ಸ್ವಚ್ಛತಾ ಅಭಿಯಾನಕ್ಕೆ ಯೋಜನಾಧಿಕಾರಿ ನಂದೀಪ ರಾಠೋಡ : ಚಾಲನೆ

ಸ್ವಚ್ಛತಾ ಅಭಿಯಾನಕ್ಕೆ ಯೋಜನಾಧಿಕಾರಿ ನಂದೀಪ ರಾಠೋಡ : ಚಾಲನೆ  Planning Officer Nandeep Rathod launches cleanliness campaign

ಇಂಡಿ 04: ತಾಲ್ಲೂಕ ಪಂಚಾಯಿತಿ ಆವರಣದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಇಂಡಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ನಂದೀಪ್ ರಾಠೋಡ ಅವರು ಚಾಲನೆ ನೀಡಿದರು.ಜಿಲ್ಲಾ ಪಂಚಾಯತಿ ಆದೇಶದ ಅನ್ವಯ ತಿಂಗಳ ಮೊದಲ ಶನಿವಾರ ತಾಲೂಕಿನ ಒಳಗಡೆ ಮತ್ತು ಹೊರಗಡೆ ಸ್ವಚ್ಛತೆ ಕಾಪಾಡುವ ಹಿನ್ನೆಲೆಯಲ್ಲಿ  ಸ್ವತಃ ಅಧಿಕಾರಿಗಳು ಪೊರಕೆ ಹಿಡಿದು ಸಿಬ್ಬಂದಿಗಳೊಂದಿಗೆ ಕಚೇರಿ ಆವರಣವನ್ನು ಸ್ವಚ್ಛಗೊಳಿಸಿದರು.

ಈ ವೇಳೆ ಮಾತನಾಡಿದ ಯೋಜನಾಧಿಕಾರಿ ನಂದೀಪ್ ರಾಠೋಡ ಅವರು ತಾಲೂಕು ಕಚೇರಿ ಒಳಗೊಂಡಂತೆ ಗ್ರಾಮ ಪಂಚಾಯತಿಗಳಲ್ಲಿಯೂ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಪ್ರತಿ ತಿಂಗಳ ಮೊದಲನೇ ಶನಿವಾರ 2 - 3 ಗಂಟೆಗಳ ಕಾಲ ಸ್ವಚ್ಛತಾ  ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಾಲಯದ ಜನಸ್ನೇಹಿ ಕಚೇರಿಯ ವಾತಾವರಣ ನಿರ್ಮಿಸುವ ಹಿತದೃಷ್ಟಿಯಲ್ಲಿ ಮಾದರಿ ಕಚೇರಿಯನ್ನು ನಿರ್ಮಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈಗಾಗಲೇ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಮುರುಗೇಶ್ ನಾರಾಯಣಪುರ  ಜಿ ಕೆ ಲಾಳಸೇರಿ, ಪರಶುರಾಮ ಹೊಸಮನಿ, ಶ್ರೀಮತಿ ರಾಜಶ್ರೀ ಕಂಬಾರ ಭಾರತಿ ಅಂದೇವಾಡಿ  ಪ್ರದೀಪ ಹಿಳ್ಳಿ ಹನುಮಂತ ಮೇಟಿ ರಾಮಗೌಡ ಸರಬಡಗಿ ಹಾಗೂ ತಾಲೂಕ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.