ಗ್ಯಾರಂಟಿ ಯೋಜನೆಗಳಿಂದ ಬಡತನ ನಿರ್ಮೂಲನೆ : ರಾಜೇಂದ್ರ ರಾಣೆ

ಗ್ಯಾರಂಟಿ ಯೋಜನೆಗಳಿಂದ ಬಡತನ ನಿರ್ಮೂಲನೆ : ರಾಜೇಂದ್ರ ರಾಣೆ Poverty eradication through guarantee schemes: Rajendra Rane

ಲೋಕದರ್ಶನ ವರದಿ 

 ಕಾರವಾರ ಜು.19   :- ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಳು ರಾಜ್ಯದಲ್ಲಿ ಬಡತನ ನಿರ್ಮೂಲನೆಗೆ ಸಹಕಾರಿಯಾಗಿವೆ ಎಂದು ಕಾರವಾರ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ರಾಣೆ ಹೇಳಿದರು.  ಅವರು ಭಾನುವಾರ ಕಾರವಾರ ತಾಲೂಕಿನ ವೈಲವಾಡದಲ್ಲಿ ಆಯೋಜಿಸಿದ್ದ ಗೃಹ ಯೋಜನೆಯ ಮೂರು ವರ್ಷದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.  

ರಾಜ್ಯದಲ್ಲಿನ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಅತ್ಯಂತ ಜನಪ್ರಿಯ ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿ ಮೂರು ್ರ್ಝ್ಟಷ್ಛ್ಲೂ್ದೂ ಪೂರೈಸಿದ್ದು, ಈ ಐತಿಹಾಸಿಕ ಮೈಲಿಗಲ್ಲನ್ನು ರಾಜ್ಯಾದ್ಯಂತ ಗೃಹಲಕ್ಷ್ಮಿ ವಿಜಯೋತ್ಸವ’ವಾಗಿ ಆಚರಿಸಲಾಗುತ್ತಿದ್ದು, ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ.2,000 ರೂಪಾಯಿ ಆರ್ಥಿಕ ನೆರವು ನೀಡುವ ಈ ಯೋಜನೆ, ರಾಜ್ಯದ ಕೋಟ್ಯಂತರ ಕುಟುಂಬಗಳ ಜೀವನೋಪಾಯಕ್ಕೆ ಆಸರೆಯಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತೀ ಕುಟುಂಬಕ್ಕೆ ಪ್ರತೀ ತಿಂಗಳು ಕನಿಷ್ಠ ರೂ.6000 ಗಳ ನೆರವು ದೊರೆಯುತ್ತಿದ್ದು, ಬಡತನ ನಿರ್ಮೂಲನೆ ಸಾಧ್ಯವಾಗಿದೆ ಎಂದರು.  

 ಯೋಜನೆಯಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ತಮ್ಮ ದಿನನಿತ್ಯದ ಅಗತ್ಯಗಳು, ಮಕ್ಕಳ ಶಿಕ್ಷಣ ಹಾಗೂ ಸಣ್ಣಪುಟ್ಟ ಉಳಿತಾಯಗಳಿಗೆ ಈ ಹಣವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದು, ಮೂರು ್ರ್ಝ್ಟಷ್ಛ ಅವಧಿಯಲ್ಲಿ ಹಲವು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಪ್ರತಿಯೊಬ್ಬ ಅರ್ಹ ಮಹಿಳೆಗೂ ಯೋಜನೆಯ ಲಾಭ ತಲುಪಿಸುವಲ್ಲಿ ಸರ್ಕಾರ ಯಶಸ್ವಿಯಾಗಿದ್ದು, ಈ ವಿಜಯೋತ್ಸವವು ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದರು.  

ಯೋಜನೆಯ ಮೂರು ವರ್ಷದ ವಿಜಯೋತ್ಸವ ಪ್ರಯುಕ್ತ ವೈಲವಾಡ, ಕಡವಾಡ, ದೇವಲಮಕ್ಕಿ ಸೇರಿದಂತೆ ವಿಜಯೋತ್ಸವ ಆಚರಿಸಿದ ಎಲ್ಲಾ ಪಂಚಾಯತ್ಗಳಲ್ಲಿ ಕಾರ್ಯಕ್ರಮದೊಂದಿಗೆ, ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಯಿತು.  ಈ ಸಂದರ್ಭದಲ್ಲಿ ಗ್ರಾ.ಪಂ.ಪಿಡಿಓ ಶಬಾನಾ ಮುಲ್ಲಾ, ಕಾರ್ಯದರ್ಶಿ ದೇವಿದಾಸ ಕಾಂಬಳೆ, ಗ್ಯಾಂರಂಟಿ ಪ್ರಾಧಿಕಾರದ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಯೋಜನೆಯ ಫಲಾನುಭವಿಗಳು ಸಾರ್ವಜನಿಕರು ಮತ್ತಿತರರು ಇದ್ದರು.