ಚೀನಾ-ಅಮೆರಿಕ ವಾಣಿಜ್ಯ ಒಪ್ಪಂದದಿಂದ ವಿಶ್ವಕ್ಕೆ ಸಕಾರಾತ್ಮಕ ಸಂದೇಶ- ವಿಶ್ವಸಂಸ್ಥೆ ಅಧಿಕಾರಿ

ವಿಶ್ವಸಂಸ್ಥೆ, ಜ 17:     ಚೀನಾ-ಅಮೆರಿಕ ನಡುವಿನ ಮೊದಲ ಹಂತದ ವಾಣಿಜ್ಯ ಒಪ್ಪಂದ ಸಕಾರಾತ್ಮಕ ಸಂದೇಶವನ್ನು ವಿಶ್ವಕ್ಕೆ ಮತ್ತು ಸಂಬಂಧಿತ ದೇಶಗಳಿಗೆ ಕಳುಹಿಸಿದ್ದು, ಇದು ಎರಡೂ ದೇಶಗಳಿಗೆ ಅದರಲ್ಲೂ ವಿಶ್ವಕ್ಕೆ ಪೂರಕವಾಗಿದೆ ಎಂದು ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮುಖ್ಯಸ್ಥರು ಗುರುವಾರ ಹೇಳಿದ್ದಾರೆ.  

2020ನೇ ಸಾಲಿನ ವಿಶ್ವ ಆರ್ಥಿಕ  ಪರಿಸ್ಥಿತಿ ಕುರಿತ ವರದಿಯ ಬಗ್ಗೆ ಸುದ್ದಿಗಾರರಿಗೆ ವಿವರಿಸಿರುವ ವಿಶ್ವಸಂಸ್ಥೆಯ ಆಥರ್ಿಕ ಮತ್ತು ಸಾಮಾಜಿಕ ವ್ಯವಹಾರಗಳ ಉಪ ಮಹಾನಿದರ್ೆಶಕ ಲಿಯು ಜೆನ್ಮಿನ್ ಅವರು, 2019ರಲ್ಲಿ ಆರ್ಥಿಕತೆ ದಶಕದಲ್ಲೇ ಕನಿಷ್ಟ ಮಟ್ಟಕ್ಕೆ ಕುಸಿಯಲು ಚೀನಾ-ಅಮೆರಿಕ ನಡುವಿನ ವಾಣಿಜ್ಯ ವಿವಾದಗಳು ಮತ್ತು ಇತರ ಕೆಲವು ವಿಷಯಗಳು ಕಾರಣವಾಗಿದ್ದವು ಎಂದು ಹೇಳಿದ್ದಾರೆ.  

ವಿಶ್ವಸಂಸ್ಥೆಯ ವರದಿಯಂತೆ, 2019ರಲ್ಲಿ ಜಾಗತಿಕ ಆರ್ಥಿಕತೆ ಶೇ 2.3ರಷ್ಟು ವೃದ್ಧಿಸಿದ್ದು, ಇದು ಹತ್ತು ವರ್ಷಗಳಲ್ಲೇ ಕನಿಷ್ಟ ಮಟ್ಟವೆನಿಸಿದೆ. ಅಲ್ಲದೆ, ಕಳೆದ ವರ್ಷ ಜಾಗತಿಕ ವಾಣಿಜ್ಯ ಬೆಳವಣಿಗೆಯೂ ಶೇ 0.3ಕ್ಕೆ ಇಳಿದಿದ್ದು, ಇದೂ ಸಹ ದಶಕದಲ್ಲೇ ದಾಖಲೆಯ ಕನಿಷ್ಟ ಮಟ್ಟವೆನಿಸಿದೆ. ಆಮದು ಸುಂಕಗಳ ಏರಿಕೆ ಮತ್ತು ವರ್ಷಗಳ ಕಾಲದ ಜಾಗತಿಕ ವಾಣಿಜ್ಯ ಉದ್ವಿಗ್ನತೆಗಳು ನೀತಿ ಅನಿಶ್ಚಿತತೆಯನ್ನು ಹೆಚ್ಚಿಸಿದ್ದು, ಇದರಿಂದ ಜಾಗತಿಕವಾಗಿ ಹೂಡಿಕೆ ಕುಸಿದಿದೆ.  

ವಾರ್ಷಿಕ ವಿಶ್ವ ಆರ್ಥಿಕ ಬೆಳವಣಿಗೆಯ ಬಗ್ಗೆ ವಿವರಿಸಿದ ಲಿಯು, ಅಮೆರಿಕ ಮತ್ತು ಚೀನಾದ ಆರ್ಥಿಕ ಬೆಳವಣಿಗೆ 2018-2020ರ ಅವಧಿಯಲ್ಲಿ ಇಳಿಮುಖ ಕಂಡಿದೆ ಎಂದು ಹೇಳಿದ್ದಾರೆ.  

2020ರಲ್ಲಿ ವಿಶ್ವ ಆರ್ಥಿಕತೆ ಶೇ2.5ರಷ್ಟು ಪ್ರಗತಿ ಹೊಂದುವ ಸಾಧ್ಯತೆ ಇದೆಯಾದರೂ, ವಾಣಿಜ್ಯ ಉದ್ವಿಗ್ನತೆಗಳು, ಆರ್ಥಿಕ ಬಿಕ್ಕಟ್ಟಿನಿಂದ ಆರ್ಥಿಕತೆ ಸರಿದಾರಿಗೆ ಬರುವುದಕ್ಕೆ ಅಡಚಣೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.