ಕಸಾಪ ತಾಲೂಕಾ ಘಟಕ ಮುಂಡಗೋಡ ವತಿಯಿಂದ ಮುಂಗಾರು ಮಳೆಯಲ್ಲಿ ತೇಲಿದ ಕವಿ ಹೃದಯ

ಕಸಾಪ ತಾಲೂಕಾ ಘಟಕ ಮುಂಡಗೋಡ ವತಿಯಿಂದ ಮುಂಗಾರು ಮಳೆಯಲ್ಲಿ ತೇಲಿದ ಕವಿ ಹೃದಯ  Poetry gathering in the monsoon season

ಮುಂಡಗೋಡ 24: ಪ್ರಪಂಚವೆಂಬ ಸಂತೆಯಲ್ಲಿ ನಾನೋಬ್ಬ ನಗುಮುಖದ ಸೋಮಾರಿ! ನಗುನಗುತ್ತಾ ದುಡಿಯುವ ದುಡಿಮೆಗಾರನೊಬ್ಬ ಪ್ರತಿದಿನ ಅಳುವ ಸಂಸಾರಿ! ಎಂಬ ಮುಂಗಾರು ಮಳೆಯಲ್ಲಿ ಕವಿ ಹೃದಯ ಮಿಡಿಯಿತು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮುಂಡಗೋಡ ವತಿಯಿಂದ ಸರ್ಕಾರಿ ನಿವೃತ್ತ ನೌಕರರು ಭವನದಲ್ಲಿ ಮುಂಗಾರು ಮಳೆಯಲ್ಲಿ ಕವಿಗೋಷ್ಠಿ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕವಿಗೋಷ್ಟಿ ಕಾರ್ಯಕ್ರಮವನ್ನು ಜ್ಯೋತಿ ಆಚಾರಿ ಅವರು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿ ಮಾತನಾಡುತ್ತಾ ಮುಂಗಾರು ಮಳೆಯ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಒಂದು ವಿಶಿಷ್ಟವಾದ ಮತ್ತು ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬಹಳಷ್ಟು ಹೆಮ್ಮೆಯ ಸಂಗತಿ ಇಂದಿನ ದಿನಗಳಲ್ಲಿ ಓದುಗರ ಹಾಗೂ ಬರಹಗಾರ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತಿದೆ ಏಕೆಂದರೆ ಮಕ್ಕಳಿಗೆ ಮೊಬೈಲ್ ನೋಡುವುದು ಹೆಚ್ಚಾಗಿದ್ದು ಕನ್ನಡ ಸಾಹಿತ್ಯವನ್ನು ಬೆಳೆಸುವ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಬಹಳಷ್ಟು ಉಪಯುಕ್ತವಾಗುತ್ತವೆ.  

 ಎಂದು ಹೇಳಿದರು.ಮುಂಗಾರು ಕವಿಗೋಷ್ಠಿಯಲ್ಲಿ ಭಾಗವಹಿಸಿದ 10 ಕವಿಗಳು ಡಾ. ಅನುಪಮಾ ಅದಾಪುರ,  ಬಾಲಚಂದ್ರ ಹೆಗಡೆ,  ಶ್ರೀಕಾಂತ್ ಹೊಂಡದಕಟ್ಟಿ,  ಸಂತೋಷ್ ಕೋಸನೂರ್,  ಚಿದಾನಂದ ಪಾಟೀಲ್, ಶ್ರೀಮತಿ ಸುವರ್ಣ ನಿಂಗೂಜಿಯವರ, ನಾಗರಾಜ್ ಬಡಿಗೇರ್, ಅರುಣ್ ಮಾತಿಬೆಟ್ಕರ್,  ಎಂ ವಿ ಅರಳಿಕಟ್ಟಿ,  ಸಿಎನ್ ಸುರಕೋಡ್, ತಮ್ಮ ಕವನಗಳನ್ನು ವಾಚನ ಮಾಡಿದರು. ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಮುಂಡಗೋಡ ಸಹಾಯಕ ಪ್ರಾಧ್ಯಾಪಕರುನಾಗರಾಜ್ ಹರಿಜನ, ರವರು ಮಾತನಾಡುತ್ತಾ ಎಲ್ಲಾ ಕವಿಗಳು ಮುಂಗಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಉತ್ತಮವಾದಂತ ಕವನಗಳನ್ನು ರಚಿಸಿದ್ದಾರೆ ಆದರೆ ಇಂದಿನ ದಿನಮಾನದ ಸಮಸ್ಯೆಗಳನ್ನು ಮತ್ತು ಇಂದಿನ ಸ್ಥಿತಿಗತಿಗಳನ್ನು ಕುರಿತು ಇಂತಹ ಬೇರೆ ಬೇರೆ ವಿಷಯ ಕುರಿತು ಕವನಗಳು ಮೂಡಿ ಬಂದರೆ ಸಹಾಯವಾಗುತ್ತದೆ. ಕನ್ನಡ ಕರ್ನಾಟಕದ ಸಾರ್ವಭೌಮ ಭಾಷೆ ಕನ್ನಡ ನಮ್ಮ ನಿಮ್ಮೆಲ್ಲರ ಅನ್ನದ ಭಾಷೆ ಕನ್ನಡ ನಮ್ಮನ್ನು ತಾಯಿ ಮಗುವಿನ ಸಂಬಂಧದ ಕೊಂಡಿ ಇದ್ದಂತೆ ಇಂತಹ ಭಾಷೆ ಮಾತನಾಡುವ ನಾವೆಲ್ಲರೂ ಪುಣ್ಯವಂತರು ಹಾಗಾಗಿ ಎಲ್ಲರೂ ಕನ್ನಡ ಭಾಷೆಯನ್ನು ಬಳಸಿ ಕನ್ನಡ ಉಳಿಸುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ಕಸಾಪ ಅಧ್ಯಕ್ಷತೆ ವಸಂತ ಕೊಣಸಾಲಿ ಮಾತನಾಡುತ್ತಾ ಮುಂಗಾರು ಮಳೆ ಸಿಂಚನವಾಗಿದ್ದು ಅದಕ್ಕೆ ಮುಂಗಾರುಮಳೆಯೇ ಸಾಕ್ಷಿಯಾಗಿದೆ.  

