ಘಂಟೆಗಳಲ್ಲಿ 24 ಎಕರೆ ಹತ್ತಿ ಹೊಲ ಉಳಿಮೆ
Ploughing of a 24-acre cotton field in hours
ತಾಳಿಕೋಟಿ 21: ತಾಲೂಕಿನ ಹಿರೂರ ಗ್ರಾಮದ ರೈತ ಚಿದಪ್ಪ ಕೆಂಚಪ್ಪ ಪೂಜಾರಿ ಇವರು 10:00 ಘಂಟೆಗಳಲ್ಲಿ 24 ಎಕರೆ ಹತ್ತಿ ಹೊಲವನ್ನು ಹರಗಿ ಸಾಧನೆಯನ್ನು ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಿರೂರ ಗ್ರಾಮದ ರೈತರಾದ ಚಿದಪ್ಪ ಪೂಜಾರಿ ಅವರು ತಮ್ಮ ಹತ್ತಿ ಹೊಲದಲ್ಲಿ ಗುರುವಾರ ಬೆಳಗಿನ ಜಾವ 4:00 ಗಂಟೆಯಿಂದ ಹರಗುವುದನ್ನು ಆರಂಭಿಸಿ ಮಧ್ಯಾಹ್ನ 2 ಗಂಟೆಯವರೆಗೆ ನಿರಂತರವಾಗಿ ಗಳೇ ಹೊಡೆದಿದ್ದಾರೆ. 24 ಎಕರೆ ಹೊಲವನ್ನು ಕೇವಲ 10 ಗಂಟೆಗಳಲ್ಲಿ ಹರಗಿ ಶ್ರೇಷ್ಠ ಸಾಧನೆಯನ್ನು ಮಾಡಿದ್ದಾರೆ. ಅವರ ಈ ಸಾಧನೆಯನ್ನು ಮೆಚ್ಚಿದ ಗ್ರಾಮಸ್ಥರು ಅವರ ಬೃಹತ್ ಮೆರವಣಿಗೆಯನ್ನು ನಡೆಸಿ, ಪಟಾಕಿ ಸಿಡಿಸಿ ಗುಲಾಲು ಎರಚಿ ಸಂಭ್ರಮಿಸಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಪ್ರಗತಿಪರ ರೈತರಾದ ಪರಮಾನಂದ ಪೂಜಾರಿ, ಬೀರ್ಪ ಪೂಜಾರಿ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 