ಕವಿ ಮತ್ತು ಕವಿತೆ - ಸ್ವಾಭಿಮಾನದ ಒರತೆ: ಅಶೋಕ ಹಂಚಲಿ

ಕವಿ ಮತ್ತು ಕವಿತೆ - ಸ್ವಾಭಿಮಾನದ ಒರತೆ: ಅಶೋಕ ಹಂಚಲಿ   Poet and Poetry – A Wellspring of Self-Respect: Ashoka Hanchali


ತಾಳಿಕೋಟಿ 23:  ಪ್ರೀತಿ ಪ್ರೇಮದ ಲಯ ನಾಚೂಕಿನಷ್ಟೇ,ಕವಿತೆ ವಾಸ್ತವದ ಪ್ರತಿಬಿಂಬ,ಸಮಾಜದ ಹುರಣ,ರಾಜಕೀಯದ ವಿಡಂಬನೆ ಹಾಗೂ ಕವಿತೆ ಸಮಾಜದ ಅಂಕುಡೊಂಕಗಳಿಗೆ ಚಾಟಿಯಾಗಬೇಕು.ಕವಿ ಮತ್ತು ಕವಿತೆ ಸದಾ ಸ್ವಾಭಿಮಾನದ ಒರತೆಯಾಗಿರಬೇಕು ಎಂದು ಚಿಂತಕ,ವ್ಯಕ್ತಿತ್ವ ವಿಕಸನದ ಪ್ರಖರ ವಾಗ್ಮಿ ಅಶೋಕ ಹಂಚಲಿ ಅವರು ಮಾತನಾಡಿದರು. ತಾಳಿಕೋಟೆಯ ಕನ್ನಡ ಸಂಘ ಹಾಗೂ ಸಹೃದಯಿ ಶಿಕ್ಷಕ ಬಳಗದ ಸಂಯುಕ್ತಾಶ್ರಯದಲ್ಲಿ ರವಿವಾರ ಸಂಜೆ ಪಟ್ಟಣದ ಹೆಮರಡ್ಡಿ ಮಲ್ಲಮ್ಮತಾಯಿ ದೇವಸ್ಥಾನದ ಸಭಾಭವನದಲ್ಲಿ ಕವಿ, ಸಾಹಿತಿ, ಬರಹಗಾರ ಆರ್‌.ಬಿ.ದಮ್ಮೂರಮಠ ಅವರ ದ್ವಿತೀಯ ಕವನ ಸಂಕಲನ "ಬಿರಿದ ಮೊಗ್ಗು" ಕೃತಿ ಲೋಕಾರೆ​‍್ಣಯ ಸಂದರ್ಭದಲ್ಲಿ ಅವರು ಕೃತಿ ಕುರಿತು ಮಾತನಾಡಿದರು.ಒಂದು ಕವಿತೆ ಸಾಕು ಬದುಕಿನ ತುಂಬಾ ಕಾಡಲು,ಕಾಪಾಡಲು,ಹಾಡಲು ಹೀಗಿರುವಾಗ ಕವಿತಾ ಶಕ್ತಿ ದೊಡ್ಡದು.ಹೊಗಳಿ ಹಾಡಿ ಬರೆಯುವ ಆಸ್ಥಾನಿಕ ಕವಿತ್ವಕ್ಕಿಂತ ತಪ್ಪಿದಲ್ಲಿ ತಿದ್ದಿ ತೋರುವ,ದಾರಿ ಬಿಟ್ಟಲ್ಲಿ ತಿವ್ವಿದು ತೋರಿಸುವ,ಯಾರು ಹಂಗಿಗೂ ಒಳಗಾಗದೆ ಕವಿತೆ ಉದಯಿಸಬೇಕು .

