗ್ಯಕರ ಜೀವನಕ್ಕಾಗಿ ಪ್ರತಿನಿತ್ಯ ಯೋಗಾಭ್ಯಾಸ ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ವೈದ್ಯೆ ಅನುಷಾ ಹೇಳಿದರು. ಸ್ಥಳೀಯ ಸಿದ್ದೇಶ್ವರ ದೇವಸ್ಥಾನದಲ್ಲಿ ಭಾನುವಾರ ಓಶೋ ನೇಚರ್ ಕ್ಯೂರ್ ಸೆಂಟರ್, ವಾಕಿಂಗ್ ಗೆಳೆಯರ ಬಳಗ ಮತ್ತು ಕ್ರೀಡಾ ಸಂಘ ಇವರುಗಳ ಸಹಯೋಗದಲ್ಲಿ ಏರಿ್ಡಸಿದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮನುಷ್ಯ ಪ್ರಕೃತಿಯ ನಿಯಮಗಳನ್ನು ಪಾಲಿಸಿದರೆ ಯಾವ ರೋಗಗಳು ಸಮೀಪ ಬರುವುದಿಲ್ಲ ,ಮನಸ್ಸು ನಿರಾಳವಾಗಿರುತ್ತದೆ.
ಯೋಗದಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಪ್ಲಾಸ್ಟಿಕ್ ಹಾಗೂ ಜಂಕ್ ಪುಡ್ ಗಳ ಬಳಕೆ ನಿಯಂತ್ರಣದಲ್ಲಿರಬೇಕು,ವಾರಕ್ಕೊಂದು ದಿನ ಉಪವಾಸ ಮಾಡಿ ಸದೃಡವಾದ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು. ವಾಕಿಂಗ್ ಗೆಳೆಯರ ಬಳಗದ ಭೀಮಶಿ ಬಂಡಿವಡ್ಡರ, ಸಿದ್ದು ಮಾದರ, ಹೊಳೆಬಸಪ್ಪ ಕೌಲಗಿ, ಪಡಿಯಪ್ಪ ವಾಬಣ್ಣವರ, ಸೊಲಬಣ್ಣ ಡಂಗಿ, ಮಹಾಂತೇಶ ಕಟಗೇರಿ, ಕ್ರೀಡಾ ಸಂಘದ ಉದಯ ರಜಪೂತ, ಸಿದ್ದು ಸಾರಾವರಿ, ಸುನಿಲ ಗೋಕಾಕ,ವಾಬ್ ಇನಾಮದಾರ,ಅನೀಲ ಗೋಕಾಕ ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 