ಬಡತನ ಶಿಕ್ಷಣಕ್ಕೆ ಅಡ್ಡಿಯಾಗಿ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು

ಬಡತನ ಶಿಕ್ಷಣಕ್ಕೆ ಅಡ್ಡಿಯಾಗಿ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು Poverty should not be a barrier to education and no one should be deprived of education

ಲೋಕದರ್ಶನ ವರದಿ 

ಶಿಗ್ಗಾವಿ 08  : ಬಡತನ ಶಿಕ್ಷಣಕ್ಕೆ ಅಡ್ಡಿಯಾಗಿ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂದು ಸಮಾಜ ಸೇವಕ ಹಾಗೂ ನಟ ವರುಣ್‌ಗೌಡ್ರ ಪಾಟೀಲ ಹೇಳಿದರು. ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿನಿ ಕು. ಅಶ್ವಿನಿ ಯಲ್ಲಪ್ಪ ಹಡಪದ ವಿದ್ಯಾರ್ಥಿನಿಯ ನಸಿಂರ್ಗ್ ವಿದ್ಯಾಬ್ಯಾಸಕ್ಕೆ ಧನ ಸಹಾಯ ಮಾಡಿ ಮಾತನಾಡಿದ ಅವರು, ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಬೆಳೆಯಬೇಕು, ನಮ್ಮ ತಾಲೂಕಿನಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದಾರೆ ಯಾರು ಪ್ರತಿಭಾವಂತರಿದ್ದಾರೆ ಅಂತವರನ್ನು ಗುರುತಿಸಿ ಮುಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಸಹಾಯ ಮಾಡುವುದಾಗಿ ತಿಳಿಸಿದ ಅವರು, ಇದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಿದ್ದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ತಂದೆ ಯಲ್ಲಪ್ಪ ಹಡಪದ, ಪತ್ರಕರ್ತ ಬಸವರಾಜ ಹಡಪದ ಇದ್ದರು.