ಮನೆಗೊಂದು ಮರ ಬೆಳೆಸಿ ನಗರವನ್ನು ನಂದನ ವನ ವನ್ನಾಗಿ ಮಾಡಿ: ನದಾಫ್

ಮನೆಗೊಂದು ಮರ ಬೆಳೆಸಿ ನಗರವನ್ನು ನಂದನ ವನ ವನ್ನಾಗಿ ಮಾಡಿ: ನದಾಫ್  Plant a tree at home and turn the city into a paradise: Nadaf

                          ಕೊಪ್ಪಳ 25: ಎಲ್ಲಾ ರೋಗಗಳ ಮೂಲ ಆ ಸ್ವಚ್ಛತೆ ಯಾಗಿದೆ ,ಪ್ರತಿಯೊಬ್ಬರು ತಮ್ಮ ಮನೆಯ ಮುಂದಿನ ಪರಿಸರವನ್ನು ಸ್ವಚ್ಛವಾಗಿಡಬೇಕು, ಮತ್ತು ಮನೆಗೊಂದು ಮರ ಬೆಳೆಸಿ ನಗರವನ್ನು ನಂದನ ವನ ವನ್ನಾಗಿ ಮಾಡಿ ಎಂದು ನಿವೃತ್ತ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್ ರವರು ಹೇಳಿದರು, ಅವರು ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ ಪ್ರೌಢಶಾಲಾ ವಿಭಾಗದ 1998, 99ರ ಸಾಲಿನ ಎಸ್ ಎಸ್ ಎಲ್ ಸಿ ಹಳೆಯ ವಿದ್ಯಾರ್ಥಿಗಳ ಬಳಗ ಏರಿ​‍್ಡಸಿದ ಸ್ನೇಹಿತರ ಸಮ್ಮೇಳನ ಸಮಾರಂಭದಲ್ಲಿ ಸನ್ಮಾನಿತರಾಗಿ ಪಾಲ್ಗೊಂಡು ಹಳೆಯ ವಿದ್ಯಾರ್ಥಿಗಳ ಪರವಾಗಿ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು,

                       ಮುಂದುವರೆದು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಮನೆ ಮನೆಗೆ ಒಂದು ಮರ ಬೆಳೆಸಬೇಕು ಗಿಡಮರಗಳನ್ನು ನಮ್ಮ ಮಕ್ಕಳಂತೆ ಅದಕ್ಕೆ ಪೋಷಿಸಿ ಬೆಳೆಸಬೇಕು ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ಬಹಳಷ್ಟು ಅನುಕೂಲ ವಾಗಲಿದೆ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದ ಅವರು ಕಾಲೇಜ್ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ಸ್ನೇಹಿತರ ಸಮ್ಮೇಳನದ ಜೊತೆಗೆ ಗಿಡ ಮರ ಬೆಳೆಸಿ ಪರಿಸರ ಉಳಿಸಿ ಅದರ ಬಗ್ಗೆ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದ್ದು ಅವರೆಲ್ಲರ ಈ ಕೆಲಸ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನಿವೃತ್ತಿ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್ ಅಭಿಪ್ರಾಯ ಪಟ್ಟರು, ಸಮಾರಂಭದಲ್ಲಿ 1998 99ರ ಸಾಲಿನ ಎಸ್ ಎಸ್ ಎಲ್ ಸಿ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಇತರ ಹಿರಿಯ ನಿವೃತ್ತ ಶಿಕ್ಷಕರು ಗಣ್ಯರು ಸಾರ್ವಜನಿಕರು ವಿದ್ಯಾರ್ಥಿಗಳ ಪಾಲಕರು ಅನೇಕರು ಉಪಸ್ಥಿತರಿದ್ದರು,