ವಿದ್ಯುತ್ ಸರಬರಾಜು ವ್ಯತ್ಯಯ

ವಿದ್ಯುತ್ ಸರಬರಾಜು  ವ್ಯತ್ಯಯ Power supply disruption

ಸಂಬರಗಿ  25: ಜುಲೈ 27  ರ ಭಾನುವಾರ ಬೆಳಿಗ್ಗೆ 9 ರಿಂದ  ಸಂಜೆ 6 ರವರೆಗೆ ಅಥಣಿ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹಲವು ಉಪಕೇಂದ್ರಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ.ಎಂದು ಸಹಾಯಕ ಕಾರ್ಯನಿರ್ವಾಹಕ ಅಭೀಯಂತರು ಚಿದಾನಂದ ಗುರುಸ್ವಾಮಿ ಮಾಹಿತಿ ನೀಡಿದ್ದಾರೆ. 

ಜಂಬಗಿಯಲ್ಲಿರುವ ಹೆಸ್ಕಾಂ ಉಪಕೇಂದ್ರವನ್ನು ಭೇಟಿ ನೀಡಿ ಪರೀಶೀಲನೆ ಮಾಡಿ ಮಾತನಾಡಿ ಅವರು  ಜಂಬಗಿ ಉಪಕೇಂದ್ರ, ಬಳಿಗೇರಿ, ಶಿರೂರು,110, ಅಥಣಿ, 33 ಅಥಣಿ, ಮುರಗುಂಡಿ, ಶಿರಹಟ್ಟಿ, ನಂದಗಾಂವ್, ಸಂಕೋನಹಟ್ಟಿ ಉಪಕೇಂದ್ರದಲ್ಲಿ ವಿದ್ಯುತ್ ವಿತರಣಾ ಮಾರ್ಗ ವಿಸ್ತರಣೆ ಹಾಗೂ ಮಾರ್ಗ ಪರಿವರ್ತನಾ ಕಾರ್ಯವನ್ನು ಕೈಗೊಳ ಬೇಕಾಗಿಇರುವುದರಿಂದ,ದುರಸ್ತಿಕಾರ್ಯನಡೆಯುತ್ತಿರುವುದ,ಈ ಸಬ್ ಸ್ಟೇಷನ್ ದಲ್ಲಿ  ಬರುವ ಗ್ರಾಮಗಳಲ್ಲಿ  ಒಂದು ದಿನದ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಅವರು ತಿಳಿಸಿದರು.  ಮಳೆಗಾಲವಾಗಿರುವುದರಿಂದ, ಪ್ರಾಣಿಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು ಅಥವಾ ಮುಟ್ಟಬಾರದು ಅಥವಾ ಖಾಸಗಿ ವ್ಯಕ್ತಿಗಳು ಕಂಬಗಳ ಮೇಲೆ ಹತ್ತಬಾರದು ಎಂದು ಗ್ರಾಹಕರು ಕಾಳಜಿ ವಹಿಸಬೇಕೆಂದು ಅವರು  ಯಾವುದೇ ಹಾನಿಗೆ ಹೆಸ್ಕಾಂ ಜವಾಬ್ದಾರರಾಗಿರುವುದಿಲ್ಲ. ಎಂದು ಹೇಳಿದರು  

ಈ ಸಮಯದಲ್ಲಿ, ಜಂಬಗಿ ಉಪಕೇಂದ್ರದ ವಿಭಾಗ ಅಧಿಕಾರಿ ಕೆ.ಎಸ್‌.  ಟಕ್ಕಣ್ಣವರ್ ಉಪಸ್ಥಿತಿ ಇದರು