ಗಾರ್ಡನ್ನಿನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ

ಗಾರ್ಡನ್ನಿನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ Planting of plants in the garden begins

ಬ್ಯಾಡಗಿ   17: ಪಟ್ಟಣದ ನಾಗರೀಕರು ಹಾಗೂ ಪಟ್ಟಣದ ಹೊರಗಿನ ಬಡಾವಣೆ ನಿವಾಸಿಗಳು ಗಿಡ ಮರಗಳನ್ನು ಹಚ್ಚುವದು ಹಾಗೂ ರಕ್ಷಣೆ ಮಾಡುವತ್ತ ಒಲವು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹಸಿರು ಉಸಿರು ತಂಡದ ಮುಖ್ಯಸ್ಥ ನಂದೀಶ ವೀರನಗೌಡ್ರ ಹೇಳಿದರು. 

ಪಟ್ಟಣದ ಕದರಮುಂಡಲಗಿ ರಸ್ತೆಯ ಪಕ್ಕದಲ್ಲಿ ಇರುವ ಸ್ವಾಮಿ ಅಯ್ಯಪ್ಪ ದೇವಸ್ಥಾನ ಪಕ್ಕದಲ್ಲಿ ಇರುವ ಬಡಾವಣೆ ಗಾರ್ಡನ್ನಿನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಹಲವಾರು ವರ್ಷಗಳಿಂದ ನಮ್ಮ ತಂಡ ಸ್ವಂತ ಹಣ ಖರ್ಚು ಮಾಡಿ ಪಟ್ಟಣದ 25 ಬಡಾವಣೆಗಳಲ್ಲಿ ಗಿಡ ಬೆಳೆಸುವ ಕಾರ್ಯ ಮಾಡುತ್ತಿದೆ.  

ಹಲವಾರು ಜಾತಿಯ ಹೂವಿನ ಹಣ್ಣಿನ ನೆರಳಿನ ಗಿಡ ಬೆಳೆಸಲು ನಿರಂತರ ಯತ್ನ ನಡೆದಿದೆ. ಈ ಕಾರ್ಯದಲ್ಲಿ ರೋಟರಿ ಕ್ಲಬ್ ಸದಸ್ಯರ ಸಹಕಾರವಿದೆ ಆದರೆ ಬಡಾವಣೆ ಜನರು ಹಚ್ಚಿದ ಗಿಡಗಳಿಗೆ ನೀರು ಹಾಕಿಸುವದಿಲ್ಲ. ದನಗಳು ಆಡು ಕುರಿಗಳು ಕಡಿದು ಹಾಳು ಮಾಡಿದರೂ ಸಹ ಕಣ್ಣೆತ್ತಿ ನೋಡುವದಿಲ್ಲ. ಇದರಿಂದ ನಮಗೆಲ್ಲ ಬಹಳ ನೋವಿದೆ ಎಂದರು.ರೋಟರಿ ಕ್ಲಬ್ ನೂತನ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ ಮಾತನಾಡಿ ಹಸುರಿನಿಂದ ಉತ್ತಮ ಆಮ್ಲಜನಕ ಹಾಗೂ ನೆಮ್ಮದಿ ನೆರಳು ಸಿಗುತ್ತದೆ. ನಾವು  ಕೂಡ ನಮ್ಮ ಕ್ಲಬ್ಬಿನಿಂದ ನೀರು ಹಾಕಿಸಲು ಸಹಕಾರ ನೀಡುತ್ತೇವೆ ಎಂದರು. ಇನ್ನರ್ವೀಲ್ ನೂತನ ಅಧ್ಯಕ್ಷೆ ಪ್ರತಿಭಾ ಮೇಲಗಿರಿ ಮಾತನಾಡಿ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಬಾರದು. ಗಿಡ ಮರಗಳ ಬಗ್ಗೆ ಕಾಳಜಿ ವಹಿಸಿ ಪರಿಸರ ಸ್ವಚ್ಛ ಹಾಗೂ ಉತ್ತಮವಾಗಿರುವಂತೆ ಕಾಳಜಿ ವಹಿಸಬೇಕು ಎಂದರು:  

ಹಸಿರು ಉಸಿರು ತಂಡದ ಶಿವಣ್ಣ ಹೊಸಮನಿ. ಗಣೇಶ ವೇರಣೆಕರ. ಮಾಲತೇಶ ಉಪ್ಪಾರ.ಮಾಲತೇಶ ಭಂಡಾರಿ. ಪ್ರದೀಪ ಸದ್ದಲಗಿ.ಮುರುಗೇಶ್ ಮೋಟೆಬೆನ್ನೂರ್‌. ರೋಟರಿ ಕ್ಲಬ್ನ ಪರಶುರಾಮ ಮೇಲಗಿರಿ. ಶಿವರಾಜ ಚೂರಿ. ಮಾಲತೇಶ ಅರಳಿಮಟ್ಟಿ. ಸುರೇಶ ಗೌಡರ. ಪವಾಡೆಪ್ಪ ಆಚಾನೂರ. ವಿಶ್ವನಾಥ ಅಂಕಲಕೋಟಿ. ಇನ್ನರ್ವೀಲ್ ಕ್ಲಬ್ನ ವಿಜಯಲಕ್ಷ್ಮೀ ಗೌಡರ. ಸಂಧ್ಯಾರಾಣಿ ದೇಶಪಾಂಡೆ. ವಿಜಯ ಲಕ್ಷ್ಮೀ ಯಾದವಾಡ ಹಾಗೂ ಮೂರೂ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.