ಗದಗ ಮೀಡಿಯಾ ಕ್ರಿಕೆಟ್ ಲೀಗ್‌-2026ಕ್ಕೆ ಆಟಗಾರರ ಆಯ್ಕೆ

ಗದಗ ಮೀಡಿಯಾ ಕ್ರಿಕೆಟ್ ಲೀಗ್‌-2026ಕ್ಕೆ ಆಟಗಾರರ ಆಯ್ಕೆ Player selection for Gadag Media Cricket League 2026

  ಗದಗ 22: ಪತ್ರಿಕಾ  ದಿನಾಚರಣೆ - 2026 ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದಿಂದ ಆಯೋಜಿಸಲಾಗುತ್ತಿರುವ ಗದಗ ಮೀಡಿಯಾ ಕ್ರಿಕೆಟ್ ಲೀಗ್‌ಹಿ2026 ಪಂದ್ಯಾವಳಿಗೆ ಬುಧವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು.  ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ನಾಲ್ಕು ಮಾಧ್ಯಮ ತಂಡಗಳು ಲೀಗ್ನಲ್ಲಿ ಭಾಗವಹಿಸಲಿವೆ. ಜಗದೀಶ್ ಎಸ್‌.ಪಿ. ಮಾಲೀಕತ್ವದ ರೂರಲ್ ಕಿಂಗ್ಸ್‌, ಅಜಿತ್ ಹೊಂಬಾಳೆ ಮಾಲೀಕತ್ವದ ಆರ್ಸಿಬಿ, ಅನಂತ ಕಾಕರಾಳ ಹಾಗೂ ಟಿ.ಎನ್‌. ಬಾಂಡಗೆ ಮಾಲೀಕತ್ವದ ವಿನ್ನರ್ಸ, ಎಚ್‌.ಎಂ. ಶರೀಫ್ ಹಾಗೂ ಆನಂದಯ್ಯ ವೀರಕ್ತಮಠ ಮಾಲೀಕತ್ವದ ನೈಟ್ ರೈಡರ್ಸ್‌ ತಂಡಗಳು ಕಣಕ್ಕಿಳಿಯಲಿವೆ.  

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಕಾರ್ಯನಿರತ ಪತ್ರಕರ್ತರ ಸಂಘದಿಂದ ಮೊದಲ ಬಾರಿಗೆ ಕ್ರಿಕೆಟ್ ಲೀಗ್ ಆಯೋಜಿಸಿರುವುದು ಸಂತಸದ ಸಂಗತಿಯಾಗಿದೆ. ದಿನನಿತ್ಯದ ಒತ್ತಡದ ಕೆಲಸಗಳ ನಡುವೆ ಪತ್ರಕರ್ತರಿಗೆ ಕ್ರೀಡೆಯ ಮೂಲಕ ನೆಮ್ಮದಿ ಮತ್ತು ಮನರಂಜನೆ ದೊರೆಯಲಿ ಎಂಬ ಉದ್ದೇಶದಿಂದ ಲೀಗ್ ಆಯೋಜಿಸಲಾಗಿದೆ. ಎಲ್ಲಾ ಆಟಗಾರರು ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡು ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.  

ನೈಟ್ ರೈಡರ್ಸ್‌ ತಂಡದ ಮಾಲೀಕ ಆನಂದಯ್ಯ ವೀರಕ್ತಮಠ ಮಾತನಾಡಿ, ಜಿಲ್ಲಾ ಘಟಕವು ಈ ವರ್ಷ ಹಲವು ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈಗಾಗಲೇ ಚೆಸ್ ಹಾಗೂ ಕ್ಯಾರಂ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿದೆ. ಇದೀಗ ಕ್ರಿಕೆಟ್ ಲೀಗ್ ಕೂಡ ಆಯೋಜಿಸಿರುವುದು ಶ್ಲಾಘನೀಯ. ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇ????? ಕ್ರೀಡಾ ಮನೋಭಾವದಿಂದ ಸ್ಪರ್ಧಿಸುವುದು ಸಂತಸದ ವಿಚಾರ ಎಂದು ಹೇಳಿದರು.  

ಬಳಿಕ ಡ್ರಾ ಮೂಲಕ ಆಟಗಾರರನ್ನು ನಾಲ್ಕು ತಂಡಗಳಿಗೆ ಹಂಚಿಕೆ ಮಾಡಲಾಯಿತು.  ಈ ಸಂದರ್ಭದಲ್ಲಿ ಎಚ್‌.ಎಂ. ಶರೀಫ್, ಜಗದೀಶ್ ಎಸ್‌.ಪಿ., ಅನಂತ ಕಾಕರಾಳ, ಶರಣು ದೊಡ್ಡೂರ, ಅಜಿತ್ ಹೊಂಬಾಳೆ, ಅರುಣಕುಮಾರ ಹಿರೇಮಠ, ವೆಂಕಟೇಶ್ ಇಮ್ರಾಪೂರ, ಸಂಜೀವಕುಮಾರ ಪಾಂಡ್ರೆ, ಗೀರೀಶ್ ಕಮ್ಮಾರ, ಸಂತೋಷ ಕೊಣ್ಣೂರ, ಅನಿಲ್ ತೆಂಬದಮನಿ, ಬನೇಶ ಕುಲಕರ್ಣಿ, ಸುರೇಶ್ ಕಡ್ಲಿಮಟ್ಟಿ, ಶಿವಕುಮಾರ ಕುಷ್ಟಗಿ, ಶಿವಾನಂದ ಹಿರೇಮಠ, ಮಂಜುನಾಥ ಶಿರಸಂಗಿ, ಮಂಜು ಪಟ್ಟಾರ, ಪ್ರಕಾಶ ಗುಡ್ಡಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.