ಪಿಕಾರ್ಡ ಬ್ಯಾಂಕನ ಇ-ಸ್ಟಾಂಪ್ ಕೇಂದ್ರಕ್ಕೆ ಚಾಲನೆ

ಪಿಕಾರ್ಡ ಬ್ಯಾಂಕನ ಇ-ಸ್ಟಾಂಪ್ ಕೇಂದ್ರಕ್ಕೆ ಚಾಲನೆ Picard Bank's e-stamp center inaugurated

ಸಿಂದಗಿ 21: ಪಟ್ಟಣದ ಪಿಕಾರ್ಡ ಬ್ಯಾಂಕ್ ತನ್ನ ವ್ಯವಹಾರದ ಜೊತೆಗೆ ರೈತರಿಗೆ ಅನುಕೂಲಕರವಾಗುವ ಕಾರ್ಯಮಾಡುತ್ತಿದೆ ಎಂದು  ಇಂಡಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಕೆ.ಎಚ್‌. ವಡ್ಡರ ಹೇಳಿದರು.  

ಪಟ್ಟಣದ ಪಿಕಾರ್ಡ ಬ್ಯಾಂಕಿನ ಆವರಣದಲ್ಲಿ ಗುರುವಾರ ಪಿಕಾರ್ಡ ಬ್ಯಾಂಕ ಪ್ರಾರಂಭಿಸಿದ ಇ-ಸ್ಟಾಂಪ್ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಬ್ಯಾಂಕ್‌ನಲ್ಲಿ ಸಾಲ ಪಡೆಯಲು ರೈತರು ಉತಾರಿ ಮತ್ತು ಇಸ್ಟಾಂಪ್ ತರಲು ಬೇರೆ ಬೇರೆ ಕಡೆಗೆ ಹೋಗಿ ಸಂಗ್ರಹಿಸುವುದು ಕಚಷ್ಟಕರವಾಗಿತ್ತು. ಇದನ್ನು ಮನಗಂಡು ಬ್ಯಾಂಕ್‌ನಲ್ಲಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿರು ಸಿಂದಗಿಯ ಪಿಕಾರ್ಡ ಬ್ಯಾಂಕ್ ಇತರ ಬ್ಯಾಂಕಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. 

ಪಿಕಾರ್ಡ ಬ್ಯಾಂಕ್‌ನ ವಿಶೇಷಾಧಿಕಾರಿಗಳು ಹಾಗೂ ಸಹಕಾರಿ ನಿಬಂಧಕರ ಕಾರ್ಯಾಲಯ ವಿಜಯಪುರದ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್‌. ರಾಠೋಡ ಮಾತನಾಡಿ, ಪಿಕಾರ್ಡ ಬ್ಯಾಂಕ್ ವ್ಯವಸ್ಥಾಪಕ ಸಂತೋಷ ಅಥರ್ಗಾ ಅವರು ತಮ್ಮ ಪ್ರಯತ್ನದಿಂದ ಬ್ಯಾಂಕನಿಂದ ರೈತ ಸೇವಾ ಕೇಂದ್ರವನ್ನು ಕಳೆದ ಮಾರ್ಚ ತಿಂಗಳಿನಲ್ಲಿ ಆರಂಭಿಸಿದ್ದಾರೆ. ಇಂದು ಇ-ಸ್ಟಾಂಪ್ ಕೇಂದ್ರವನ್ನು ಪ್ರಾರಂಭಿಸಿದ್ದು ರೈತರುಸದುಪಯೋಗ ಪಡೆದುಕೊಳ್ಳ ಬೇಕು ಎಂದು ಹೇಳಿದರು.  

ಪಿಕಾರ್ಡ ಬ್ಯಾಂಕ್ ವ್ಯವಸ್ಥಾಪಕ ಸಂತೋಷ ಅಥರ್ಗಾ ಮಾತನಾಡಿ, ಪಿಕಾರ್ಡ ಬ್ಯಾಂಕ್ ಪಟ್ಟಣದ ಕೇಂದ್ರ ಸ್ಥಾನದಲ್ಲಿದ್ದು ಬಸ್ ನಿಲ್ದಾಣದ ಪಕ್ಕದಲ್ಲಿದೆ. ಈ ಬ್ಯಾಂಕಿನಲ್ಲಿ ರೈತರ ಅನಕೂಲಕ್ಕಾಗಿ ರೈತ ಸೇವಾ ಕೇಂದ್ರ ಕಳೆದ ಮಾರ್ಚ ತಿಂಗಳಲ್ಲಿ ಪ್ರಾರಂಭಿಸಲಾಗಿದೆ. ಈ ಕೇಂದ್ರದಲ್ಲಿ ರೈತರ ಜಮೀನುಗಳ ಮೂಲ ಪಹಣಿ ಉತಾರಿ, ಎಂ.ಆರ್‌., ಇಸಿ ನೀಡಲಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ರೈತರ ಅನಕೂಲಕ್ಕಾಗಿ ಇ-ಸ್ಟಾಂಪ್ ಪ್ರಾರಂಭಿಸಲಾಗಿದೆ. ರೈತರು ಸೇವಾ ಕೇಂದ್ರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. 

ಸಹಕಾರಿ ಧುರಿಣರಾದ ಎಂ.ಎಸ್‌. ಪಾಟೀಲ, ಚಂದ್ರಶೇಖರ ದೇವರೆಡ್ಡಿ, ಡಿ.ಎಸ್‌. ಕಂಟಿಗೊಂಡ, ಬ್ಯಾಂಕಿನ ಹಿರಿಯ ಸದಸ್ಯ ಜಿ.ಆರ್‌. ಪಾಟೀಲ, ಬ್ಯಾಂಕ್ ಅಧಿಕಾರಿಗಳಾದ ಎಲ್‌.ಎಚ್‌. ಕುಲಕರ್ಣಿ, ಎಂ.ಟಿ. ವಂಕಲಕುಂಟಿ,ಾರ್‌.ಎಸ್‌. ನಾರಾಯಣಪೂರ, ಆರ್‌.ಎಂ. ನದಾಫ್, ಪಿಗ್ಮಿ ಸಂಗ್ರಹಗಾರ ಬಿ.ಬಿ. ಅಡಗಲ್ಲ ಸೇರಿದಂತೆ ರೈತರು ಹಾಗೂ ಬ್ಯಾಂಕಿನ ಸಿಬ್ಬಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.