ಪಂ. ಸಾತಲಿಂಗಪ್ಪ ಹೂಗಾರ ದೇಸಾಯಿ ಕಲ್ಲೂರಗೆ ಶಿಷ್ಯವೃಂದದಿಂದ ಗುರುವಂದನೆ-ಸಂಗೀತೋತ್ಸವ
Pm. Satalingappa Hugar Desai Kallur receives Guru Vandana from his disciples
ಧಾರವಾಡ 26: ತಬಲಾವಾದಕ ಪಂ. ಶಂಕ್ರ್ಪ ಭೀಮಾಬಾಯಿ ಹೂಗಾರ ಸಂಗೀತ ಸಂಘವು ದಿನಾಂಕ: 27.07.2025ರಂದು ಮುಂಜಾನೆ 9.30 ಗಂಟೆಗೆ ಧಾರವಾಡದ ಬೇಂದ್ರೆ ಭವನದಲ್ಲಿ ಪಂ. ಸಾತಲಿಂಗಪ್ಪ ಹೂಗಾರ ದೇಸಾಯಿ ಕಲ್ಲೂರ ಅವರಿಗೆ ಶಿಷ್ಯವೃಂದದಿಂದ ಗುರುವಂದನೆ-ಸಂಗೀತೋತ್ಸವ ಕಾರ್ಯಕ್ರಮವನ್ನು ಏರಿ್ಡಸಲಾಗಿದೆ.
ಖ್ಯಾತ ಹಿಂದೂಸ್ಥಾನಿ ಗಾಯಕ ಪದ್ಮಶ್ರೀ ಪಂ. ಎಮ್.ವೆಂಕಟೇಶಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ, ಹಿರಿಯ ವಯೋಲಿನ್ ವಾದಕ ಪಂ. ವಾದಿರಾಜ ನಿಂಬರಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಹಿರಿಯ ನ್ಯಾಯವಾದಿ ಡಾ.ಉದಯಕುಮಾರ ದೇಸಾಯಿ ಅಧ್ಯಕ್ಷತೆ ವಹಿಸುವರು.
ಪಂ. ಸಾತಲಿಂಗಪ್ಪ ಹೂಗಾರ ದೇಸಾಯಿ ಕಲ್ಲೂರ ಅವರಿಗೆ ಶಿಷ್ಯವೃಂದದಿಂದ ಗುರುವಂದನೆ ಸಲ್ಲಿಸಿ, ಸನ್ಮಾನಿಸುವರು.
ನಂತರ ಜರುಗುವ ಸಂಗೀತೋತ್ಸವದಲ್ಲಿ ಕಲಬುರಗಿಯ ಗಾಯಕ ಶಂಕರ ಹೂಗಾರ ದೇಸಾಯಿ ಕಲ್ಲೂರ ಹಾಗೂ ಉಮೇಶ ಮುನವಳ್ಳಿ ಹಿಂದೂಸ್ಥಾನಿ ಗಾಯನ ಪ್ರಸ್ತುತ ಪಡಿಸುವರು. ಸಂವಾದಿನಿಯಲ್ಲಿ ವಿನೋದ ಪಾಟೀಲ ಹಾಗೂ ತಬಲಾದಲ್ಲಿ ರಘುನಂದನಗೋಪಾಲ ಹೂಗಾರ ಸಾಥ್ ಸಂಗತ ನೀಡುವರು.
ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಕಾರ್ಯಕ್ರಮ ಜರುಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ಮುನವಳ್ಳಿ, ಪ್ರಕಾಶ ಬಾಳಿಕಾಯಿ ಮತ್ತಿತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 