 ನಮ್ಮ ಕವಿಗಳ ಕವನಗಳ ಮುಂಗಾರು ಮಳೆಗೆ ಈ ಕಾರ್ಯಕ್ರಮದ ಮೂಲಕ ನೀಡುವ ಗೌರವ ನೀಡಲಾಗಿದೆ.ಎಂದು ನಾನು ಭಾವಿಸುತ್ತೇನೆ ಏಕೆಂದರೆ ಮುಂಗಾರು ಮಳೆ ಬಂದ ನಂತರ ಎಲ್ಲಾ ರೈತರು ತಮ್ಮ ಹೊಲದ ಕೆಲಸದಲ್ಲಿ ನಿರತರಾಗುವ ಸಂದರ್ಭ ಮತ್ತು ರೈತನ ದುಡಿಮೆಯನ್ನು ಪ್ರತಿಫಲವನ್ನು ನೀಡುವ ಒಂದು ಉತ್ತಮ ಮಳೆಯಾಗಿದೆ. ಎಂದು ಹೇಳಿದರು.ಕಸಾಪ ಗೌರವ ಕಾರ್ಯದರ್ಶಿಗಳಾದ  ಎಸ್ ಡಿ ಮುಡೆಣ್ಣವರ ಬಂದಂತ ಅತಿಥಿಗಳನ್ನು ಹಾಗೂ ಕವಿಗಳನ್ನ ಹೃದಯ ತುಂಬಿ ಸ್ವಾಗತಿಸಿದರು. ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಹೆಚ್ಚುಕಟ್ಟಾಗಿ ಉತ್ತಮ ಉಪಮೇಯಗಳೊಂದಿಗೆ ನಿರೂಪಣೆಯನ್ನು ಶ್ರೀ ದಿನೇಶ. ವರ್ನೆಕರ ನಡೆಸಿಕೊಟ್ಟರು  ವಿನಾಯಕ್ ಶೇಟ್ ರವರು ತಮ್ಮ ಮಾತಿನ ಮೂಲಕ ಹೃದಯ ತುಂಬಿ ವಂದನೆಗಳನ್ನು ಅರೆ​‍್ಣ ಮಾಡಿದರು  ಎಂ ವಿ ಅರಳಿಕಟ್ಟಿ ಪ್ರಾರ್ಥನೆ ನಡೆಸಿಕೊಟ್ಟರು . ಈ ಕಾರ್ಯಕ್ರಮದಲ್ಲಿ ಡಾ. ಪಿ.ಪಿ.ಛಬ್ಬಿ, ಎಸ್ ಕೆ ಬೋರ್ಕರ್ ಸಂಗಪ್ಪ ಕೋಳೂರು ಎಸ್ ಬಿ ಹೂಗಾರ್, ಗೌರಮ್ಮ ಕೊಳ್ಳನವರ, ಶಿವಾನಂದ್ ವಾಲಿಶೆಟ್ಟರ್ ಶ್ರೀ ನಾಗರಾಜ, ಅರ್ಕಸಾಲಿ  ಆನಂದ್ ಹೊಸೂರ,  ಎಚ್‌ಎನ್ ತಪೇಲಿಮುಂತಾದವರು ಹಾಗೂ ಉಪಸ್ಥಿತರಿದ್ದರು.