ಅಂಚೆ ಇಲಾಖೆ ಸೇವೆ ಜನರ ಮನೆ ಬಾಗಿಲಿಗೆ ಬರಲಿದೆ: ಅಂಚೆ ಅಧೀಕ್ಷಕ ಪಿ.ಚಿದಾನಂದ
Postal Department services will come to people's doorsteps: Superintendent of Posts P. Chidananda
ಗದಗ 12 : ಅಂಚೆ ಇಲಾಖೆಯ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಪಿ.ಚಿದಾನಂದ ಅಭಿಪ್ರಾಯಪಟ್ಟರು.ಪ್ರಧಾನ ಅಂಚೆ ಕಚೇರಿಯಯಲ್ಲಿ ಬುಧವಾರ ನಡೆದ ಗದಗ ವಿಭಾಗದ ಪ್ರಶಸ್ತಿ ಪುರಸ್ಕೃತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಪ್ರಸ್ತುತ ಪತ್ರ ವ್ಯವಹಾರ ಜೊತೆಗೆ ಅಂಚೆ ಇಲಾಖೆ ಡಿಜಟಲೀಕರಣ, ಬ್ಯಾಂಕಿಂಗ್,ವಿಮಾ, ಉಳಿತಾಯ ಖಾತೆ, ಠೇವಣಿ, ಅಪಘಾತ ವಿಮೆ ಸೇರಿದಂತೆ ಹಲವು ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಅವುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ದಿಸೆಯಲ್ಲಿ ಪ್ರತಿಯೊಬ್ಬ ಅಂಚೆ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಈಗಾಗಲೇ ಹಲವು ವಿಭಾಗದಲ್ಲಿ ಗದಗ ವಿಭಾಗ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಮುಂಚೂಣಿ ಸ್ಥಾನ ಗಿಟ್ಟಿಸಿಕೊಂಡಿದೆ ಎಂದರು.ಮಿಷನ್ ಸುರಕ್ಷ ಇದೇ ನ.1ರಿಂದ ಆರಂಭವಾಗಿದೆ ಈ ವಿಭಾಗದಲ್ಲಿ ನೀರೀಕ್ಷಿತ ಗುರಿ ಸಾಧಿಸುವ ಹಿನ್ನಲೆ ಇನ್ನೂ 48 ದಿನ ಕಾಲಾವಕಾಶ ಇದೆ. ಹಾಗಾಗಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.ನಾಳೆಯಿಂದ 3 ದಿನಗಳ ವಿಶೇಷ ಮೇಳ ಆಯೋಜಿಸಲಾಗಿದೆ. ಹೆಚ್ಚೆಚ್ಚು ಪಾಲಿಸಿ ಜನರು ಪಡೆದುಕೊಳ್ಳಬೇಕು. 8 ಕ್ಕೂ ಹೆಚ್ಚು ವಿಮೆ ಯೋಜನೆ ಒಳಗೊಂಡಿವೆ. ಇದರಿಂದ ಗದಗ ವಿಭಾಗ ಸಾಧನೆ ವಲಯ ಮತ್ತು ರಾಜ್ಯ,ರಾಷ್ಟ ಮಟ್ಟದ ಮುಂಚೂಣಿ ಸಾಧನೆ ಸಹಕಾರಿಯಾಗಲಿದೆ ಎಂದರು. ಮುಂಬರುವ ದಿನಗಳಲ್ಲಿಯೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿವ ಸಲುವಾಗಿ ಹಲವು ಬಹುಮಾನ ಸಹಿತ ಸ್ಥಾನ ಗಿಟ್ಟಿಸಿಕೊಳ್ಳಲು ಸದಾವಕಾಶವನ್ನು ಸದ್ಭಳಕೆಗೆ ಮುಂದಾಗಬೇಕು ಎಂದರು.ಎರಡು ವಾರ ವಿಶೇಷ ಉಳಿತಾಯ ಪಾಕ್ಷಿಕ..ಅಂಚೆ ಇಲಾಖೆ ಗದಗ ವಿಭಾಗದಿಂದ ಉಳಿತಾಯ ಪಾಕ್ಷಿಕ ಎರಡು ವಾರ ವಿಶೇಷ ಮೇಳ ನಡೆಯಲಿದೆ. ಹಾಗಾಗಿ ಎಲ್ಲರೂ ಹೆಚ್ಚೆಚ್ಚು ಖಾತೆ ತೆರೆಯಲು ಮುಂದಾಗಬೇಕು ಜೊತೆಗೆ ಗ್ರಾಹಕರಿಗೆ ಖಾತೆ ತೊರೆಯುವದನ್ನು ಬಿಡುವಂತೆ ಮನವೊಲಿಸಲು ಮುಂದಾಗಬೇಕು ಎಂದರು.ಗದಗ ವಿಭಾಗ ನಿಗದಿತ ಗುರಿ ಸಾಧನೆ ಹಿನ್ನಲೆಯಲ್ಲಿ ರಾಜ್ಯ ಮಟ್ಟದಲ್ಲಿ ಉಳಿತಾಯ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಮುಂಚೂಣಿ ಸ್ಥಾನದ ಹಿನ್ನಲೆ ಹೊಂದಿದೆ. ಆದರೇ, ಪ್ರಸ್ತುತ ಇನ್ನೂ ಹೆಚ್ಚೆಚ್ಚು ಖಾತೆ ಆರಂಭಕ್ಕೆ ಮುಂದಾಗಬೇಕು ಎಂದರು.ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಇದಕ್ಕೂ ಮುನ್ನ ಗದಗ ಐಪಿಪಿಬಿ ಮ್ಯಾನೇಜರ್ ಆನಂದ ಸಾಗರ, ಗದಗ ಉಪ ವಿಭಾಗದ ಸಹಾಯಕ ಅಧೀಕ್ಷಕರಾದ ಶ್ರೀಕಾಂತ ಜಾದವ, ರೋಣ ಉಪ ವಿಭಾಗದ ನೀರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಬಸವರಾಜ ಮಡಿವಾಳರ ಮಾತನಾಡಿದರು. ಇದೇ ವೇಳೆ ಅಂಚೆ ಪೇದೆಯಿಂದ ಪದೋನ್ನತಿ ಪಡೆದ ಸರೋಜಾ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿ, ಗೌರವಿಸಿಲಾಯಿತು.ಗದಗ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕಾದ ವಿ. ಸುನೀಲಕುಮಾರ ಪಾಲ್ಗೊಂಡಿದ್ದರು. ಅನೀತಾ ಕುರಿ ಸ್ವಾಗತಿಸಿದರು.ಅಂಚೆ ಸಹಾಯಕ ಬಸವರಾಜ ಶೇಡದ, ಶ್ರೀದೇವಿ ಕಲಕೇರಿ ನಿರೂಪಿಸಿದರು. ಭೀಮಣ್ಣ ದೊಡ್ಡಮನಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 