ದೊಡ್ಡಾಟದಿಂದ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ರೂಪಿಸಲಾಗಿದೆ: ಸೊಲಬಕ್ಕನವರ
ಲೋಕದರ್ಶನ ವರದಿ
ಶಿಗ್ಗಾವಿ: ಭರತನಾಟ್ಯ,ಶಾಸ್ತ್ರೀಯ ಸಂಗೀತ, ಚಿತ್ರಕಲೆ, ವಸ್ತ್ರವಿನ್ಯಾಸ ವಿಷಯಗಳಲ್ಲಿ ಪರಿಣಿತಿ ಪಡೆದವರಿಗೆ ದೊಡ್ಡಾಟದ ಮೂಲಕ ಉದ್ಯೋಗಾವಕಾಶ ಕಲ್ಪಿಸುವ ವಿಶಿಷ್ಟ ಯೋಜನೆಯೊಂದನ್ನು ರೂಪಿಸಲಾಗಿದೆ ಎಂದು ಕನರ್ಾಟಕ ದೊಡ್ಡಾಟ(ಬಯಲಾಟ) ಟ್ರಸ್ಟ್ ಅಧ್ಯಕ್ಷ ಪ್ರೊ.ಟಿ.ಬಿ.ಸೊಲಬಕ್ಕನವರ ತಿಳಿಸಿದ್ದಾರೆ.
ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ನ ಜಾನಪದ ರಂಗಮಂದಿರದಲ್ಲಿ ವರದಿಗಾರರೊಂದಿಗೆ ಭಾನುವಾರ ಮಾತನಾಡಿ, ಜತೆಗೆ ಭಾರತೀಯ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಒಲವು ಹೊಂದಿರುವ ಆಸಕ್ತರಿಗೆ ಒಂದು ವರ್ಷ ಅವಧಿಯ ದೊಡ್ಡಾಟ ತರಬೇತಿ ನೀಡಲಾಗುವುದು.
ಉಚಿತ ಊಟ, ವಸತಿಯೊಂದಿಗೆ ಪ್ರತಿ ತಿಂಗಳು 8 ಸಾವಿರ ರೂ.ಸ್ಟೈಫಂಡ್ ನೀಡಲಾಗುವುದು ಎಂದು ತಿಳಿಸಿದರು.
ತರಬೇತಿ ವಿವರ: ನಟನೆ, ಹಾಡುಗಾರಿಕೆ, ನೃತ್ಯ (ಕೊರಿಯೋಗ್ರಾಫಿ), ಸ್ಟೇಜ್ ಕ್ರಾಫ್ಟ್ (ವೇದಿಕೆ ನಿಮರ್ಾಣ), ಪಂಚಮಹಾ ಚರ್ಮ ವ್ಯಾದ್ಯ, ಶಹನಾಯಿ, ವಸ್ತ್ರ ವಿನ್ಯಾಸ, ಪ್ರಸಾದನ ಹಾಗೂ ವೇಷಭೂಷಣ ತಯಾರಿಕೆ ವಿಷಯಗಳಲ್ಲಿ ತರಬೇತಿ ನೀಡಲಾಗುವುದು.
ಕನ್ನಡಿಗರು ನವೆಂಬರ್ 1,2018 ರೊಳಗೆ ಕನರ್ಾಟಕ ದೊಡ್ಡಾಟ(ಬಯಲಾಟ) ಟ್ರಸ್ಟ್, ಗೊಟಗೋಡಿ. ಅ/ಔ ಉತ್ಸವ ರಾಕ್ ಗಾರ್ಡನ್, ಗೊಟಗೋಡಿ ತಾ:ಶಿಗ್ಗಾಂವ, ಜಿಲ್ಲೆ: ಹಾವೇರಿ,581197 ಅಜರ್ಿ ಸಲ್ಲಿಸಬಹುದು ಎಂದು ತಿಳಿಸಿದರು.
ಗೊಟಗೋಡಿಯ ಕನ್ನಡ ಜಾನಪದ ಶಿಕ್ಷಣ ಸಂಸ್ಥೆ,ಉತ್ಸವ ರಾಕ್ ಗಾರ್ಡನ್ ಸಮಿತಿ ಹಾಗೂ ಶಿಲ್ಪಕಲಾ ಕುಟೀರದ ಸಹಯೋಗದೊಂದಿಗೆ 'ದೊಡ್ಡಾಟ' ತರಬೇತಿ ನೀಡಲಾಗುತ್ತಿದೆ ಎಂದು ಪ್ರೊ.ಟಿ.ಬಿ.ಸೊಲಬಕ್ಕನವರ ವಿವರಿಸಿದರು.
ಯೋಜನೆಯ ಉದ್ದೇಶ: ನುರಿತ ಕಲಾವಿದರಿಂದ ರಾಜ್ಯ ಹಾಗೂ ವಿದೇಶದಲ್ಲಿ 'ದೊಡ್ಡಾಟ ಕಲೆ' ಪರಿಚಯಿಸುವ ಹಾಗೂ ಜಾನಪದ ಕಲಾ ಪ್ರಕಾರಗಳ ಸವರ್ಾಂಗೀಣ ಅಭಿವೃದ್ಧಿಗೆ ಉತ್ತೇಜನ ನೀಡುವ ಮಹತ್ವಾಕಾಂಕ್ಷೆ ಟ್ರಸ್ಟ್ ಹೊಂದಿದ್ದು, ಅಗತ್ಯ ಪ್ರೋತ್ಸಾಹ ನೀಡಲಾಗುವುದು.
ಈಗಾಗಲೇ ನವೆಂಬರ್ 1, 2018 ರಿಂದ ಅಕ್ಟೋಬರ್ 31, 2019 ರ ವರೆಗೆ ವರ್ಷವೀಡಿ ದೊಡ್ಡಾಟ ಪ್ರದರ್ಶನ ನೀಡಲು ಟ್ರಸ್ಟ್ ಉದ್ದೇಶಿಸಿದ್ದು ಅಕ್ಟೋಬರ್ 1 ರಿಂದ 30 ರ ವರೆಗೆ ಶಿಬಿರಾಥರ್ಿಗಳಿಗೆ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ತರಬೇತಿ ನೀಡಲಾಗುತ್ತಿದೆ.
ಮುಕ್ತ ಅವಕಾಶ: ದೊಡ್ಡಾಟ ಕಲೆ ಉಳಿಸಿ ಬೆಳೆಸುವ ನಮ್ಮ ಪ್ರಯತ್ನಕ್ಕೆ ಜಾನಪದ ಕಲೆ ಪ್ರಿಯರು ಅಗತ್ಯ ಸಲಹೆ ಸೂಚನೆ ನೀಡಲು ಮುಕ್ತ ಅವಕಾಶವಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 