ರೋಮ್,
ಮಾರ್ಚ್ 29, ಪೋಪ್ ಫ್ರಾನ್ಸಿಸ್ ಅವರಿಗೆ ಕರೋನವೈರಸ್ ಸೋಂಕು
ದೃಢಪಟ್ಟಿಲ್ಲವಾದರೂ, ವ್ಯಾಟಿಕನ್ ಸಿಟಿಯಲ್ಲಿ ಆರು ಕೊವಿದ್ -19 ಪ್ರಕರಣಗಳು
ವರದಿಯಾಗಿವೆ ಎಂದು ಪಾಪಲ್ ವಕ್ತಾರ ಮ್ಯಾಟಿಯೊ ಬ್ರೂನಿ ತಿಳಿಸಿದ್ದಾರೆ.ಧರ್ಮ
ಗುರುಗಳು ಇಲ್ಲವೇ ಅವರಿಗೆ ಹತ್ತಿರವಾಗಿರುವ ಯಾರಿಗೂ ಸೋಂಕು ತಗುಲಿಲ್ಲದಿರುವುದು
ದೃಢಪಟ್ಟಿದೆ ಎಂದು ಬ್ರೂನಿ ಹೇಳಿಕೆಯನ್ನು ಉಲ್ಲೇಖಿಸಿ ಕ್ಯಾಥೊಲಿಕ್ ಹೆರಾಲ್ಡ್ ಪತ್ರಿಕೆ
ಶನಿವಾರ ವರದಿ ಮಾಡಿದೆ. ಪಾಪಲ್ ವಕ್ತಾರರ ಪ್ರಕಾರ, ಸದ್ಯ, ಆರು ವ್ಯಾಟಿಕನ್
ಸಿಟಿಯಲ್ಲಿ ದೃಢಪಟ್ಟ ಕರೋನವೈರಸ್ ಪ್ರಕರಣಗಳ ಸಂಖ್ಯೆ ಆರಕ್ಕೇರಿದೆ. ಪೋಪ್ ಫ್ರಾನ್ಸಿಸ್
ಅವರಂತೆಯೇ ಅತಿಥಿ ಗೃಹದಲ್ಲಿ ಪಾದ್ರಿಯೊಬ್ಬರು ಸೇರಿದಂತೆ ಇವರೆಲ್ಲ ವಾಸಿಸುತ್ತಿದ್ದಾರೆ.
ಕೊವಿದ್-19 ಸೋಂಕಿಗಾಗಿ ಒಟ್ಟು 170 ಜನರನ್ನು ಪರೀಕ್ಷಿಸಲಾಗಿದೆ. ಇವರಲ್ಲಿ ಪಾದ್ರಿಯ
ಸಂಪರ್ಕದಲ್ಲಿದ್ದವರು ಸೇರಿದ್ದಾರೆ ಪಾದ್ರಿಯು ರಾಜ್ಯ ಸಚಿವಾಲಯದ ಅಧಿಕಾರಿಯೂ
ಆಗಿದ್ದಾರೆ. ರಾಜ್ಯ ಅಧಿಕಾರಿಯ ಕಾರ್ಯದರ್ಶಿಯೊಂದಿಗೆ ಸಂಪರ್ಕ ಹೊಂದಿದ್ದ
ಉದ್ಯೋಗಿಯೊಬ್ಬರಲ್ಲಿ ಮೊದಲು ಕೊವಿದ್-19 ಪ್ರಕರಣ ದೃಢಪಟ್ಟಿತ್ತು ಎಂದು ಬ್ರೂನಿ
ಹೇಳಿದ್ದಾರೆ.