ಪೊಲೀಸ್ ವಸತಿ ಗೃಹ: ಶಾಸಕ ನಾರಾ ಭರತ್‌ರೆಡ್ಡಿ ಭೂಮಿ ಪೂಜೆ

ಪೊಲೀಸ್ ವಸತಿ ಗೃಹ: ಶಾಸಕ ನಾರಾ ಭರತ್‌ರೆಡ್ಡಿ ಭೂಮಿ ಪೂಜೆ  Police Housing: MLA Nara Bharat Reddy Bhumi Pooja

ಬಳ್ಳಾರಿ 17:ರಂದು ನಗರದಡಿಎಆರ್‌ಆವರಣದಲ್ಲಿ ಬುಧವಾರಅಂದಾಜು 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 36 ಪೊಲೀಸ್ ಸಿಬ್ಬಂದಿ ವಸತಿ ಗೃಹಗಳ ಕಟ್ಟಡ ನಿರ್ಮಾಣಕಾಮಗಾರಿಗೆ ಶಾಸಕ ನಾರಾ ಭರತ್‌ರೆಡ್ಡಿಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.ಶಾಸಕ ನಾರಾ ಭರತ್‌ರೆಡ್ಡಿ ಮಾತನಾಡಿ; ಅಂದಾಜು 8 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 36 ಪೊಲೀಸ್ ಸಿಬ್ಬಂದಿ ವಸತಿ ಗೃಹಗಳ ಕಟ್ಟಡ ನಿರ್ಮಾಣಕಾಮಗಾರಿಗೆ ಚಾಲನೆ ನೀಡಲಾಗಿದೆ ಹಾಗೂ ಗುಣಮಟ್ಟದಕಾಮಗಾರಿ ಮಾಡುವಂತೆಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆಎಂದರು. 

ಈ ಸಂದರ್ಭದಲ್ಲಿ ಬಳ್ಳಾರಿಯ ಐಜಿಪಿ ವರ್ತಿಕಾಕಟಿಯಾರ್, ಎಸ್ಪಿ ಡಾ. ಶೋಭಾರಾಣಿ, ಎಎಸ್ಪಿ ರವಿಕುಮಾರ್, ಡಿಎಸ್ಪಿ ನಂದಾರೆಡ್ಡಿ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಚಾನಾಳ್ ಶೇಖರ್, ಹಗರಿಗೋವಿಂದ ಸೇರಿದಂತೆಇತರರು ಆಗಮಿಸಿದ್ದರು.*ಶೀಘ್ರದಲ್ಲೇ ಗಡಿಗಿಚೆನ್ನಪ್ಪ ವೃತ್ತಉದ್ಘಾಟನೆ:*ಜನರು ಏನೇ ಒತ್ತಡ ಹಾಕಿದರೂಗಡಿಗಿಚನ್ನಪ್ಪ ವೃತ್ತವನ್ನುಉತ್ತಮಗುಣಮಟ್ಟದಿಂದ ನಿರ್ಮಿಸಲಾಗುವುದುಎಂದು ಶಾಸಕ ನಾರಾ ಭರತ್‌ರೆಡ್ಡಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಗಡಿಗಿ ಚೆನ್ನಪ್ಪ ವೃತ್ತದಉದ್ಘಾಟನೆತಡವಾಗಲು ಹಲವು ಕಾರಣಗಳಿವೆ, ಕೆಲವರುಕೋರ್ಟ್‌ ಮೊರೆ ಹೋಗಿದ್ದಾರೆ, ಕೆಲ ಕಾಮಗಾರಿಗೆ ಸರ್ಕಾರದಅನಮೋದನೆ ವಿಳಂಬ ಆಗಿದೆ, ಆದ್ದರಿಂದಗಡಿಗಿಚನ್ನಪ್ಪ ವೃತ್ತಉದ್ಘಾಟನೆತಡವಾಗಿದೆ, ಸಾರ್ವಜನಿಕರುಇದಕ್ಕೆ ಸಹಕರಿಸಬೇಕು, ಶಾಶ್ವತಕಾಮಗಾರಿಆಗಿರುವಕಾರಣಉತ್ತಮರೀತಿಯಲ್ಲೇ ಮಾಡಬೇಕಾಗಿದೆ, ಆದಷ್ಟು ಶೀಘ್ರದಲ್ಲೇ ವೃತ್ತವನ್ನುಉದ್ಘಾಟನೆ ಮಾಡಲಾಗುವುದುಎಂದರು.