ಪೋಲಿಸ್ ಜನಸಂಪರ್ಕ ಸಭೆ: ದೇಶಿಯ ಕಾರ್ಯಕ್ರಮ ಆಯೋಜಿಸಲು ಠಾಣಾಧಿಕಾರಿ ಕರೆ

ಪೋಲಿಸ್ ಜನಸಂಪರ್ಕ ಸಭೆ: ದೇಶಿಯ ಕಾರ್ಯಕ್ರಮ ಆಯೋಜಿಸಲು ಠಾಣಾಧಿಕಾರಿ ಕರೆ Police Public Relations Meeting: Called by the Police Station Officer to organize a national program

ಪೋಲಿಸ್ ಜನಸಂಪರ್ಕ ಸಭೆ: ದೇಶಿಯ ಕಾರ್ಯಕ್ರಮ ಆಯೋಜಿಸಲು ಠಾಣಾಧಿಕಾರಿ ಕರೆ 

ಚಿಮ್ಮಡ 10: ದೇಶೀಯ ಸೊಗಡಿನ ಕಾರ್ಯಕ್ರಮ ಆಯೋಜಿಸಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗಣೇಶ ಚತುರ್ಥಿಯನ್ನು ಸಾರ್ಥಕ ಗೊಳಿಸಬೇಕೆಂದು ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿ ಹೇಳಿದರು.   

ಗ್ರಾಮದ ಭಾಹುಸಾಹೇಬರ ಮಠದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಲಾಗಿದ್ದ ಶಾಂತಿಪಾಲನಾ, ಜಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಬಾರಿ ಗ್ರಾಮದಲ್ಲಿ ಗಣೇಶೋತ್ಸವ ಹಾಗೂ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆ ಏಕಕಾಲದಲ್ಲಿ ಬಂದಿರುವುದರಿಂದ ಗಣೇಶೋತ್ಸವ ಐದು ದಿನಗಳಿಗೆ ಮೊಟಕುಗೊಳಿಸಿ ವಿಸರ್ಜನೆ ಮಾಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು. 

 ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರಕಾರದ ಮಾರ್ಗಸೂಚಿ ಅನುಸರಿಸಿ ಶಾಂತರೀತಿಯಲ್ಲಿ ಹಬ್ಬ ಆಚರಿಸಲು ಮನವಿ ಮಾಡಿದರು ಹಾಗೂ ಗಣೇಶೋತ್ಸವಕ್ಕೆ ಹಲವು ಇಲಾಖೆಗಳ ಅನುಮತಿ ಪಡೆಯಲು ಏಕಗವಾಕ್ಷಿ ಪದ್ದತಿ ಠಾಣೆಯಲ್ಲಿಯೇ ಪ್ರಾರಂಭಿಸಲಿದ್ದು ಇದರ ಪ್ರಯೋಜನ ಪಡೆಯಬೇಕೆಂದರು.  

ಶಿಕ್ಷಕ ಪ್ರಕಾಶ ಪೂಜಾರಿ ಮಾತನಾಡಿ ಗ್ರಾಮದಲ್ಲಿ ನಡೆಯುವ ಯಾವುದೇ ಉತ್ಸವಗಳಲ್ಲಿ ಎಲ್ಲ ಸಮಾಜಬಾಂಧವರೂ ಪಾಲ್ಗೊಳ್ಳುವ ಮೂಲಕ ಶಾಂತಿ ಕಾಪಾಡಿಕೊಳ್ಳುತ್ತೇವೆಂದರು. 

ಕಾರ್ಯಕ್ರಮದಲ್ಲಿ ಪ್ರೊಬೆಷನಲ್ ಪಿಎಸ್‌ಐ ನಿಶಾ. ವ್ಹಿ, ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ಬೀರ​‍್ಪ ಹಳೆಮನಿ, ರಾಚಯ್ಯ ಮಠಪತಿ, ದುಂಡಪ್ಪ ಪಾಟೀಲ, ಈಶ್ವರ ಬಡಿಗೇರ, ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದ ಕವಟಿ, ಪ್ರಭು ಮುಧೋಳ, ಮಹಾಂತೇಶ ಜಾಲಿಕಟ್ಟಿ, ಪ್ರಭು ಗೋವಿಂದಗೋಳ, ರವಿ ದೊಡವಾಡ, ರುಸ್ತುಂ ಮಾಲದಾರ ಸೇರಿದಂತೆ ಎಲ್ಲ ಸಮಾಜದ ಮುಖಂಡರು ಗಣೇಶೋತ್ಸವ ಸೇವಾ ಸಮೀತಿಯ ಸದಸ್ಯರು ಪಾಲ್ಗೊಂಡಿದ್ದರು. ಬೀಟ್ ಸಿಬ್ಬಂದಿ ಆರ್‌.ಬಿ. ಪೂಜಾರಿ, ಬಿ.ಜಿ. ಹೂಗಾರ ಕಾರ್ಯಕ್ರಮ ನಿರ್ವಹಿಸಿದರು.