ಪೊಲೀಸರು ದೇಶದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಉಳ್ಳಂತಹ ನೌಕರರು -ನ್ಯಾಯಾಧೀಶರಾದ ದೇವೆಂದ್ರ​‍್ಪ ಎನ್‌.ಬಿರಾದಾರ

 ಪೊಲೀಸರು ದೇಶದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಉಳ್ಳಂತಹ ನೌಕರರು   -ನ್ಯಾಯಾಧೀಶರಾದ ದೇವೆಂದ್ರ​‍್ಪ ಎನ್‌.ಬಿರಾದಾರ Police are employees responsible for maintaining internal peace and order in the country -Justice

ಲೋಕದರ್ಶನ ವರದಿ 

ಪೊಲೀಸರು ದೇಶದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಉಳ್ಳಂತಹ ನೌಕರರು 

-ನ್ಯಾಯಾಧೀಶರಾದ ದೇವೆಂದ್ರ​‍್ಪ ಎನ್‌.ಬಿರಾದಾರ 

ಹಾವೇರಿ 21 : ಪೊಲೀಸರು ದೇಶದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತಹ ಜವಾಬ್ದಾರಿ ಉಳ್ಳಂತಹ ನೌಕರರಾಗಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿರಾದಾರ ಎನ್‌.ದೇವೆಂದ್ರ​‍್ಪ  ಹೇಳಿದರು. 

ನಗರದ ಕೆರಿಮತ್ತಿಹಳ್ಳಿಯಲ್ಲಿ ಏರಿ​‍್ಡಸಲಾಗಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಆರ್ಮಿ, ಎರ್ ಫೋರ್ಸ್‌ ಮತ್ತು ನೇವಿ ಇವುಗಳು ದೇಶದ ರಕ್ಷಣೆ, ದೇಶದ ಗಡಿ ರಕ್ಷಣೆ, ನುಸುಳುಕೋರರನ್ನು ತಡೆಗಟ್ಟಿ ದೇಶದ ರಕ್ಷಣೆ ಮಾಡುವಂತವರಾದರೆ, ಪೊಲೀಸ್ ಇಲಾಖೆ ಸಮಾಜದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ರಕ್ಷಿಸುವಂತವರು. ಪೊಲೀಸ್ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ಪರಿಸ್ಥಿತಿ ಹೇಗೆ? ಇವರುಗಳು ಸಮಾಜದಲ್ಲಿ ಕಳ್ಳಕಾಕರು, ಸುಳ್ಳುಕೋರರ ವಿರುದ್ದ ಹೋರಾಡಬೇಕು.  

ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಯಶೋಧ ವಂಟಗೋಡಿ  ಮಾತನಾಡಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುತ್ತಿರುವಾಗ ಮೃತಪಟ್ಟವರ ಸ್ಮರಣಾರ್ಥಕವಾಗಿ ಇಡೀ  ದೇಶಾದ್ಯಂತ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನಾಚರಣೆ" ಯನ್ನು  ಆಚರಿಸಲಾಗುತ್ತಿದೆ.   ದಿನಾಂಕ 01-09-2024 ರಿಂದ 31-08-2025 ರವರೆಗೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 08 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಕರ್ತವ್ಯದಲ್ಲಿ ನಿರತವಾಗಿದ್ದಾಗಲೇ ಮರಣ ಹೊಂದಿದ್ದು, ಒಟ್ಟು ನಮ್ಮ ದೇಶದಲ್ಲಿ 191 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಈ ವರ್ಷದಲ್ಲಿ ಮರಣ ಹೊಂದಿರುತ್ತಾರೆ ಎಂದರು. 


ಪೊಲೀಸ್ ಹುತಾತ್ಮರ ಗೌರವ ಸೂಚಕವಾಗಿ ಪರೇಡ್ ಕಮಾಂಡರ್ ಆರ್‌ಪಿಐ ಶಂಕರಗೌಡ ಪಾಟೀಲ್  ನೇತೃತ್ವದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ನಂತರ ಮೌನಾಚರಣೆ ಮಾಡಲಾಯಿತು ಹಾಗೂ ಪೊಲೀಸ್ ಬ್ಯಾಂಡ್ ಪ್ರದರ್ಶನ ನಡೆಯಿತು.  

ಕಾರ್ಯಕ್ರಮದಲ್ಲಿ  ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಲ್ ವೈ ಶಿರಕೋಳ, ಜಿಲ್ಲೆಯ ಎಲ್ಲ ವಿಭಾಗದ ಪೊಲೀಸ್ ಡಿ ಎಸ್ ಪಿ, ಸಿ ಪಿ ಐ, ಪಿ ಎಸ್ ಐ, ಎ ಎಸ್ ಐ,  ಪೊಲೀಸ್ ಸಿಬ್ಬಂದಿಗಳು, ರಾಜಕೀಯ ಮುಖಂಡರು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಪೊಲೀಸ್ ಕಾನಸ್ಟೇಬಲ್ ಸಂತೋಷ ಸುಧಾಕರ ಜವಳಿ ನಿರೂಪಿಸಿದರು.