ಪ್ರವಾದಿ ಜನ್ಮದಿನೋತ್ಸವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ
Poster released for Prophet's Birthday Celebration
ಲೋಕದರ್ಶನ ವರದಿ
ಪ್ರವಾದಿ ಜನ್ಮದಿನೋತ್ಸವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ
ಕೊಪ್ಪಳ 10: ನಗರದಲ್ಲಿ ಇದೇ ತಿಂಗಳ 18 ರ ಶನಿವಾರ ದಂದು ನಗರದ ತಾಲೂಕ ಕ್ರೀಡಾಂಗಣದಲ್ಲಿ ಜರುಗಲಿರುವ ಪ್ರವಾದಿ ಮೊಹಮ್ಮದ್, ಸ, ಪೈಗಂಬರ್ ರವರ 1500 ಜನ್ಮದಿನೋತ್ಸವದ ವಿಶ್ವ ಶಾಂತಿಯ ಸಂದೇಶ ಹಾಗೂ ಸನ್ಮಾನ ಸಮಾರಂಭದ ಪೋಸ್ಟರ್‌ನ್ನೂ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್ ರವರು ಬಿಡುಗಡೆ ಗೊಳಿಸಿದರು.
ಅವರು ಶುಕ್ರವಾರ ನಗರದ ಭಾಗ್ಯನಗರ ರಸ್ತೆ ಹತ್ತಿರ ಇರುವ ಬಾಲಾಜಿ ಪಂಕ್ಷನ್ ಹಾಲ್ ದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡು ಪೋಸ್ಟರ್ ಬಿಡುಗಡೆ ಮಾಡಿ ಪೂರ್ವಭಾವಿ ಸಿದ್ಧತಾ ಸಭೆ ಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾರ್ವಜನಿಕರಲ್ಲಿ ಸಮಾಜ ಬಾಂಧವರಲ್ಲಿ ಮನವಿ ಮಾಡಿಕೊಂಡರು, ಸದರಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ನಮ್ಮ ಧರ್ಮ ಗುರು ಕಲಬುರ್ಗಿಯ ದರ್ಗಾದ ಪೀಠಾಧಿಪತಿ ಮೊಹಮ್ಮದ್ ಅಲಿ ಅಲ್ ಹುಸೇನಿ ಸಾಹೇಬ್ ಪಾಲ್ಗೊಳ್ಳಲಿದ್ದು ಅವರಿಗೆ ಮತ್ತು ನಮ್ಮ ಧರ್ಮದ ಇತರ ಗುರುಗಳು ಗಳಿಗೆ ಸನ್ಮಾನ ಸಮಾರಂಭ ಕೂಡ ನೆರವೇರಿಸಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಸಂಸದ ಕೆ ರಾಜಶೇಖರ ಹಿಟ್ನಾಳ, ತುಂಗಭದ್ರಾ ಕಾಡ ಅಧ್ಯಕ್ಷ ಹೆಚ್ ಆರ್ ಶ್ರೀನಾಥ್, ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ, ನಮ್ಮ ಕೊಪ್ಪಳದ ಮುಸ್ಲಿಂ ಧರ್ಮ ಗುರು ಗಳಾದ ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಆಹಮದ್ ಖಾದ್ರಿ ತಸ್ಕಿನಿ ಮೌಲಾನ ಮಹಮ್ಮದ್ ತಹಸೀನ್ ಖಾದ್ರಿ ತಸ್ಕಿನೀ ಗಂಗಾವತಿಯ ಹಜರತ್ ಹೈದರ್ ಖಾದ್ರಿ ಸಾಹೇಬ್, ಹಿರಿಯ ನ್ಯಾಯವಾದಿ ಹಾಗೂ ಸಮಾಜದ ಹಿರಿಯ ಮುಖಂಡ ಆಸಿಫ್ ಅಲಿ ಸಮಾಜದ ಮುಖಂಡ ಕೆ.ಎಂ. ಸಯ್ಯದ್, ಯೂಸುಫಿಯಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಸೈಯದ್ ಯಜದಾನಿ ಪಾಷಾ ಖಾದರಿ, ಬಾಶು ಸಾಬ್ ಖತೀಬ್ ,ಮುಸ್ಲಿಂ ಜನ ಪ್ರತಿನಿಧಿಗಳು ರಾಜಕೀಯ ಗಣ್ಯರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 