ಕೊಪ್ಪಳ ನಗರಸಭೆಯಿಂದ ಪ್ಲಾಸ್ಟಿಕ್ ವಸ್ತುಗಳ ವಶ
ಕೊಪ್ಪಳ 26: ಕೊಪ್ಪಳ ನಗರದ ಫುಡ್ಪಾಯಿಂಟ್ ಬೇಕರಿಯಿಂದ ಲಕ್ಷ್ಮೀ ಚಿತ್ರಮಂದಿರದವರೆಗಿನ ವಿವಿಧ ಉದ್ದಿಮೆ ಮಳಿಗೆಗಳ ಮೇಲೆ ನಗರಸಭೆಯು ದಾಳಿ ನಡೆಸಿ, ಸುಮಾರು 15 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿಯೇ ನಾಶಗೊಳಿಸಿದೆ.
ಪೌರಾಡಳಿತ ನಿದರ್ೇಶನಾಲಯ ಬೆಂಗಳೂರು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ಕೊಪ್ಪಳ ಇವರ ಆದೇಶದನ್ವಯ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಿ, ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಗುರುವಾರದಂದು ಕೊಪ್ಪಳ ನಗರದ ತಹಸೀಲ್ ಕಛೇರಿ ರಸ್ತೆಯಲ್ಲಿರುವ ಫುಡ್ಪಾಯಿಂಟ್ ಬೇಕರಿಯಿಂದ ಲಕ್ಷ್ಮೀ ಚಿತ್ರಮಂದಿರದವರೆಗೆ ಇರುವ ವಿವಿಧ ಉದ್ದಿಮೆಗಳ ಮಳಿಗೆಗಳ ಮೇಲೆ ನಗರಸಭೆಯು ದಾಳಿ ನಡೆಸಿದ್ದು, ಸುಮಾರು 15 ಕೆಜಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಮತ್ತು ಪ್ಲಾಸ್ಟಿಕ್ ಕಪ್ಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿಯೇ ನಾಶಗೊಳಿಸಲಾಗಿದೆ. ಪರಿಸರ ಅಭಿಯಂತರ ಅಶೋಕ್, ಸಜ್ಜನ್, ಆರೋಗ್ಯ ನಿರೀಕ್ಷಕ ರಾಘವೇಂದ್ರ ಚವ್ಹಾಣ್ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 