ಕವಿ ಮತ್ತು ಸಾಹಿತಿಗಳು ಜನರಿಗೆ ದಾರೀದೀಪವಾಗಬೇಕು: ಡಾ, ಮಲ್ಲಿಕಾ ಘಂಟಿ

ಕವಿ ಮತ್ತು ಸಾಹಿತಿಗಳು ಜನರಿಗೆ ದಾರೀದೀಪವಾಗಬೇಕು: ಡಾ, ಮಲ್ಲಿಕಾ ಘಂಟಿ Poets and writers should be beacons of light for the people: Dr. Mallika Ghanti

ಕೊಪ್ಪಳ 30:  ಸಾಹಿತ್ಯದ ಕೆಲಸ ಸ್ಥಗಿತಗೊಂಡ ಜನರ ಬದುಕನ್ನು ಚಲನಶೀಲನಗೊಳಿಸುವಂತದ್ದಾಗಿದ್ದು, ಈ ದಿಸೆಯಲ್ಲಿ ಉದಯೋನ್ಮುಖ ಕವಿಗಳು ಕವನ ರಚಿಸುವಲ್ಲಿ ಆದ್ಯತೆ ನೀಡಬೇಕು ಎಂಬುದಾಗಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿಯವರು ಅಭಿಪ್ರಾಯಪಟ್ಟರು.

ಕೊಪ್ಪಳ ವಿಶ್ವವಿದ್ಯಾಲಯದಿಂದ ಆಯೋಜಿತವಾಗಿದ್ದ  ದಸರಾ ಕಾವ್ಯ ಸಂಭ್ರಮ 2025 ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,  ಈ ಸಂದರ್ಭದಲ್ಲಿ ಅನೇಕ ದಾರ್ಶನಿಕರ ಆದರ್ಶ, ಕವನಗಳನ್ನು ಉದಾಹರಿಸಿ ಜನರಿಗೆ  ಸಾಹಿತಿಗಳು ಹೇಗೆ ದಾರೀದೀಪವಾಗಬಹುದು ಎಂದು  ತಿಳಿಸಿದರು. ನಂತರ ಮಾತನಾಡಿದ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಗಳಾದ ಎಂ.ವೆಂಕಟೇಶ್ವರುಲು ಮಾತನಾಡಿ, ಕವಿ ಹಾಗೂ ವಿಜ್ಞಾನಿಗಳ ಆಲೋಚನೆ ಒಂದೇಯಾಗಿದ್ದು, ವಿಜ್ಞಾನಿಗೆ ಪ್ರಯೋಗಾಲಯ ಬೇಕಿದ್ದರೆ, ಕವಿಗೆ ಮನಸ್ಸೇ ಪ್ರಯೋಗಾಲಯ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿಶ್ವದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ರವಿಯವರು ಮಾತನಾಡಿ, ವಿಜ್ಞಾನ ತಂತ್ರಜ್ಞಾನದ ಭರಾಟೆಯ ಈ ದಿನಗಳಲ್ಲಿ , ಯುವ ಜನಾಂಗದಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಇದು ಬದಲಾಗಬೇಕಿದೆ ಪುಸ್ತಕ  ಓದುವ ಹವ್ಯಾಸವನ್ನು  ಬೆಳಸಬೇಕಿದೆ ಎಂದರು.ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಮೇಶ, ರಾಯಚೂರು ಆದಿಕವಿ ಮಹರ್ಷಿ  ವಾಲ್ಮೀಕಿ  ವಿಶ್ವವಿದ್ಯಾಲಯ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ, ವಿಜಾಪುರ ಅಕ್ಕಮಹಾದೇವಿ ವಿಶ್ವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿಯವರು, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ  ಡಾ ವಸುಂದರಾ ಭೂಪತಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್‌.ಎಲ್ ಪುಷ್ಪಾ ಮಾತನಾಡಿದರು. ಸಾಹಿತಿ ಬಂಡಾಯ ಅಲ್ಲಮಪ್ರಭು ಬೆಟ್ಟದೂರು ಕಲ್ಯಾಣವಾಣಿ ವಿಶೇಷ ಸಂಚಿಕೆ ಬಿಡುಗಡೆ ಗೊಳಿಸಿ ಮಾತನಾಡಿದರು. 

ಈ ವೇಳೆ 50. ಅಧಿಕ ಕವಿಗಳು ಕವನ ವಾಚನ ಮಾಡಿದರು. ಅಕ್ಕಮಹಾದೇವಿ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ. ಪ್ರೊ. ಓಂಕಾರ ಕಾಕಡೆ ವೇದಿಕೆಯಲ್ಲಿದ್ದರು. ಈ ವೇಳೆ ವಿ.ವಿ.ಯ ವಿದಯಾರ್ಥಿಗಳು ಆಕರ್ಷಕ ಸಂವಿಧಾನ ನೃತ್ಯ ಮಾಡಿ ಗಮನ ಸೆಳೆದರು.ಸಂಗೀತ ಕಲಾವಿದರಾದ ರಾಮಚಂದ್ರ ಗೊಂಡಬಾಳ, ಬಾಷಾ ಸಂಗಡಿಗರು ಪ್ರಾರ್ಥಿಸಿದರು, ಕೊಪ್ಪಳ ವಿ.ವಿ. ಕುಲಸಚಿವರಾದ ಕೆ.ವಿ.ಕೆ. ಪ್ರಸಾದ ಸ್ವಾಗತಿಸಿದರು, ಉಪನ್ಯಾಸಕರಾದ ಡಾ. ಪಾರ್ವತಮ್ಮ, ವೀರೇಶ ನಿರೂಪಿಸಿದರು, ಪ್ರವೀಣ ಪಾಟೀಲ ವಂದಿಸಿದರು.