ಮನೆಗೊಂದು ಗಿಡ ನೆಡಿ : ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ
Plant a tree at home
ಶಿಗ್ಗಾವಿ 16: ಪ್ರತಿಯೊಬ್ಬರು ಮನೆಗೆ ಒಂದರಂತೆ ನಿಮಗೆ ಇಷ್ಟವಾದ ಗಿಡ ನೀಡುವುದರಿಂದ ಮುಂದಿನ ನಮ್ಮ ಮಕ್ಕಳಿಗೆ ಉತ್ತಮ ವಾತಾವರಣವನ್ನು ಕಲ್ಪಿಸಬಹುದು ಎಂದು ಹೆಸ್ಕಾಂ ಅಧ್ಯಕ್ಷ ಸೈಯದ ಅಜ್ಜಂಪೀರ ಖಾದ್ರಿ ಹೇಳಿದರು. ಪಟ್ಟಣದ 5 ನೇ ವಾರ್ಡನಲ್ಲಿ ವನಮಹೋತ್ಸವದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಪ್ರತಿ ವರ್ಷ ಬೇರೆ, ಬೇರೆ ಧೈಯ ವಾಕ್ಯದೊಂದಿಗೆ ಪರಿಸರ ದಿನ ಆಚರಿಸಲಾಗುತ್ತದೆ.ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲಿ ಜಾಗೃತಿ ಮೂಡಿಸುವುದು ಮತ್ತು ಪರಿಸರ ಹಾಳು ಮಾಡದಂತೆ ತಡೆಯುವುದಾಗಿದೆ ತಿಳಿಸಿದರು.
ಈ ಸಂದರ್ಭದಲ್ಲಿ ಭಾವನಮಠ ಸಾಧುಮಹಾರಾಜ ಕಾಳೆ, ಬಂಕಾಪೂರದ ಕುತುಬೇ ಅಲಂಖಾದ್ರೀ, ವಾರ್ಡ ಪುರಸಭೆ ಸದಸ್ಯೆ ನಸ್ರೀನಬಾನು ತಿಮ್ಮಾಪೂರ, ಕಾಂಗ್ರೆಸ್ ಮುಖಂಡ ಮುಕ್ತಾರಖಾನ ತಿಮ್ಮಾಪೂರ, ಕಾರ್ಮಿಕ ವಿಕಾಸ ವೇದಿಕೆ ಅಧ್ಯಕ್ಷ ಇಮಾಮಹುಸೇನ ಅದಂಬಾಯಿ, ಸುಭಾಸ ಕಾಳೆ, ಅಜಾಧ್ ಜಮಾಧಾರ, ಮಹ್ಮದಹುಸೇನ ಧಾರವಾಡ, ಮಹ್ಮದಗೌಸ ಸವಣೂರ, ಶಿಕ್ಷಕರಾದ ಬಸವರಾಜ ಬಸರೀಕಟ್ಟಿ, ಚರಂತಿಮಠ, ವಿದ್ಯಾವತಿ ಹೂಗಾರ, ನಾಗರಾಜ ಹುಲೇಕಲ್, ಭರತಕುಮಾರ ಕಳ್ಳಿಮನಿ, ಭಾರತಿ ಹೂಗಾರ, ಬಸವರಾಜ ಮಮದಾಪೂರ, ಮೋಹನ ಹಿರೂಲಾಲ ಸೇರಿದಂತೆ ಉರ್ದು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಜಿಲಾನಿ ಜಂಗ್ಲಿ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 