ಪೋಸ್ಟಮನ್ ಬಿ.ಜಿ.ಕುಡಪಲಿ, ಬಸವರಾಜ ಹುಚ್ಚಮ್ಮನಗೆ ಸನ್ಮಾನ

ಪೋಸ್ಟಮನ್ ಬಿ.ಜಿ.ಕುಡಪಲಿ, ಬಸವರಾಜ ಹುಚ್ಚಮ್ಮನಗೆ ಸನ್ಮಾನ Postman B.G. Kudapalli, Basavaraja Huchhamman honored

ಲೋಕದರ್ಶನ ವರದಿ 

ಪೋಸ್ಟಮನ್ ಬಿ.ಜಿ.ಕುಡಪಲಿ, ಬಸವರಾಜ ಹುಚ್ಚಮ್ಮನಗೆ ಸನ್ಮಾನ 

ಹಾವೇರಿ 03:  ಜೆಸಿಐ ಹಾವೇರಿ ಘಟಕದ ವತಿಯಿಂದ ನಗರದಲ್ಲಿರುವ ಪ್ರಧಾನ ಅಂಚೆ ಕಛೇರಿಯಲ್ಲಿ ಹಲವಾರು ವರ್ಷಗಳಿಂದ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಪೋಸ್ಟಮನ್‌ಗಳಾದ ಬಿ.ಜಿ.ಕುಡಪಲಿ ಮತ್ತು ಬಸವರಾಜ ಹುಚ್ಚಮ್ಮನವರ ಇವರುಗಳನ್ನು ಸೆಲ್ಯೂಟ್ ಟು ಸೈಲೆಂಟ್ ಸ್ಟಾರ್ಸ ಅಂತಾ ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. 

       ಪ್ರಸ್ತಾವಿಕವಾಗಿ ಜೆಸಿಐ ಹಾವೇರಿ ಘಟಕದ ಪೂರ್ವಾಧ್ಯಕ್ಷರಾದ ಜೆಸಿ ಚಂದ್ರಶೇಖರಯ್ಯ ಸುತ್ತೂರಮಠ ಇವರು ಮಾತನಾಡಿ ಜೆಸಿಐ ಸಂಸ್ಥೆಯ ಸೇವೆ ಹಾಗೂ ಕಾರ್ಯಗಳ ಬಗ್ಗೆ ಮಾಹಿತಿ ಹಾಗೂ ಸಂಸ್ಥೆಯಿಂದ ಯುವ ಜನತೆಗೆ ಆಗುವ ಅನಕೂಲತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿದರು.ಮುಖ್ಯಅತಿಥಿಗಳಾಗಿ ಭಾಗವಹಿಸಿದ ಪೋಸ್ಟ ಮಾಸ್ತರ ರಮೇಶ ಕಾಳೆ ಮಾತನಾಡಿ ನಮ್ಮ ಪೋಸ್ಟಮನ್ನಗಳು ಈ ಹಿಂದೆ ಇಂಟರನೆಟ್ ವ್ಯವಸ್ಥೆ ಇಲ್ಲದಿರುವ ಕಾಲದಿಂದಲೂ ಪತ್ರಗಳನ್ನು ಮತ್ತು ಅನೇಕ ಉಪಯುಕ್ತ ಅಂಚೆ ಸೇವೆಗಳನ್ನು ಸಾರ್ವಜನಕರುಗಳಿಗೆ ತಲುಪಿಸಿದ್ದಾರೆ.ಇಂತಹ ಉದ್ಯೋಗಿಳನ್ನು ಜೆಸಿಐ ಹಾವೇರಿ ಘಟಕ ಗುರುತಿಸಿ ಸನ್ಮಾನಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಧನ್ಯವಾದಗಳನ್ನು ಹೇಳಿದರು.  

       ಜೆಸಿಐ ಅಧ್ಯಕ್ಷರಾದ ಜೆಸಿ ದತ್ತಾತ್ರೇಯ ಜೋಶಿ ಮಾತನಾಡಿ ಜೆಸಿಐ ಹಾವೇರಿ ಸಂಸ್ಥೆ ಅನೇಕ ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾಗಿ ಸೇವೆಸಲ್ಲಿಸುತ್ತಿರುವವರನ್ನು ಹುಡುಕಿಕೊಂಡು ಅವರೆಲ್ಲರೂಗಳನ್ನು ಗೌರವಿಸಿ ಸನ್ಮಾನಿಸುವಂತಹ ಉಪಯುಕ್ತ ಕೆಲಸವನ್ನು ಮಾಡುತ್ತಾ ಬಂದಿರುತ್ತದೆ. ಅನೇಕ ವರ್ಷಗಳಿಂದ ಪೋಸ್ಟಮನ್ನಗಳು ಮನೆ ಮನೆಗೆ ತರೆರಳಿ ಪತ್ರಗಳನ್ನು ಮತ್ತು ವೃದ್ಯಾಫ್ಯ ವೇತನದಂತಹ ಜೀವನೋಪಾಯಕ್ಕೆ ಸಹಕಾರಿಯಾಗುವ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಪೋಸ್ಟಮನ್ನಗಳು ಬಹಳ ಪ್ರಮುಖ ಪಾತ್ರವಹಿಸಿರುತ್ತಾರೆ.ಜೆಸಿಐ ಸಂಸ್ಥೆಗೆ ಸೇರಲು ಮುಕ್ತವಾದ ಆಹ್ವಾನವನ್ನು ನೀಡಿದರು. 

          ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರುಗಳಾದ ರವಿ ಗುಡಿಸಾಗರ,ಕಪಿಲ್ ರಾಠೋಡ,ವಲಯ ತರಬೇತಿದಾರರಾದ ಡಾ.ದಯಾನಂದ ಸುತ್ತಕೋಟಿ ಮತ್ತು ಪ್ರಧಾನ ಅಂಚೆ ಕಚೇರಿಯ ಅಧಿಕಾರಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.