ಏರುತ್ತಿರುವ ತಾಪಮಾನ ರಕ್ಷಣೆಗೆ ಸಸ್ಯ ಕ್ರಾಂತಿ ಅವಶ್ಯಕ- ಶಾಸಕ ಪಠಾಣ
Plant revolution is necessary to protect against rising temperatures - MLA Pathana
ಲೋಕದರ್ಶನ ವರದಿ
ಏರುತ್ತಿರುವ ತಾಪಮಾನ ರಕ್ಷಣೆಗೆ ಸಸ್ಯ ಕ್ರಾಂತಿ ಅವಶ್ಯಕ- ಶಾಸಕ ಪಠಾಣ
ಶಿಗ್ಗಾವಿ 07: ಜಾಗತೀಕರಣದ ವೇಗದಲ್ಲಿ ಭೂಮಂಡಳದ ಹಸರೀಕಣವನ್ನು ಮರೆತಿದ್ದೇವೆ. ಏರುತ್ತಿರುವ ತಾಪದಿಂದ ರಕ್ಷಣೆ ನೀಡುತ್ತಿರುವ ಓಜೋನಕೂಡಾ ನಾಶವಾಗುತ್ತಿದೆ, ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಲು ಇನ್ನೂ ಸಮಯವಿದ್ದು ಪ್ರಜ್ಞಾಪೂರ್ವಕವಾಗಿ ನಮ್ಮ ಕ್ಷೇತ್ರದಲ್ಲಿ ಸಸ್ಯ ಕ್ರಾಂತಿ ಮಾಡುವ ಮೂಲಕ ಮಾದರಿಯಾಗಿಸುವ ಗುರಿ ಇದೆ ಎಂದು ಶಾಸಕ ಯಾಸೀರಖಾನ ಪಠಾಣ ಹೇಳಿದರು.
ತಾಲೂಕಿನ ಗಂಜಿಗಟ್ಟಿ ಗ್ರಾಮದ ಐಟಿಐ ಕಾಲೇಜಿನಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಸಾಮಜಿಕ ಅರಣ್ಯ ಇಲಾಖೆಯ ಮೂಲಕ ಲಕ್ಷಾಂತರ ಗಿಡಗಳನ್ನು ಪ್ರತಿವರ್ಷ ರಸ್ತೆ ಬದಿಗಳಲ್ಲಿ ನೆಡುತ್ತಿದ್ದು, ವಿವಿಧ ಕಾಮಗಾರಿಗಳು ಮತ್ತು ಪ್ರಜ್ಞಾ ಹೀನತೆಯಿಂದ ಹಾಳಾಗುತ್ತಿರುವುದನ್ನು ಕಂಡು, ವಿನೂತನ ಯೋಜನೆಯನ್ನು ಮಾಡಲಾಗಿದ್ದು ಕ್ಷೇತ್ರದ ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸ್ಮಶಾಣಗಳು, ಖಾಲಿ ಬೆಟ್ಟಗಳಲ್ಲಿ ಈ ಗಿಡಗಳನ್ನು ನೆಟ್ಟು ಸಂರಕ್ಷಿಸುವಂತೆ ನನ್ನ ಮೊದಲ ಕೆಡಿಪಿ ಸಭೆಯಲ್ಲಿಯೇ ಹೇಳಿದ್ದೆ. ಗಂಜಿಗಟ್ಟಿಯ ಏಟಿಐ ಕಾಲೇಜಿನಲ್ಲಿ ಹಚ್ಚಿರುವ 600 ಗಿಡಗಳು ಬೆಳದಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ವನಮೋಹತ್ಸಕ್ಕೆ ನಿಜವಾದ ಅರ್ಥ ಬರುವಂತೆ ಸಾಮಜಿಕ ಅರಣ್ಯ ಇಲಾಖೆ ಕಾರ್ಯ ಮಾಡುವ ಮೂಲಕ ಪ್ರಶಂಸಾ ಅರ್ಹರರಾಗಿದ್ದಾರೆ.
ಸುಮಾರು 40 ವರ್ಷಗಳಿಂದ ನಾನು ಭಾರತ ಮುಂದುವರೆಯುತ್ತಿರುವ ದೇಶ ಎಂದೇ ಕೇಳುತ್ತಿದ್ದೇವೆ. ನಮ್ಮ ನಿಜವಾದ ವೈರಿ ದೇಶ ಚಿನಾ ಆಗಿದ್ದು, ಅಲ್ಲಿಂದ ಅನೇಕ ವಸ್ತಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇಂದಿನ ವಿದ್ಯಾರ್ಥಿಗಳು ಹೊಸ ಹೊಸ ಅನ್ವೇಶಣೆಗಳನ್ನು ಮಾಡುವ ಮೂಲಕ ದೇಶವನ್ನು ಅಭಿವೃದ್ದಿ ಮಾಡಬೇಕು. ಮುಂದಿನ ದಿನಗಳಲ್ಲಿ 5ಸಾವಿರ ಸಾಪ್ಟವೇರ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಗುರಿಯನ್ನು ಹೊಂದಿದ್ದೇನೆ. ಎಲ್ಲ ವಿದ್ಯಾರ್ಥಿಗಳು ದುಶ್ಚಟಗಳು ಮತ್ತು ಮುಬೈಲ್ ದಿಂದ ದೂರ ಉಳಿದು ದೇಶವೆ ಮೊದಲು ಎಂದು ಭಾವಿಸಿಕೊಂಡು ತಮ್ಮ ಸಾಮರ್ಥ್ಯೆವನ್ನು ದೇಶವನ್ನು ಕಟ್ಟಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಎಸ್.ಎಪ್ ಮಣಕಟ್ಟಿ, ಶಂಕ್ರಣ್ಣ ಮಾರಂಬಿಡ, ಬಸವರಾಜ ದಾಸರ, ಚನ್ನಪ್ಪ ಚಿನ್ನಪ್ಪನವರ, ಸದಾನಂದ ಸಾಲಿನ್ಸ, ಶಶಿಕಾಂತ ರಾಠೋಡ, ಪಂಚಾಕ್ಷರ್ಪ ತೆಗ್ಗಿಹಳ್ಳಿ, ಈರಣ್ಣ ಗಂಜಿಗಟ್ಟಿ ಭಾಗ್ವಾನ, ಚಂದ್ರಣ್ಣ, ಕೇಮ್ಸಿಂಗ ರಾಠೋಡ, ಹನುಮರೆಡ್ಡಿ ನಡುವಿನಮನಿ ಇತರರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 