ಪತಂಜಲಿ ಯೋಗ ಪೀಠದಿಂದ ಸಸ್ಯಕ್ಷೇತ್ರ ಅಭಿಯಾನಕ್ಕೆ ಚಾಲನೆ

ಪತಂಜಲಿ ಯೋಗ ಪೀಠದಿಂದ ಸಸ್ಯಕ್ಷೇತ್ರ ಅಭಿಯಾನಕ್ಕೆ ಚಾಲನೆ  Plantation drive launched by Patanjali Yoga Peeth

ಲೋಕದರ್ಶನ ವರದಿ  

ಧಾರವಾಡ 03:  ನಗರದ ಜೋಶಿ ಗಲ್ಲಿಯ ಗರಡಿ ಮನೆ ಯೋಗ ಕೇಂದ್ರದಲ್ಲಿ ಪತಂಜಲಿ ಯೋಗ ಪೀಠ, ಕರ್ನಾಟಕದ ವತಿಯಿಂದ ಅಂತಾರಾಷ್ಟ್ರೀಯ ಯೋಗ ಗುರು ಹಾಗೂ ಪತಂಜಲಿ ಯೋಗ ಪೀಠ ಕರ್ನಾಟಕದ ಹಿರಿಯ ರಾಜ್ಯ ಪ್ರಭಾರಿ ಶ್ರೀ ಭವರಲಾಲ್ ಆರ್ಯ ಅವರ ನೇತೃತ್ವದಲ್ಲಿ ಗಿಡಮೂಲಿಕೆ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.  ಪತಂಜಲಿ ಯೋಗ ಪೀಠ ಹರಿದ್ವಾರದ ಸಂಸ್ಥಾಪಕರಾದ ಆಯುರ್ವೇದ ರತ್ನ ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನದ ಶುಭ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  

25 ಸಾವಿರಕ್ಕೂ ಹೆಚ್ಚು ಗಿಡಮೂಲಿಕೆ ಸಸಿಗಳ ವಿತರಣೆಗೆ ಸಂಕಲ್ಪ  

ಕಾರ್ಯಕ್ರಮದಲ್ಲಿ ಮಾತನಾಡಿದ ಭವರಲಾಲ್ ಆರ್ಯ ಅವರು, ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನದ ಅಂಗವಾಗಿ ಆಗಸ್ಟ್‌ ತಿಂಗಳಾದ್ಯಂತ ಕರ್ನಾಟಕದ ಎಲ್ಲಾ ಜಿಲ್ಲೆ, ನಗರ, ತಾಲೂಕು, ಗ್ರಾಮ ಹಾಗೂ ವಾರ್ಡ್ಗಳಲ್ಲಿ ಉಚಿತವಾಗಿ 25 ಸಾವಿರಕ್ಕೂ ಹೆಚ್ಚು ಗಿಡಮೂಲಿಕೆ ಸಸಿಗಳನ್ನು ವಿತರಿಸಿ, ಅವುಗಳನ್ನು ನೆಟ್ಟು ಬೆಳೆಸುವ ಅಭಿಯಾನವನ್ನು ಧಾರವಾಡದಿಂದ ಆರಂಭಿಸಲಾಗಿದೆ ಎಂದು ಹೇಳಿದರು.  

ಪತಂಜಲಿ ಕರ್ನಾಟಕದ 1,500ಕ್ಕೂ ಹೆಚ್ಚು ಉಚಿತ ಯೋಗ ಕೇಂದ್ರಗಳು ಹಾಗೂ ವಿವಿಧ ಸ್ಥಳಗಳಲ್ಲಿ ಗಿಡಮೂಲಿಕೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.