ಪವರ್ ಲಿಫ್ಟಿಂಗ್ ಸಾಧಕ ಕಿರಣ್ ಗುಂಗೇರ: ಮಂಗಳೂರು ಜಿಲ್ಲಾಡಳಿತದಿಂದ ಅಭಿನಂದನಾ ಸನ್ಮಾನ
Powerlifting champion Kiran Gungera: Congratulatory award from Mangalore District Administration
ರಾಣೇಬೆನ್ನೂರು 6 : ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಆರೇ ಮಲ್ಲಾಪುರ ಗ್ರಾಮದ, ಯುವ ಕ್ರೀಡಾ ಪ್ರತಿಭೆ, ಕಿರಣ್ ಹಾಲೇಶ್ ಗುಂಗೇರ ಅವರು ಮಾಡಿದ ಪವರ್ ಲಿಫ್ಟಿಂಗ್ ಸಾಧನೆಗಾಗಿ ಮಂಗಳೂರು ಜಿಲ್ಲಾಡಳಿತವು, ಅಭಿನಂದಿಸಿ ಸನ್ಮಾನಿಸಿ ಗೌರವಿಸಿದೆ. ಮಂಗಳೂರು ನೇತ್ರಾವತಿ ಭವನದಲ್ಲಿ ಡಿ ದೇವರಾಜ ಅರಸು ಅವರ 110ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀಮತಿ ಮಮತಾ ಡಿ.ಎಸ್. ಗಟ್ಟಿ ಅವರು ಸಾರ್ವಜನಿಕವಾಗಿ ಗೌರವಿಸಿ ಪ್ರಶಸ್ತಿ ಪದಕವನ್ನಿತ್ತು ಸನ್ಮಾನಿಸಿದರು.
ಕಿರಣ್ ಗುಂಗೇರ ಅವರು, ಅತ್ಯುತ್ತಮ ಪವರ್ ಲಿಫ್ಟಿಂಗ್ ಕ್ರೀಡಾಪಟುವಾಗಿದ್ದು, ಇತ್ತೀಚೆಗೆ ಪಂಜಾಬ್ ರಾಯತ್ ಬಹಾರ ಯುನಿವರ್ಸಿಟಿಯಲ್ಲಿ ನಡೆದ 31ನೇ ಆಲ್ ಇಂಡಿಯಾ ನ್ಯಾಷನಲ್ ಪವರ್ ಲಿಫ್ಟಿಂಗ್ ಸ್ಪರ್ಧೆ 74 ಕೆಜಿ ವಿಭಾಗದ ಬೆಂಚ್ ಪ್ರೆಸ್ ನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, , ವಸತಿ ನಿಲಯದ ಅಧಿಕಾರಿಗಳಾದ ಹೇಮಂತಕುಮಾರ, ಬಿಂದಿಯಾ ಎನ್, ನಾಯಕ, ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಹಾಗೂ ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 