ಕುವೆಂಪು,ಬೇಂದ್ರೆಯವರು ಬರೆದ ಕೆಲವು ಕವಿತೆಗಳು ನೇರ ಹಾಗೂ ದಿಟ್ಟ ಪ್ರತ್ಯುತ್ತರವಾಗಿದ್ದವು ಎಂದು ಕನ್ನಡ ನಾಡಿನ ಪ್ರಸಿದ್ಧ ಕವಿಗಳ ಕಾವ್ಯ ಉದಯಿಸಿದ ಕಾಲದ ಬಗ್ಗೆ ಮಾರ್ಮಿಕವಾಗಿ ಅಶೋಕ ಹಂಚಲಿಯವರು ಮಾತನಾಡಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಪ.ಪೂ.ಷ.ಬ್ರ.ಶ್ರೀ ರಾಜಗುರು ರಾಜೇಂದ್ರ ಒಡೆಯರು ಪೀಠಾಧಿಪತಿಗಳು ನಾವದಗಿಯವರು ಮಾತನಾಡಿ ,ಸಾಹಿತ್ಯದ ಕಾರ್ಯಕ್ರಮಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕವಿಗೊಷ್ಠಿಯಂತೆ ಒಂದು ಪುಸ್ತಕ ಬಿಡುಗಡೆಯ ಸಂಭ್ರಮ ಹೆಮ್ಮೆ ತರುವಂತದ್ದಾಗಿದೆ.ಹೆಚ್ಚು ಹೆಚ್ಚು ಮೌಲಿಕ ಹಾಗೂ ವಿಭಿನ್ನ ಪ್ರಕಾರದಲ್ಲಿ ಆರ್ ಬಿ ದಮ್ಮೂರಮಠ ಅವರ ಸಾಹಿತ್ಯಯಾನ ನಡೆಯಲಿ ಎಂದು ಹಾರೈಸಿದರು.ಕವಿಯ ಬಾಳುಬಂಡಿ ಸಾಗಿದ ದಾರಿ,ಕವಿತೆಯ ಕನವರಿಕೆಗಳ ಕುರಿತು ಚಿಂತಕ ಶ್ರಿಕಾಂತ ಪತ್ತಾರ ಮಾತನಾಡಿದರು.ತಂದೆಯ ಕನಸುಗಳು ಮಗನ ಮೂಲಕ ಕವಿತಾ ಮುತ್ತುಗಳಾದವು ಎಂದು ವಾಗ್ಮಿಗಳಾದ ಶ್ರೀಮತಿ ಸುಮಂಗಲಾ ಕೋಳೂರ ತಿಳಿಸಿದರು.

ಬಿಡುವಿಲ್ಲದ ಸಮಯದ ಮಧ್ಯಯೂ ನನ್ಬಿನಯ ಬಿಡುವಾಗಿಸಿದ ಕವಿತೆಗಳು ಸದಾ ನನ್ನೊಂದಿಗೆ ಮುಖಾಮುಖಿಯಾಗಿ ಹೊರಹೊಮ್ಮಿ ಇಂದು ಸಂಕಲವಾಗಿ ಲೋಕಾರೆ​‍್ಣಗೊಂಡಿದ್ದು ಖುಷಿ ಎನಿಸಿದೆ ಎಂದು ಕೃತಿಕಾರರಾದ ಶ್ರೀ ಆರ್ ಬಿ ದಮ್ಮೂರಮಠ ಅವರು ಮನದೊಳಗಿನ ಮಾತುಗಳನ್ನಾಡಿದರು.ಇದೆ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಪ್ಪಾಸಾಹೇಬ ಮೂಲಿಮನಿ ಅವರನ್ನು ಸನ್ಮಾನಿಸಲಾಯಿತು.ಕೃತಿ ಲೋಕಾರೆ​‍್ಣಯ ಸಮಾರಂಭದಲ್ಲಿ ವೇದಿಕೆಯ ಮೇಲೆ ಕನ್ನಡ ಸಂಘದ ಅಧ್ಯಕ್ಷರಾದ ಡಾ.ವಿ.ಎಸ್‌.ಕಾರ್ಚಿ ಅವರು,ಬಸವಂತ್ರಾಯ ದಮ್ಮೂರಮಠ ಅವರು,ಆಧ್ಯಾತ್ಮಿಕ ಚಿಂತನಕಾರರು ಮಾತೋಶ್ರೀ ಶರಣೆ ಶಾಂತಮ್ಮ ತಾಯಿ ಕೋಳೂರ ಅವರು.ಮುದ್ದೇಬಿಹಾಳ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಎಮ್ ಎಸ್ ಬಡದಾನಿ ಅವರು, ಉಪನ್ಯಾಸಕರು,ಪುರಾಣಿಕರು ಆಗಿರುವ ಶ್ರೀ ಐ.ಬಿ.ಹಿರೇಮಠ ಹಾಗೂ ಶ್ರೀ ವಿರುಪಾಕ್ಷಯ್ಯ ಕಟಾಪುರ ಮಠ ಅವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ತಾಳಿಕೋಟೆ ,ಮುದ್ದೆಬಿಹಾಳ,ಹುಣಸಗಿ,ಇಲಕಲ್ ಮುಂತಾದ ಕಡೆಗಳಿಂದ ಆಗಮಿಸಿದ ಸಾಹಿತ್ಯಾಸಕ್ತರು ,ಶಿಕ್ಷಕರು,ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು,ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.ಜನಪದ ಚಿಂತಕ ಸಾಹಿತಿ ಗುಂಡುರಾವ್ ಧನಪಾಲ್ ಅವರು ಪ್ರಾಸ್ಥಾವಿಕ ಮಾತನಾಡಿದರು.