ಲೋಕದರ್ಶನ ವರದಿ
ಶಿರಹಟ್ಟಿ 30: ಶಿರಹಟ್ಟಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಇದರಿಂದ ಇತರೆ ವಾಹನಗಳು ಸಂಚಾರ ಮಾಡುವುದಕ್ಕೆ ಹಾಗೂ ಜನರು ಓಡಾಡಲು ತೊಂದರೆಯಾಗುತ್ತಿತ್ತು. ಈ ತೊಂದರೆ ತಪ್ಪಿಸಲು ಮುಂದಾದ ಪೋಲಿಸ ಇಲಾಖೆ ಕೆಲವಂದು ನಿಯಮಗಳನ್ನು ಜಾರಿಗೆ ತಂದು ಅವುಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ತಿಳಿ ಹೇಳಿದರು.
ಪಟ್ಟಣದ ನೆಹರು ವೃತ್ತದಿಂದ ಗಾಂಧೀಜಿ ವೃತ್ತವನ್ನು ದಾಟಿ ವಾಹನ ಸವಾರರಿಗೆ ಮತ್ತು ನಿಲ್ಲುಗಡೆಗೆ ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿತ್ತು. ಇದನ್ನು ಪರಿಗಣಿಸಿದ ಪಿಎಸ್ಐ ಬಸವರಾಜ ತಿಪ್ಪರಡ್ಡಿ ನಿಯಮ ಪಾಲಿಸುವಂತೆ ವಾಹನ ಸವಾರರಿಗೆ ಮನವರಿಕೆ ಮಾಡಿಕೊಟ್ಟರು.
ಪಟ್ಟಣದ ನೆಹರು ವೃತ್ತದಿಂದ ಗಾಂಧೀಜಿ ವೃತ್ತದಲ್ಲಿರುವ ಮಾರುಕಟ್ಟೆಯಲ್ಲಿ ವಾರದ ಮೂರು ದಿನಗಳಲ್ಲಿ ಒಂದು ಬದಿಗೆ ಮತ್ತು ಉಳಿದ ದಿನಗಳಲ್ಲಿ ಒಂದು ಬದಿಗೆ ನಿಲ್ಲಿಸುವಂತೆ ಸೂಚನಾ ಫಲಕಗಳನ್ನು ಹಾಕುವ ಮೂಲಕ ವಾಹನ ನಿಲ್ಲುಗಡೆಗೆ ಇರುವ ಸಮಸ್ಯೆಯನ್ನು ಒಂದು ಮಟ್ಟದಲ್ಲಿ ನಿವಾರಣೆ ಮಾಡಿದಂತಾಗಿದೆ. ರಸ್ತೆ ಅಗಲೀಕರಣ ಆಗುವವರೆಗೂ ಪಯರ್ಾಯ ವ್ಯವಸ್ಥೆ ಇಲ್ಲದೇ ಇರುವುದರಿಂದ ವಾಹನ ಸವಾರರು ಸಹಕರಿಸಬೇಕು. ಇತರರು ವಾಹನ ಚಲಾಯಿಸುವದಕ್ಕೆ ಅನುಕೂಲ ಕಲ್ಪಿಸಬೇಕೆಂದು ಮತ್ತು ನಿಯಮವನ್ನು ಪಾಲಿಸಬೇಕೆಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು