ಪುರಸಭೆ ಮುಖ್ಯಾಧಿಕಾರಿಯಾಗಿ ಪೂಜಾರ
ಲೋಕದರ್ಶನ
ವರದಿ
ಬ್ಯಾಡಗಿ 13:
ಮಾನ್ಯ ಉಚ್ಚ ನ್ಯಾಯಾಲಯ ನೀಡಿದ್ದ
ತಡೆಯಾಜ್ಞೆಯನ್ನು ತೆರುವುಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆಗೆ ವಿ.ಎಂ.ಪೂಜಾರ
ಅವರನ್ನು ಮುಖ್ಯಾಧಿಕಾರಿಯಾಗಿ ಮುಂದುವರೆಯುವಂತೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.
ವೆಂಕಟೇಶ್ ಆದೇಶಿಸಿದ್ದಾರೆ.
ರಾಜ್ಯ ಸಕರ್ಾರ ಕಳೆದ ಸೆ.12 ರಂದು
ಆದೇಶವೊಂದನ್ನು ಹೊರಡಿಸಿ ವಿ.ಎಂ.ಪೂಜಾರ
ಅವರನ್ನು ವಗರ್ಾವಣೆ ಮೇರೆಗೆ ಸ್ಥಳೀಯ ಪುರಸಭೆಗೆ ಮುಖ್ಯಾಧಿಕಾರಿಯನ್ನಾಗಿ ನಿಯೋಜನೆ ಮಾಡಿತ್ತು, ಆದರೆ ಸಕರ್ಾರದ ಆದೇಶವನ್ನು
ಪ್ರಶ್ನಿಸಿ ಬಿ.ಎ.ನಾಗಲಾಪೂರ
ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು, ಅಜರ್ಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸೆ.18 ರಂದು ಪೂಜಾರ ಅವರ
ವಗರ್ಾವಣೆ ಆದೇಶಕ್ಕೆ ತಡೆಯಾಜ್ಞೆ (ಸ್ಟೇ) ನೀಡಿತ್ತು. ಹೀಗಾಗಿ ಕಳೆದ ಸೆ.25 ರಂದು
ಮತ್ತೆ ಮುಖ್ಯಾಧಿಕಾರಿಯಾಗಿ ಬಿ.ಎ.ನಾಗಲಾಪೂರ
ಅಧಿಕಾರ ವಹಿಸಿಕೊಂಡಿದ್ದರು.
ತಡೆಯಾಜ್ಞೆ
ತೆರವು:ಕಳೆದ ಸೆ.25 ರಂದು
ಮಾನ್ಯ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಬಿ.ಎ.ನಾಗಲಾಪೂರ
ಅವರನ್ನು ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಿಂದ ತೆರವುಗೊಳಿಸಿ, ಮೊದಲಿದ್ದ ವಿ.ಎಂ.ಪೂಜಾರ
ಅವರನ್ನು ಮುಖ್ಯಾಧಿಕಾರಿಯನ್ನಾಗಿ ನಿಯೋಜನೆ ಮಾಡಿ ಆದೇಶಿಸಿದ್ದಾರೆ. ಮತ್ತು
ಮೊದಲಿದ್ದ ಬಿ.ಎ.ನಾಗಲಾಪೂರ
ಅವರು ವಾರದೊಳಗಾಗಿ ಇಲಾಖೆಯ ಮುಖ್ಯಸ್ಥರಿಗೆ ವರದಿ ಮಾಡಿಕೊಳ್ಳಬೇಕು ಮತ್ತು
ಒಂದೇ ವಾರದಲ್ಲಿ ನಾಗಲಾಪೂರ ಅವರಿಗೆ ಬೇರೊಂದು (ಪ್ಲೇಸ್ಮೆಂಟ್) ಸ್ಥಳಕ್ಕೆ ಮರು ವಗರ್ಾವಣೆ ಆದೇಶ
ನೀಡುವಂತೆಯೂ ತಡೆಯಾಜ್ಞೆ ತೆರವು ಆದೇಶದಲ್ಲಿ ಸೂಚಿಸಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 