ಸಸ್ಯ ಶ್ರಾವಣ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ25 : ಪ್ರತಿಯೋಂದು ಜೀವಿಯೂ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ, ಹಾಗೇಯೇ ತನ್ನ ಅಸ್ಥಿತ್ವಕ್ಕೆ ಕಾರಣವಾಗಿರುವ ಪ್ರಕೃತಿಯನ್ನು ಕಾಪಾಡುವ ಕೆಲಸವನ್ನು ಮನುಷ್ಯ ಮರೆಯಬಾರದು ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕಂಕನವಾಡ ಗ್ರಾಮದಲ್ಲಿ ಐದನೇ ದಿನವಾದ ಶುಕ್ರವಾರ ಸಸ್ಯ ಶ್ರಾವಣ ಕಾರ್ಯಕ್ರಮದಲ್ಲಿ ಗ್ರಾಮದ ಮನೆಗಳಿಗೆ ಸಸಿ ವಿತರಿಸಿ ಮಾತನಾಡಿದ ಅವರು ಪ್ರಕೃತಿ ಕುರಿತು ಪೂವರ್ಿಕರು ಅನುಸರಿಸಿದ ಕ್ರಮ ಇಂದಿಗೂ ಪ್ರಸ್ತುತ ಹಾಗೂ ಇಂದಿನ ಜನತೆಗೆ ಅನುಕರಣೀಯವಾಗಬೇಕಿದೆ ಅದರೊಂದಿಗೆ "ಸಸಿ ನೆಟ್ಟು, ಬರ ಅಟ್ಟು" ಎಂಬ ದ್ಯೇಯ ವಾಕ್ಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪ್ರಕೃತಿಯನ್ನು ನಾವು ಸಂರಕ್ಷಿಸಿದರೆ ಮಾತ್ರ ಜೀವ ಸಂಕುಲ ನಮ್ಮನ್ನು ಸಂರಕ್ಷಿಸುತ್ತದೆ ಇಲ್ಲವಾದರೆ, ಈ ಭೂಮಿಯಿಂದ ಜೀವ ವೈವಿದ್ಯಗಳು ನಿದಾನವಾಗಿ ಕಣ್ಮರೆಯಾಗುತ್ತವೆ ಎಂದರು.
ಕರವೇ ಸ್ವಾಭಿಮಾನಿ ಬಣದ ಜಿಲ್ಲಾದ್ಯಕ್ಷ ರಾಮು ತಳವಾರ ಮಾತನಾಡಿ, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಈ ನಿಟ್ಟಿನಲ್ಲಿ ಸಂಗನಬಸವ ಶ್ರೀಗಳು ಇಂದು ಕರವೇ ಉಪಸ್ಥಿತಿಯಲ್ಲಿ ಕಂಕನವಾಡ ಗ್ರಾಮ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಚಿತ ಸಸಿ ನೀಡಿ ಪರಿಸರ ಹಾಗೂ ಪ್ರಕೃತಿಯ ಮುನಿಸಿನ ಬಗ್ಗೆ ಇರುವ ಅರಿವಿನ ಕುರಿತು ತಿಳಿ ಹೇಳಿ ಜನಜಾಗೃತಿಯ ಮೂಲಕ ಎಚ್ಚರಿಸುವ ಕಾರ್ಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಜೊತೆಗೆ ವಿವಿಧ ಸಮಘಟನೆಗಳ ಸಹಭಾಗಿತ್ವದಲ್ಲಿ ಮುನ್ನುಡೆಯುತ್ತಿರುವುದು ಸ್ವಾಗತಾರ್ಹದ ಕಾರ್ಯವಾಗಿದೆ ಎಂದರು.
ಮಕ್ಕಳಂತೆ ಪೋಷಿಸಿ ಬೆಳಸಲು ಮನವಿ ಮೂಲಕ ಗ್ರಾಮದ ತುಂಬೆಲ್ಲಾ ಸಸಿ ನೀಡಿ ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಶೇಖರಗೌಡ ಪಾಟೀಲ, ಗಿರಿಧರಗೌಡ ಪಾಟೀಲ, ಯಲ್ಲಪ್ಪ ವಾಲ್ಮೀಕಿ, ಶಿದ್ದನಗೌಡ ಪಾಟೀಲ, ಸೋಮನಗೌಡ ಪಾಟೀಲ, ಈಶ್ವರಗೌಡ ಪಾಟೀಲ ಹಾಗೂ ಕರವೇ ಕಾರ್ಯಕರ್ತರಾದ ಬಸವರಾಜ ಮಲ್ಲೂರ ಸೇರಿದಂತೆ ಕರವೇ ಪಧಾದಿಕಾರಿಗಳು ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 