ಬಾಲ್ಯದಲ್ಲಿ ಓದಿದ ಸರಕಾರಿ ಶಾಲೆಗೆ ಪೊಲೀಸ್ ವಿದ್ಯಾರ್ಥಿನಿಯ ಭೇಟಿ: ಸಂತಸ ವ್ಯಕ್ತಪಡಿಸಿದ ಶಿಕ್ಷಕರು

ಬಾಲ್ಯದಲ್ಲಿ ಓದಿದ ಸರಕಾರಿ ಶಾಲೆಗೆ ಪೊಲೀಸ್ ವಿದ್ಯಾರ್ಥಿನಿಯ ಭೇಟಿ: ಸಂತಸ ವ್ಯಕ್ತಪಡಿಸಿದ ಶಿಕ್ಷಕರು Police student visits government school she attended as a child: Teachers express joy

ವಿಜಯಪುರ 18: ಜಿಲ್ಲೆಯ ನಿಡೋಣಿ ಗ್ರಾಮದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ, ಮಂಜರಗಿ ವಸತಿಯ ಪುಟ್ಟ ಶಾಲೆಯಲ್ಲಿ  ಮಗುವಿದ್ದಾಗ ಅಕ್ಷರದ ಅರಿವನ್ನು ಪಡೆದ ಮಗು ಇಂದು ಕೇಂದ್ರ ಸರಕಾರದ ಪೋಲಿಸ್ ಇಲಾಖೆಯಲ್ಲಿ ನೌಕರಿ ಪಡೆದ ಪ್ರಯುಕ್ತ ತಾನು ಓದಿದ ಶಾಲೆಗೆ ಪಾಲಕರೊಂದಿಗೆ ಭೇಟಿ ನೀಡಿ ಎಲ್ಲ ಮಕ್ಕಳಿಗೆ ನೋಟಬುಕ್ ಹಾಗೂ ಸಿಹಿ ವಿತರಿಸಿ ಧನ್ಯತೆಯನ್ನು ಮೆರೆದದ್ದು ಅವಿಸ್ಮರಣೀಯ ಕ್ಷಣವಲ್ಲವೇ ! 

ನಿಸರ್ಗದ ಮಡಿಲಿನಲ್ಲಿ ಅರಳಿನಿಂತ ಈ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಮಿನಾಜ್ ಝಂಡೆ, ಶಾಲೆಯ ಕ್ರಿಯಾಶೀಲ ಶಿಕ್ಷಕರಾದ ಪ್ರವೀಣ ಪತ್ತಾರ ರವರು ನೀಡಿದ ತರಬೇತಿ ಹಾಗೂ ಮಾರ್ಗದರ್ಶನದಲ್ಲಿ 5 ನೇ ತರಗತಿ ಓದುತ್ತಿರುವಾಗ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಆಯ್ಕೆಯಾಗಿದ್ದಳು. 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ತನ್ನ ವ್ಯಾಸಂಗವನ್ನು ಮುಂದುವರೆಸಿದ ಮಿನಾಜ್ ಖಖಐಅ ಪರೀಕ್ಷೆಯಲ್ಲಿ 94 ಅ ಹಾಗೂ ಕಗಅ ವಿಜ್ಞಾನ ವಿಭಾಗದಲ್ಲಿ 99 ಅ ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ನಿಡೋಣಿ ಗ್ರಾಮದ ಅತ್ಯುತ್ತಮ ಪ್ರತಿಭೆಯಾಗಿ ಹೊರಹೊಮ್ಮಿದಳು. ತನ್ನ ವ್ಯಾಸಂಗದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿದ್ದಾಗ ಎರಡು ಸರಕಾರಿ ಹುದ್ದೆಗಳು ಅರಸಿ ಬಂದವು. ಅದರಲ್ಲಿ ಕೇಂದ್ರ ಸರಕಾರದ ಪೊಲೀಸ್ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿಕೊಂಡ ಪ್ರಯುಕ್ತ ಮಿನಾಜ್ ತಾನು ಕಲಿತ ಶಾಲೆಗೆ ಬಂದು ಎಲ್ಲ ಮಕ್ಕಳಿಗೆ ನೋಟಬುಕ್ , ಪೆನ್ನು ಹಾಗೂ ಸಿಹಿ ಹಂಚಿ, ಮಕ್ಕಳು ಹಾಗೂ ಶಿಕ್ಷಕರೊಂದಿಗೆ ತನ್ನ ಬಾಲ್ಯದ ಶಾಲಾ ದಿನದ ನೆನಪುಗಳನ್ನು ಮೆಲಕು ಹಾಕಿ ಖುಷಿಪಟ್ಟಳು.  

ಸರಕಾರಿ ಶಾಲೆ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ತೋಟದ ಶಾಲೆಯಲ್ಲಿ ಓದಿದ ಮಗು ಇಂದು ಅತ್ಯಧಿಕ ಅಂಕಗಳೊಂದಿಗೆ ಸರಕಾರಿ ನೌಕರಿ ಪಡೆದಿದ್ದು ಪ್ರಶಂಶನೀಯವಲ್ಲವೇ ! 

 ಸಧ್ಯ ತನ್ನ ನೌಕರಿಯ ಜೊತೆಗೆ ಏಕಖಅ, ಗಕಖಅ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿ ತೊಡಗಿಕೊಂಡ ಮಿನಾಜ್ ಎಷ್ಟೇ ಎತ್ತರಕ್ಕೇರಿದರೂ ತಾನು ಕಲಿತ ಶಾಲೆಯನ್ನು ಮರೆಯದೇ ನಮ್ಮೆಲ್ಲರ ಭೇಟಿಗೆ ಬಂದದ್ದು ಅತೀವ ಸಂತಸ ನೀಡಿತು ಎಂದು ಶಾಲೆಯ ಶಿಕ್ಷಕರಾದ ಶ್ರೀ ಪ್ರವೀಣ ಪತ್ತಾರ ಹಾಗೂ ಶ್ರೀ ಎಸ್ ಜಿ ಹರನಾಳ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಸಾಧನೆಯನ್ನು ಪ್ರಶಂಸಿಸಿ ಮುಂದೆ ಉನ್ನತ ಅಧಿಕಾರಿಯಾಗಿ ಮತ್ತೊಮ್ಮೆ ನಮ್ಮ ಶಾಲೆಗೆ ಭೇಟಿ ನೀಡಬೇಕೆಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾರೈಸಿದ್ದಾರೆ. 

ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿದರೆ, ಮಕ್ಕಳು ತಾವು ಕಲಿತ ಶಾಲೆ ಹಾಗೂ ಶಿಕ್ಷಕರನ್ನು ಯಾವತ್ತೂ ಮರೆಯುವುದಿಲ್ಲವೆಂಬುದಕ್ಕೆ ಈ ಪೊಲೀಸ್ ವಿದ್ಯಾರ್ಥಿನಿಯೇ ಸಾಕ್ಷಿ. ಇಂತಹ ಮಕ್ಕಳ ನಿಷ್ಕಲ್ಮಶ ಪ್ರೀತಿ, ಗೌರವಕ್ಕಿಂತಲೂ ಉತ್ತಮ ಪ್ರಶಸ್ತಿ ಶಿಕ್ಷಕರಿಗೆ ಯಾವುದಾದರೂ ಇದೆಯೇ !