ಕಳಪೆ ಬಿತ್ತನೆ ಬೀಜ ವಿತರಣೆ: ಪರಿಹಾರಕ್ಕೆ ಸಚಿವರ ಭರವಸೆ
Poor seed distribution: Minister promises solution
ರಾಣೇಬೆನ್ನೂರು 23 : ರಾಣೇಬೆನ್ನೂರಿನಲ್ಲಿ ಕಳಪೆ ಬಿತ್ತನೆ ಬೀಜ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವುಗಳು ಮಧ್ಯಸ್ಥಿಕೆ ವಹಿಸಿ ಅನ್ಯಾಯಕ್ಕೊಳಗಾದ ರೈತರಿಗೆ ತುರ್ತು ಪರಿಹಾರ ಕೊಡಿಸಬೇಕೆಂದು ರೈತ ಮುಖಂಡರಾದ ರವೀಂದ್ರಗೌಡ ಎಫ್. ಪಾಟೀಲ ಮತ್ತು ಈರಣ್ಣ ಹಲಗೇರಿ ಇಂದು ಜಿಲ್ಲೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಶಿವಾನಂದ ಎಸ್. ಪಾಟೀಲರಿಗೆ ಮನವಿ ಮಾಡಿದರು.
ಅವರು ಇಂದು ಚಳಗೇರಿ ಟೋಲ್‌ಬಳಿ ಸಚಿವರನ್ನು ಭೇಟಿಯಾಗಿ ಘಟನೆ ವಿವರಿಸಿದಾಗ ಸಚಿವ ಶಿವಾನಂದ ಪಾಟೀಲ ವಿಷಯವನ್ನು ಜಿಲ್ಲಾಡಳಿತ ಈಗಾಗಲೆ ನನ್ನ ಗಮನಕ್ಕೆ ತಂದಿದೆ ನಿಮ್ಮ ಮನವಿಯನ್ನು ನೋಡಿದ್ದೇನೆ. ‘4’ ಜನ ತಪ್ಪಿಸ್ಥತ ವ್ಯಾಪರಸ್ಥರ ಮೇಲೆ ಎಫ್.ಐ.ಆರ್. ಹಾಕಲಾಗಿದೆ. ನಾಳೆ ಡಿ.ಸಿ.ಗೆ ಜವಾಬ್ದಾರಿಯಿಂದ ಸಭೆ ನಡೆಸಲು ಸೂಚಿಸಿದ್ದೆನೆ ಎಂದರು. ಈ ಸಂದರ್ಭದಲ್ಲಿ ರೈತರು ಸಚಿವರಿಗೆ ಹಸಿರು ಶಾಲು ಹೊದಿಸಿ ಸನ್ಮಾನಿಸಿ ನೊಂದ ರೈತರಿಗೆ ನ್ಯಾಯ ಕೊಡಿಸಲು ವಿನಂತಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 